For Quick Alerts
  ALLOW NOTIFICATIONS  
  For Daily Alerts

  '6ನೇ ಮೈಲಿ' ಸಿನಿಮಾ ನೋಡಿ ನಿರ್ದೇಶಕ ದಯಾಳ್ ಕೊಟ್ಟ ವಿಮರ್ಶೆ ಇದು.!

  By Harshitha
  |

  ಸಂಚಾರಿ ವಿಜಯ್ ಹಾಗೂ ಆರ್.ಜೆ ನೇತ್ರ ಅಭಿನಯದ '6ನೇ ಮೈಲಿ' ಸಿನಿಮಾ ಇಂದು ರಾಜ್ಯಾದ್ಯಂತ ಬಿಡುಗಡೆ ಆಗಿದೆ. ಸಸ್ಪೆನ್ಸ್ ಹಾಗೂ ಥ್ರಿಲ್ಲಿಂಗ್ ಅಂಶಗಳನ್ನು ಒಳಗೊಂಡಿರುವ '6ನೇ ಮೈಲಿ' ಚಿತ್ರವನ್ನ ನಿರ್ದೇಶಕ ದಯಾಳ್ ಪದ್ಮನಾಭನ್ ವೀಕ್ಷಿಸಿದ್ದಾರೆ.

  '6ನೇ ಮೈಲಿ' ಸಿನಿಮಾ ನೋಡಿದ್ಮೇಲೆ ಫೇಸ್ ಬುಕ್ ಅಕೌಂಟ್ ನಲ್ಲಿ ದಯಾಳ್ ಪದ್ಮನಾಭನ್ ತಮ್ಮ ಅನಿಸಿಕೆಯನ್ನು ಹೊರಹಾಕಿದ್ದಾರೆ.

  ''6ನೇ ಮೈಲಿ' ಚಿತ್ರದ ಕಥೆ ಚೆನ್ನಾಗಿದೆ. ಸಂಚಾರಿ ವಿಜಯ್ ಅಂತಹ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಟ, ಆರ್.ಜೆ ನೇತ್ರ, ಆರ್.ಜೆ ಸುಧೇಶ್ ಭಟ್ ಅಭಿನಯ ಉತ್ತಮವಾಗಿ ಮೂಡಿಬಂದಿದೆ. ಬ್ಯಾಕ್ ಗ್ರೌಂಡ್ ಸ್ಕೋರ್ ಬಗ್ಗೆ ಕೆಮ್ಮಂಗಿಲ್ಲ. ಥೀಮ್ ಕೂಡ ಅತ್ಯುತ್ತಮವಾಗಿದೆ. ಮೊದಲಾರ್ಧ ಉಪ್ಪಿಲ್ಲದ ಬಿರಿಯಾನಿ ಎನ್ನಬಹುದು. ಆದ್ರೆ, ದ್ವಿತೀಯಾರ್ಧ ರುಚಿಕರ ಪರ್ಫೆಕ್ಟ್ ಬಿರಿಯಾನಿ. ಈ ರುಚಿಯನ್ನು ಮಿಸ್ ಮಾಡಿಕೊಳ್ಳಬೇಡಿ'' ಎಂದಿದ್ದಾರೆ ನಿರ್ದೇಶಕ ದಯಾಳ್ ಪದ್ಮನಾಭನ್.

  ವಿಮರ್ಶೆ: ಪ್ರಯಾಸ ಆಗದ '6ನೇ ಮೈಲಿ' ಪ್ರಯಾಣವಿಮರ್ಶೆ: ಪ್ರಯಾಸ ಆಗದ '6ನೇ ಮೈಲಿ' ಪ್ರಯಾಣ

  ಅಂದ್ಹಾಗೆ, '6ನೇ ಮೈಲಿ' ಸಿನಿಮಾಗೆ ಆಕ್ಷನ್ ಕಟ್ ಹೇಳಿರುವವರು ನವ ನಿರ್ದೇಶಕ ಸೀನಿ. ಡಾ.ಶೈಲೇಶ್ ಕುಮಾರ್ ಬಂಡವಾಳ ಹಾಕಿರುವ ಈ ಚಿತ್ರಕ್ಕೆ ಸಾಯಿ ಕಿರಣ್ ಸಂಗೀತ ನೀಡಿದ್ದಾರೆ. ರಾಜ್ಯದಾದ್ಯಂತ '6ನೇ ಮೈಲಿ' ಸಿನಿಮಾಗೆ ಉತ್ತಮ ಓಪನ್ನಿಂಗ್ ಸಿಕ್ಕಿದೆ.

  English summary
  Director Dayal Padmanabhan gives his review on Kannada Movie '6ne Maili'.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X