For Quick Alerts
  ALLOW NOTIFICATIONS  
  For Daily Alerts

  ನಿರ್ದೇಶಕನಿಗೆ ಅವಮಾನ: ಸ್ಟಾರ್ ನಟ ಆಗಿದ್ರೆ ಸುಮ್ಮನೆ ಬಿಡುತ್ತಿದ್ರಾ? ಚಂದ್ರಶೇಖರ್ ಅಸಮಾಧಾನ

  By ಫಿಲ್ಮ್ ಡೆಸ್ಕ್
  |

  ಸ್ಯಾಂಡಲ್ ವುಡ್ ನಲ್ಲಿ ಕಳೆದ ಎರು ವಾರದಿಂದ ವಿವಾದಗಳೇ ಸದ್ದು ಮಾಡುತ್ತಿವೆ. ಧ್ರುವ ಸರ್ಜಾ ನಟನೆಯ ಪೊಗರು ಸಿನಿಮಾದ ವಿವಾದ ಒಂದೆಡೆ ಆದರೆ ಮತ್ತೊಂದೆಡೆ ಜಗ್ಗೇಶ್ ಆಡಿಯೋ ವಿವಾದ. ಎರಡು ವಿವಾದಗಳಿಗೆ ತಾರ್ಕಿಕ ಅಂತ್ಯ ಹಾಡಲಾಗಿದೆ. ಆದರೂ ಬೂದಿ ಮುಚ್ಚಿದ ಕೆಂಡವಾಗಿದ್ದು, ಹೊಗೆಯಾಡುತ್ತಲೇ ಇದೆ.

  ಪೊಗರು ಸಿನಿಮಾದ ವಿವಾದ ಈಗ ಮತ್ತೊಂದು ಹಂತಕ್ಕೆ ಹೋಗಿದೆ. ಸಿನಿಮಾದಲ್ಲಿ ಪುರೋಹಿತಶಾಹಿ ವರ್ಗಕ್ಕೆ ಅವಮಾನಿಸಲಾಗಿದೆ. ಚಿತ್ರಗಳಲ್ಲಿ ಬ್ರಾಹ್ಮಣರಿಗೆ ಅವಮಾನ ಮಾಡೋ ದೃಶ್ಯಗಳನ್ನು ಬಲವಂತವಾಗಿ ಸೃಷ್ಟಿಸಲಾಗಿದೆ. ಪೊಗರು ಸಿನಿಮಾದ ವಿವಾದಿತ ದೃಶ್ಯಕ್ಕೆ ಕತ್ತರಿ ಹಾಕಬೇಕು ಎಂದು ಬ್ರಾಹ್ಮಣರು ಕಿಡಿಕಾರಿದರು.

  ಬಳಿಕ ಸಿನಿಮಾತಂಡ ಕ್ಷಮೆ ಕೇಳಿ, ವಿವಾದಿತ ದೃಶ್ಯಕ್ಕೆ ಕತ್ತರಿ ಹಾಕಿದ್ದಾರೆ. ಇದೀಗ ನಿರ್ದೇಶಕ ನಂದ ಕಿಶೋರ್ ಅವರಿಗೆ ಅವಮಾನ ಮಾಡಲಾಗಿದೆ ಎನ್ನುವ ಆರೋಪ ಕೇಳಿ ಬಂದಿದೆ. ವಾಣಿಜ್ಯ ಮಂಡಳಿಗೆ ಸಂದಾನಕ್ಕೆ ಬಂದವರು ಪೊಗರು ಸಿನಿಮಾದ ನಿರ್ದೇಶಕ ನಂದಕಿಶೋರ್ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದಾರೆ, ಕೆಟ್ಟ ಪದಗಳಿಂದ ಬೈಯ್ದಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ.

  ನಿರ್ದೇಶಕನಿಗೆ ಕೆಟ್ಟ ಮಾತುಗಳನ್ನು ಆಡುತ್ತಿದ್ದರು ವಾಣಿಜ್ಯ ಮಂಡಳಿ ಕೇಳಿಸಿಕೊಂಡು ಸೈಲೆಂಟ್ ಆಗಿ ಕುಳಿತಿರುವುದು ಬೇಸರ ತಂದಿದೆ ಎಂದು ಕೆಲವರು ಅಸಮಾಧಾನ ಹೊರಹಾಕಿದ್ದಾರೆ. ಈ ಬಗ್ಗೆ ನಿರ್ದೇಶಕ ಚಂದ್ರಶೇಖರ್ ಮಾತನಾಡಿ, ನಿರ್ದೇಶಕರು ಎಲ್ಲರೂ ಒಟ್ಟಾಗಬೇಕು ಎಂದು ಹೇಳಿದ್ದಾರೆ. ಮುಂದೆ ಓದಿ...

