twitter
    For Quick Alerts
    ALLOW NOTIFICATIONS  
    For Daily Alerts

    ಮುಚ್ಚುತ್ತಿದ್ದ ಸರ್ಕಾರಿ ಶಾಲೆಗೆ ಹೊಸ ರೂಪ: ರಿಷಬ್ ದತ್ತು ಪಡೆದ ಶಾಲೆ ಈಗ ಹೇಗಿದೆ?

    |

    ಸ್ಯಾಂಡಲ್ ವುಡ್ ನ ನಿರ್ದೇಶಕ ಮತ್ತು ನಟ ರಿಷಬ್ ಶೆಟ್ಟಿ ಮುಚ್ಚಿಹೋಗುತ್ತಿದ್ದ ಸರ್ಕಾರಿ ಶಾಲೆಯನ್ನು ದತ್ತು ಪಡೆದಿದ್ದರು. "ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು" ಸಿನಿಮಾ ಮೂಲಕ ಸರ್ಕಾರಿ ಶಾಲೆಯ ದುಸ್ಥಿತಿಯನ್ನು ಸುಂದರವಾಗಿ ಕಟ್ಟಿಕೊಟ್ಟಿದ್ದರು. ಶೆಟ್ಟರ ಸರ್ಕಾರಿ ಶಾಲೆಗೆ ಎಲ್ಲಕಡೆಯಿಂದ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗಿತ್ತು.

    ಸರ್ಕಾರಿ ಶಾಲೆಯಲ್ಲಿ ಚಿತ್ರೀಕರಣ ಮಾಡಿ, ಸಿನಿಮಾ ಸಕ್ಸಸ್ ಆದ ನಂತರ ಸೈಲೆಂಟ್ ಆಗದ ರಿಷಬ್, ಚಿತ್ರೀಕರಣ ಮಾಡಿದ ಶಾಲೆಯನ್ನು ದತ್ತು ಪಡೆದಿದ್ದರು. ಶಾಲೆ ಅಳಿವಿನ ಅಂಚಿನಲ್ಲಿದೆ ಎನ್ನುವ ವಿಚಾರ ಗೊತ್ತಾಗುತ್ತಿದ್ದಂತೆ ಶಾಲೆಗೆ ಮರುಜೀವ ನೀಡಲು ಮುಂದಾಗಿದ್ದರು.

    ರಿಷಬ್ ಶೆಟ್ಟಿ 'ರುದ್ರ ಪ್ರಯಾಗ'ದಲ್ಲಿ ಬಾಲಿವುಡ್ ನಟರಿಷಬ್ ಶೆಟ್ಟಿ 'ರುದ್ರ ಪ್ರಯಾಗ'ದಲ್ಲಿ ಬಾಲಿವುಡ್ ನಟ

    ರಿಷಬ್ ದಕ್ಷಿಣ ಕನ್ನಡ ಜೆಲ್ಲೆಯ ಬಂಟ್ವಾಳ ತಾಲೂಕಿನ ಕೈರಂಗಳ ಶಾಲೆಯಲ್ಲಿ ಚಿತ್ರೀಕರಣ ಮಾಡಿದ್ದರು. ಚಿತ್ರೀಕರಣ ನಂತರ ಆ ಶಾಲೆ ಮುಚ್ಚುವ ಸ್ಥಿಯಲ್ಲಿ ಇದೆ ಎಂದು ತಿಳಿದ ರಿಷಬ್ ದತ್ತು ಪಡೆದಿದ್ದರು. ಈಗ ಆ ಶಾಲೆಯನ್ನು ಮಾದರಿ ಶಾಲೆಯಾಗಿ ರೂಪಿಸಿದ್ದಾರೆ.

    Director Come Actor Rishab Shetty To Save Government School From Shutting Down

    ಚಿತ್ರೀಕರಣ ಸಮಯದಲ್ಲಿ ಶಾಲೆಯಲ್ಲಿ 42 ಮಕ್ಕಳು ಇದ್ದರಂತೆ. ಆ ನಂತರ ಶಾಲೆಯಲ್ಲಿ ಕೇವಲ 17 ಮಕ್ಕಳು ಮಾತ್ರ ಉಳಿದ್ದರು. ಇನ್ನೇನು ಶಾಲೆ ಮುಚ್ಚಿ ಹೋಗುತ್ತಿದೆ ಎನ್ನುವಷ್ಟೊತ್ತಿಗೆ ರಿಷಬ್ ಶಾಲೆಯನ್ನು ಕಾಪಾಡಿ ಉಳಿಸಿಕೊಂಡಿದ್ದಾರೆ.

    ಶಾಲೆಗೆ ಸುಣ್ಣ ಬಣ್ಣ ಮಾಡಿಸಿದ್ದಾರೆ. ಶಾಲೆಯನ್ನು ಸಂಪೂರ್ಣವಾಗಿ ನವೀಕರಿಸಿದ್ದಾರೆ. ಅಲ್ಲದೆ ಸ್ಪೋಕನ್ ಇಂಗ್ಲೀಷ್ ಕ್ಲಾಸ್, ಉತ್ತಮ ಶಿಕ್ಷಕರು ಹೀಗೆ ಸಾಕಷ್ಟು ರೀತಿಯಲ್ಲಿ ಶಾಲೆಯನ್ನು ಬದಲಾಯಿಸಿದ್ದಾರೆ ರಿಷಬ್ ಮತ್ತು ತಂಡ. 17 ಮಕ್ಕಳಿದ್ದ ಶಾಲೆಯಲ್ಲೀಗ 84 ಜನ ವಿದ್ಯಾರ್ಥಿಗಳಿದ್ದಾರೆ. ಇನ್ನು ಎರಡು ವರ್ಷಗಳಲ್ಲಿ ಮಕ್ಕಳ ಸಂಖ್ಯೆ 300ಕ್ಕೆ ಏರಿಕೆಯಾಗುವ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ ರಿಷಬ್.

    Director Come Actor Rishab Shetty To Save Government School From Shutting Down

    ರಿಷಬ್ ನಿರ್ದೇಶನ ಮಾಡಿದ್ದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಸಿನಿಮಾದ ರೀತಿಯಲ್ಲೆ, ನಿಜಜೀವನದಲ್ಲೂ ಮುಚ್ಚಿಹೋಗುತ್ತಿದ್ದ ಸರ್ಕಾರಿ ಶಾಲೆಯನ್ನು ರಕ್ಷಿಸಿ ಹೊಸ ರೂಪ ನೀಡಿದ್ದಾರೆ. ಇದೊಂದೆ ಶಾಲೆಯಲ್ಲ ಕರ್ನಾಟಕದಲ್ಲಿ ಇಂತಹ ಸಾಕಷ್ಟು ಕನ್ನಡ ಮಾಧ್ಯಮದ ಶಾಲೆಗಳು ಅಳಿವಿನ ಅಂಚಿನಲ್ಲಿವೆ. ರಿಷಬ್ ಕನ್ನಡ ಶಾಲೆ ಉಳಿಸಿ ಎನ್ನುವ ಅಭಿಯಾನ ಕೂಡ ಶುರುಮಾಡಿದ್ದಾರೆ.

    English summary
    Director come actor Rishab Shetty to save government school from shutting down
    Sunday, September 22, 2019, 17:19
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X