'ಜೇಮ್ಸ್' ಸಿನಿಮಾಕ್ಕೆ ಅಪ್ಪು ಧ್ವನಿ ಸಿಗಲು ಕಾರಣರಾದ ಪರಭಾಷಾ ನಟನಿಗೆ ಚೇತನ್ ಧನ್ಯವಾದ

ಪುನೀತ್ ರಾಜ್‌ಕುಮಾರ್ ಪೂರ್ಣ ಪ್ರಮಾಣದ ನಾಯಕ ನಟನಾಗಿ ಅಭಿನಯಿಸಿದ ಕೊನೆಯ ಸಿನಿಮಾ 'ಜೇಮ್ಸ್' ಈಗ ಮತ್ತೆ ಬಿಡುಗಡೆ ಆಗುತ್ತಿದೆ. ಪುನೀತ್ ರಾಜ್‌ಕುಮಾರ್ ಹುಟ್ಟುಹಬ್ಬವಾದ ಮಾರ್ಚ್ 17 ರಂದು ಬಿಡುಗಡೆ ಆಗಿದ್ದ ಸಿನಿಮಾ ದಾಖಲೆಯ ಪ್ರದರ್ಶನ ಕಂಡಿತ್ತು. ಆದರೆ ಒಂದು ತಿಂಗಳ ಅವಧಿಯಲ್ಲಿ ಮತ್ತೆ ಬಿಡುಗಡೆ ಆಗುತ್ತಿದೆ.

ಕಳೆದ ತಿಂಗಳು 'ಜೇಮ್ಸ್' ಬಿಡುಗಡೆ ಆದಾಗ ಪುನೀತ್ ರಾಜ್‌ಕುಮಾರ್ ಪಾತ್ರಕ್ಕೆ ನಟ ಶಿವರಾಜ್ ಕುಮಾರ್ ಧ್ವನಿ ನೀಡಿದ್ದರು. ಆದರೆ ಈ ಬಾರಿ ಮರು ಬಿಡುಗಡೆ ಆಗುತ್ತಿರುವ 'ಜೇಮ್ಸ್' ಸಿನಿಮಾದಲ್ಲಿ ಪುನೀತ್ ರಾಜ್‌ಕುಮಾರ್ ಅವರದ್ದೇ ಧ್ವನಿ ಇರಲಿದೆ.

ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾಹಿತಿ ಹಂಚಿಕೊಂಡಿರುವ 'ಜೇಮ್ಸ್' ಸಿನಿಮಾದ ನಿರ್ದೆಶಕ ಚೇತನ್, ''ಪುನೀತ್ ರಾಜ್‌ಕುಮಾರ್ ಧ್ವನಿ ಕೇಳಿದ ಕೂಡಲೇ ದೇವರ ಧ್ವನಿ ಕೇಳಿದಂತೆ ಭಾಸವಾಯಿತು'' ಎಂದಿದ್ದಾರೆ.

Director Chethan Thanked Actor Shrikanth For Helping To Get Puneeth Rajkumars Voice For James Movie

''ಜೆಮ್ಸ್'ನಲ್ಲಿ ಪುನೀತ್ ರಾಜ್‌ಕುಮಾರ್ ಪಾತ್ರಕ್ಕೆ ಶಿವರಾಜ್ ಕುಮಾರ್ ಧ್ವನಿ ನೀಡಿದ ಬಳಿಕ ಅದೇ ಸಿನಿಮಾದಲ್ಲಿ ನಟಿಸಿರುವ ಮೇಕಾ ಶ್ರೀಕಾಂತ್ ಕರೆ ಮಾಡಿ, ತೆಲುಗು ಚಿತ್ರರಂಗದಲ್ಲಿ ಕೆಲಸ ಮಾಡುತ್ತಿರುವ ಸೌಂಡ್ ಎಂಜಿನಿಯರ್ ಒಬ್ಬರ ಬಗ್ಗೆ ಹೇಳಿ ಹೈದರಾಬಾದ್‌ಗೆ ಬಂದು ಅವರೊಟ್ಟಿಗೆ ಮಾತನಾಡುವಂತೆ ಸೂಚಿಸಿದರು. ಅಂತೆಯೇ ನಾನು ಹೋಗಿ ಮಾತನಾಡಿದೆ. ಆ ನಂತರ ನಾವು ಅಂದುಕೊಂಡಂತೆ ಪುನೀತ್ ಧ್ವನಿ ನಮಗೆ ಸಿಕ್ಕಿತು'' ಎಂದು ತೆಲುಗು ನಟ ಶ್ರೀಕಾಂತ್‌ಗೆ ಧನ್ಯವಾದ ಹೇಳಿದರು ಚೇತನ್.