  ನಂದ ಕಿಶೋರ್ ಗೆ ಕ್ಷಮೆ ಕೇಳಬೇಕು

  ನಂದ ಕಿಶೋರ್ ಗೆ ಕ್ಷಮೆ ಕೇಳಬೇಕು

  ನಿರ್ದೇಶಕನ ಬಗ್ಗೆ ಮಾತನಾಡಿದ ಹಾಗೆ ಸ್ಟಾರ್ ನಟರ ಬಗ್ಗೆ ಮಾತನಾಡಿದ್ರೆ ಸುಮ್ಮನೆ ಇರುತ್ತಿದ್ರಾ ಎಂದು ನಿರ್ದೇಶಕ ಚಂದ್ರಶೇಖರ್ ಶ್ರೀವಾತ್ಸವ್ ಪ್ರಶ್ನೆ ಮಾಡಿದ್ದಾರೆ. ವಿಡಿಯೋ ಮೂಲಕ ಅಸಮಾಧಾನ ಹೊರಹಾಕಿರುವ ಚಂದ್ರಶೇಖರ್ ನಂದಕಿಶೋರ್ ಅವರಿಗೆ ಕೆಟ್ಟ ಪದಗಳಿಂದ ಬೈಯ್ದಿದವರು ಕ್ಷಮೆ ಕೇಳಬೇಕೆಂದು ಹೇಳಿದ್ದಾರೆ.

  ಸ್ಟಾರ್ ನಟನಿಗೆ ಹೀಗೆ ಹೇಳಿದ್ರೆ ಸುಮ್ಮನೆ ಇರುತ್ತಿದ್ರಾ?

  ಸ್ಟಾರ್ ನಟನಿಗೆ ಹೀಗೆ ಹೇಳಿದ್ರೆ ಸುಮ್ಮನೆ ಇರುತ್ತಿದ್ರಾ?

  'ವಾಣಿಜ್ಯ ಮಂಡಳಿ ಅವರಿಗೆ ಸಂದಾನದ ಅರ್ಥ ಗೊತ್ತಿದಿಯಾ? ಸಂದಾನಕ್ಕೆ ಬಂದ ರೀತಿ ನನಗೆ ಇಷ್ಟವಾಗಿಲ್ಲ. ಸಂದಾನಕ್ಕೆ ಬಂದವರು ನಿರ್ದೇಶಕರನ್ನು **** ಮಗ ಎಂದು ಬೈಯುತ್ತಿದ್ರೇ ಇಡೀ ವಾಣಿಜ್ಯ ಮಂಡಲಿ ಮೌನವಾಗಿ ಕುಳಿತಿತ್ತು. ಇದು ಸರಿ ಕಾಣುತ್ತಾ. ಇದೇ ಒಬ್ಬ ಸ್ಟಾರ್ ಗೆ ಹೀಗೆ ಮಾತನಾಡಿದ್ದರೆ ನೀವು ಸುಮ್ಮನೆ ಬಿಡುತ್ತಿದ್ರಾ. ನಿರ್ದೇಶಕರಿಗೆ ಹೇಳೋರು ಕೇಳೋರು ಇಲ್ಲ ಅಂತ ಅವರೆಲ್ಲ ಅಷ್ಟು ಕೆಟ್ಟದಾಗಿ ಮಾತನಾಡುತ್ತಿದ್ದರೆ ಬಾಯಿಗೆ ಬೀಗ ಹಾಕಿಕೊಂಡಿದ್ರಾ?' ಎಂದು ಪ್ರಶ್ನೆ ಮಾಡಿದ್ದಾರೆ.

  ನಿಮಗೆ ಚೇಂಬರ್ ನಲ್ಲಿ ಇರಲಿಕ್ಕೆ ಯೋಗ್ಯತೆ ಇದಿಯಾ?

  ನಿಮಗೆ ಚೇಂಬರ್ ನಲ್ಲಿ ಇರಲಿಕ್ಕೆ ಯೋಗ್ಯತೆ ಇದಿಯಾ?

  'ಸಂದಾನಕ್ಕೆ ಬಂದವರು ಏನು ಮಾತನಾಡಬೇಕು, ಪ್ರತಿಭಟನೆ ಮಾಡುವಾಗ ಏನು ಒಂದು ಮಾತು ಬರುತ್ತೆ ಹೋಗುತ್ತೆ ಅದು ಬೇರೆ ವಿಚಾರ. ಸಂದಾನಕ್ಕೆ ಬಂದಿದ್ದು, ನಮ್ಮ ಜಾಗಕ್ಕೆ ಬಂದು ನಮ್ಮ ನಿರ್ದೇಶಕರಿಗೆ ಬಾಯಿಗೆ ಬಂದಹಾಗೆ ಬೈದಿದ್ದಾರೆ ಅಂದರೆ, ನೀವೆಲ್ಲ ಚೇಂಬರ್ ನಲ್ಲಿ ಇರಲಿಕ್ಕೆ ಯೋಗ್ಯತೆ ಇದಿಯಾ?' ಎಂದು ಕಿಡಿಕಾರಿದ್ದಾರೆ.

