For Quick Alerts
  ALLOW NOTIFICATIONS  
  For Daily Alerts

  'ರಾಬರ್ಟ್' ಸಿನಿಮಾದಲ್ಲಿ ಇರಲಿದೆ ಚೇತನ್ ಕುಮಾರ್ ಸಾಹಿತ್ಯ

  |

  'ರಾಬರ್ಟ್' ಸಿನಿಮಾ ಟೀಸರ್ ಇತ್ತೀಚಿಗಷ್ಟೆ ಬಿಡುಗಡೆಯಾಗಿ ದೊಡ್ಡ ಪ್ರತಿಕ್ರಿಯೆ ಪಡೆದುಕೊಂಡಿದೆ. ಸಿನಿಮಾದ ಹಾಡುಗಳಿಗಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ.

  ರಾಬರ್ಟ್ ನಿರ್ಮಾಪಕರಿಗೆ ದರ್ಶನ್ ಹೇಳಿದ್ದೇನು? | Darshan | Jeans Price | Filmibeat Kannada

  ನಿರ್ದೇಶಕ ಚೇತನ್ ಕುಮಾರ್ ಸಿನಿಮಾಗೆ ಎರಡು ಹಾಡುಗಳನ್ನು ಬರೆಯುತ್ತಿದ್ದಾರೆ. ಇಂದು ಚೇತನ್ ಹುಟ್ಟುಹಬ್ಬ ಇದ್ದು, ಈ ದಿನವೇ ಅವರು ಸಿನಿಮಾಗೆ ಕೆಲಸ ಮಾಡುತ್ತಿರುವ ವಿಷಯವನ್ನು ತರುಣ್ ಸುಧೀರ್ ಹಂಚಿಕೊಂಡಿದ್ದಾರೆ. 'ರಾಬರ್ಟ್' ಸಿನಿಮಾ ತಂಡದ ಪರವಾಗಿ ಶುಭಾಶಯ ತಿಳಿಸಿದ್ದಾರೆ.

  'ರಾಬರ್ಟ್' ಟೀಸರ್ ಯಶಸ್ಸಿನ ಹಿಂದಿರುವ ಈ ಗೌತಮ್ ರಾಜ್ ಯಾರು?'ರಾಬರ್ಟ್' ಟೀಸರ್ ಯಶಸ್ಸಿನ ಹಿಂದಿರುವ ಈ ಗೌತಮ್ ರಾಜ್ ಯಾರು?

  ಚೇತನ್ ಈ ಹಿಂದೆ ಅನೇಕ ಸೂಪರ್ ಹಿಟ್ ಹಾಡುಗಳನ್ನು ದರ್ಶನ್ ರಿಗೆ ನೀಡಿದ್ದಾರೆ. ಚೇತನ್ ಬರೆದ ಇಂಟ್ರಡಕ್ಷನ್ ಹಾಡುಗಳು ದೊಡ್ಡ ಸದ್ದು ಮಾಡಿವೆ. ಇದೀಗ ಮತ್ತೊಮ್ಮೆ ದರ್ಶನ್ ಸಿನಿಮಾಗಾಗಿ ಚೇತನ್ ಪೆನ್ ಹಿಡಿದಿದ್ದಾರೆ.

  ಅರ್ಜುನ್ ಜನ್ಯ ಸಿನಿಮಾಗೆ ಸಂಗೀತ ಹಾಗೂ ಹಿನ್ನಲೆ ಸಂಗೀತ ನೀಡುತ್ತಿದ್ದಾರೆ. ಚೇತನ್ ಹಾಗೂ ಅರ್ಜುನ್ ಜನ್ಯ ಕಾಂಬಿನೇಶನ್ ಈಗಾಗಲೇ ಬೆಸ್ಟ್ ಎನ್ನುವುದು ಸಾಭೀತಾಗಿದ್ದು, ಈ ಚಿತ್ರದ ಹಾಡುಗಳ ಮೇಲೆ ನಿರೀಕ್ಷೆ ಹೆಚ್ಚಾಗಿದೆ.

  ದರ್ಶನ್ 'ರಾಬರ್ಟ್' ಸಿನಿಮಾದಲ್ಲಿ ವಿ ಹರಿಕೃಷ್ಣ ಇಲ್ಲ ದರ್ಶನ್ 'ರಾಬರ್ಟ್' ಸಿನಿಮಾದಲ್ಲಿ ವಿ ಹರಿಕೃಷ್ಣ ಇಲ್ಲ

  ಉಳಿದಂತೆ, ಆಶಾ ಭಟ್ 'ರಾಬರ್ಟ್' ಸಿನಿಮಾದ ನಾಯಕಿಯಾಗಿದ್ದಾರೆ. ಉಮಾಪತಿ ನಿರ್ಮಾಣ ಮಾಡಿದ್ದಾರೆ. ಸಿನಿಮಾ ಏಪ್ರಿಲ್ 9 ರಂದು ಬಿಡುಗಡೆ ಆಗಲಿದೆ.

  English summary
  Kannada director Chetan Kumar will be waiting two songs for Darshan's 'Roberrt' movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X