For Quick Alerts
  ALLOW NOTIFICATIONS  
  For Daily Alerts

  'ಶಿವನಂದಿ' ಟೈಟಲ್ ರಿಜಿಸ್ಟರ್ ಮಾಡಿಸಿದ ದಿನಕರ್ ತೂಗುದೀಪ್

  |
  ಶಿವನಂದಿ' ಟೈಟಲ್ ರಿಜಿಸ್ಟರ್ ಮಾಡಿಸಿದ ದಿನಕರ್ ತೂಗುದೀಪ್ | FILMIBEAT KANNADA

  ಶಿವನಂದಿ 'ಯಜಮಾನ' ಸಿನಿಮಾದ ಟೈಟಲ್ ಸಾಂಗ್. ಈ ಸಿನಿಮಾದಲ್ಲಿ ನಾಯಕ ನಟ ದರ್ಶನ್ ತಯಾರು ಮಾಡುವ ಎಣ್ಣೆಯ ಹೆಸರು ಬ್ಯಾಂಡ್ ಶಿವನಂದಿ.

  ಈ ಕಾರಣಗಳಿಂದ 'ಯಜಮಾನ' ಸಿನಿಮಾದಲ್ಲಿ ಶಿವನಂದಿ ಎನ್ನುವ ಹೆಸರು ಬಹಳ ಪ್ರಾಮುಖ್ಯತೆ ಹೊಂದಿತ್ತು. ಈಗ ಈ ಹೆಸರು ಸಿನಿಮಾದ ಟೈಟಲ್ ಆಗುತ್ತಿದೆ. ನಿರ್ದೇಶಕ ದಿನಕರ್ ತೂಗುದೀಪ್ ಈ ಟೈಟಲ್ ಮೇಲೆ ಆಸಕ್ತಿ ತೋರಿದ್ದಾರೆ.

  'ಯಜಮಾನ' ಚಿತ್ರದ ನೆನಪಿನ ಕಾಣಿಕೆ ಪಡೆದ ದರ್ಶನ್ ಪುತ್ರ 'ಯಜಮಾನ' ಚಿತ್ರದ ನೆನಪಿನ ಕಾಣಿಕೆ ಪಡೆದ ದರ್ಶನ್ ಪುತ್ರ

  ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಶಿವನಂದಿ ಟೈಟಲ್ ಅನ್ನು ದಿನಕರ್ ನೊಂದಣಿ ಮಾಡಿಸಿದ್ದಾರೆ. ದರ್ಶನ್ ಸಹೋದರನೇ ಈ ಹೆಸರಿನ ವಾರಸ್ದಾರ ಆಗಿದ್ದಾರೆ. ಟೈಟಲ್ ರಿಜಿಸ್ಟರ್ ಮಾಡಿಸಿದ ಮೇಲೆ ದಿನಕರ್ ಇದೇ ಹೆಸರಿನ ಸಿನಿಮಾ ಕೂಡ ಮಾಡಬಹುದು ಎನ್ನುವ ಕುತೂಹಲ ಹೆಚ್ಚಾಗಿದೆ.

  'ಶಿವನಂದಿ' ಹೆಸರು ಸೂಟ್ ಆಗುವುದು ದರ್ಶನ್ ಗೆ. ಹಾಗಿದ್ದ ಮೇಲೆ ದಿನಕರ್ ಈ ಸಿನಿಮಾವನ್ನು ದರ್ಶನ್ ಅವರಿಗೆನೇ ಮಾಡಬಹುದು. ದರ್ಶನ್ ಗೆ ದಿನಕರ್ ಮತ್ತೆ ಸಿನಿಮಾ ಮಾಡುತ್ತಾರೆ ಎನ್ನುವ ಸುದ್ದಿ ಹಿಂದೆಯಿಂದ ಇದೆ. ಆ ಚಿತ್ರಕ್ಕೆ 'ಸರ್ವಾಂತರ್ಯಾಮಿ' ಎನ್ನುವ ಹೆಸರು ಸಹ ಫಿಕ್ಸ್ ಆಗಿತ್ತು.

  Yajamana Review : ಮನೆಗೆ ಯಜಮಾನ.. ಮಾರ್ಕೆಟ್ ಗೆ ಸುಲ್ತಾನ.. Yajamana Review : ಮನೆಗೆ ಯಜಮಾನ.. ಮಾರ್ಕೆಟ್ ಗೆ ಸುಲ್ತಾನ..

  ಆದರೆ, ಈಗ ಚಿತ್ರದ ಹೆಸರು 'ಶಿವನಂದಿ' ಯಾಗಿ ಬದಲಾಗುತ್ತದೆಯೇ ತಿಳಿದಿಲ್ಲ. ಅಥವಾ ದಿನಕರ್ 'ಶಿವನಂದಿ' ಹೆಸರಿನಲ್ಲಿ ಬೇರೆ ಸಿನಿಮಾ ಮಾಡಬಹುದು. ಏನೇ ಆಗಿದ್ದರೂ ದರ್ಶನ್ ಸಹೋದರನೇ 'ಶಿವನಂದಿ' ಟೈಟಲ್ ಗೆ ಯಜಮಾನನಾಗಿದ್ದಾರೆ.

  English summary
  Kannada director Dinakar Toogudeepa registered Shivanandi titel in KFCC. Shivanandi is Yajamana kannada movie song.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X