  ಸೆನ್ಸಾರ್ ಬೋರ್ಡ್ ನಲ್ಲಿರೋರಿಗೆ ಸಂಬಳ ಕೊಡೋದು ಯಾಕೆ?

  ಸೆನ್ಸಾರ್ ಬೋರ್ಡ್ ನಲ್ಲಿರೋರಿಗೆ ಸಂಬಳ ಕೊಡೋದು ಯಾಕೆ?

  'ಸ್ವಾಭಿಮಾನ ಇಲ್ವಾ, ನಿರ್ದೇಶಕ ಅಂದರೆ ಅಮಾಯಕನ. ಆ ಮಾತನ್ನು ಬಳಸಬೇಡಿ ಎಂದು ಹೇಳಬಹುದಿತ್ತು. ಇಬ್ಬರು ಸ್ಟಾರ್ ಗಳ ನಡುವೆ ವಿವಾದ ಆಗದ ಎಲ್ಲರೂ ಮಾತನಾಡುತ್ತೀರಿ. ಆದರೆ ನಿರ್ದೇಶಕನಿಗೆ ಅವಮಾನ ಅದರೆ ಯಾರು ಮಾತಾಡಲ್ಲ. ಯಾರು ನಿರ್ದೇಶಕರು ಅಂತ ಇದ್ದೀರೋ ಎಲ್ಲರೂ ಮಾತನಾಡಬೇಡು. ಸೆನ್ಸಾರ್ ಬೋರ್ಡ್ ಇರೋದು ಯಾಕೆ. ಅವರು ಸಂಬಳ ತೆಗೆದುಕೊಳ್ಳುವುದು ಯಾಕೆ. ಅವರನ್ನು ಮೊದಲು ಕೇಳಬೇಕು.'

  ಸೋಶಿಯಲ್ ಮೀಡಿಯಾ ಮೂಲಕ ಬೇಷರತ್ ಕ್ಷಮೆ ಯಾಚನೆ | Dhruva Sarja | Pogaru | Filmibeat Kannada
  ಫ್ರಂಟ್ ಲೈನ್ ನಿರ್ದೇಶಕರು ಈ ಬಗ್ಗೆ ಧ್ವನಿ ಎತ್ತಬೇಕು

  ಫ್ರಂಟ್ ಲೈನ್ ನಿರ್ದೇಶಕರು ಈ ಬಗ್ಗೆ ಧ್ವನಿ ಎತ್ತಬೇಕು

  ನಿರ್ಮಾಪಕ ಎಷ್ಟು ಮುಖ್ಯನೋ ಅಷ್ಟೆ ನಿರ್ದೇಶಕನು ಮುಖ್ಯ. ತೇರೆಮೇಲೆ ಹಣಬರಲ್ಲ. ನಿರ್ದೇಶಕರ ಯೋಚನೆ ಬರುತ್ತೆ. ಒಬ್ಬ ಸ್ಟಾರ್ ಹುಟ್ಟುವುದು ಸಹ ನಿರ್ದೇಶಕ ನಿಂದ. ಸ್ಟಾರ್ ಗೆ ಹೀಗೆ ಬೈದಿದ್ರೆ ಸುಮ್ಮನೆ ಬಿಡುತ್ತಿದ್ರಾ. ಯಾರು ಕೆಟ್ಟಪದ ಬಳಸಿದ್ದಾರೋ ಅವರು ಚೇಂಬರ್ ಗೆ ಬಂದು ನಂದಕಿಶೋರ್ ಮುಂದೆ ಕ್ಷಮೆ ಕೇಳಬೇಕು. ಆ ದೃಶ್ಯವನ್ನು ಕತ್ತರಿಸಿದ್ದಾರೆ. ಅದೆ ಮಾತನ್ನು ಸಿನಿಮಾದವರು ಬಳಿಸಿದ್ರೆ ಸುಮ್ಮನೆ ಇರುತ್ತಿದ್ರಾ? ಫ್ರಂಟ್ ಲೈನ್ ನಲ್ಲಿ ಇರುವ ನಿರ್ದೇಶಕರು ನಮ್ಮ ಸದಸ್ಯನಿಗೆ ಅವಮಾನ ಆಗಿದೆ ಅಂದರೆ ಧ್ವನಿ ಎತ್ತಿ' ಎಂದು ಅಸಮಾಧಾನ ಹೊರಹಾಕಿದ್ದಾರೆ.

  English summary
  Director Chandrasekhar Srivastava upset over the derogatory remarks on Pogaru Director Nanda Kishore.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X