''ಸೌಂಡ್ ಎಂಜಿನಿಯರ್ ಶ್ರೀನಿವಾಸ್ ರಾವ್ ಹಲವು ವರ್ಷಗಳಿಂದ ಉತ್ತಮ ತಂಡದೊಂದಿಗೆ ಸೌಂಡ್ ಎಂಜಿನಿಯರಿಂಗ್ ಮಾಡುತ್ತಾ ಬಂದಿದ್ದಾರೆ. ಸ್ಟಾರ್ ನಟರ ಧ್ವನಿಗಳನ್ನು ಅವರು ರೆಕಾರ್ಡ್ ಮಾಡಿದ್ದಾರೆ. ಅವರಿಗೆ ನಮ್ಮ ಸಮಸ್ಯೆ, ಆಸೆ ಹೇಳಿಕೊಂಡಾಗ, ಶಿವರಾಜ್ ಕುಮಾರ್ ಅವರು ಸಿನಿಮಾಕ್ಕೆ ನೀಡಿರುವ ಧ್ವನಿ, ಪುನೀತ್ ರಾಜ್‌ಕುಮಾರ್ ಮಾತನಾಡಿರುವ ಮೂವತ್ತು ಗಂಟೆಯ ಆಡಿಯೋ ಕೇಳಿದರು. ಅಂತೆಯೇ ನಾವು ಕನ್ನಡದ ಕೋಟ್ಯಧಿಪತಿ, ಪುನೀತ್ ರಾಜ್‌ಕುಮಾರ್ ಅವರ ಸಂದರ್ಶನದ ವಿಡಿಯೋಗಳು, 'ರಣ ವಿಕ್ರಮ' ಸಿನಿಮಾದ ಆಡಿಯೋಗಳನ್ನು ಕಳಿಸಿದೆವು. ಅವರು ಸತತ ಪ್ರಯತ್ನ ನಡೆಸಿ ಕೊನೆಗೆ ಪುನೀತ್ ರಾಜ್‌ಕುಮಾರ್ ಧ್ವನಿಯಲ್ಲಿ 'ಜೇಮ್ಸ್' ಸಿನಿಮಾದ ಡೈಲಾಗ್‌ಗಳನ್ನು ನಮಗೆ ನೀಡಿದರು'' ಎಂದು ಮಾಹಿತಿ ಹಂಚಿಕೊಂಡರು ಚೇತನ್.

''ಆರು ದಿನಗಳ ಹಿಂದೆ ಕರೆ ಮಾಡಿ ಪುನೀತ್ ರಾಜ್‌ಕುಮಾರ್ ಧ್ವನಿ ದೊರಕಿದೆ ಎಂದು ಹೇಳಿ, ವಾಟ್ಸ್‌ಆಪ್‌ಗೆ ಕೆಲವು ವಿಡಿಯೋ ಕ್ಲಿಪ್ಪಿಂಗ್‌ಗಳನ್ನು ಕಳಿಸಿದರು. ಆ ವಿಡಿಯೋಗಳಲ್ಲಿ ಪುನೀತ್ ರಾಜ್‌ಕುಮಾರ್ ಧ್ವನಿ ಕೇಳಿ ಕಣ್ಣಲ್ಲಿ ನೀರು, ದೇವರ ಧ್ವನಿಯನ್ನೇ ಕೇಳಿದಂತಾಗಿ ರೋಮಾಂಚನವಾಯ್ತು. ನಂತರ ಹೈದರಾಬಾದ್‌ಗೆ ಹೋಗಿ ಮತ್ತೆ ಪುನೀತ್ ರಾಜ್‌ಕುಮಾರ್ ಧ್ವನಿಯಲ್ಲಿ ಸಿನಿಮಾ ನೋಡಿ ಇನ್ನಷ್ಟು ಸಮಾಧಾನ ಪಟ್ಟುಕೊಂಡೆವು'' ಎಂದರು ಚೇತನ್.

''ಇದೀಗ ನಮಗೆ ದೊರೆತಿರುವ ಪುನೀತ್ ರಾಜ್‌ಕುಮಾರ್ ಅವರ ಧ್ವನಿಯನ್ನು ಅಪ್‌ಲೋಡ್ ಮಾಡುತ್ತಿದ್ದೇವೆ. ಇದೇ ತಿಂಗಳ 22ನೇ ತಾರೀಖಿನಿಂದ ಎಲ್ಲ ಚಿತ್ರಮಂದಿರಗಳಲ್ಲಿ ಅಪ್ಪು ಸರ್ ಧ್ವನಿಯಲ್ಲಿಯೇ 'ಜೇಮ್ಸ್' ಸಿನಿಮಾವನ್ನು ವೀಕ್ಷಿಸಬಹುದು'' ಎಂದು ಮಾಹಿತಿ ನೀಡಿದರು ನಿರ್ದೇಶಕ ಚೇತನ್.

More from Filmibeat

English summary
James movie director Chethan said they get Puneeth Rajkumar's voice from sound engineer. He also thanked actor Shrikanth for finding suitable sound engineer to do the job.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X