For Quick Alerts
  ALLOW NOTIFICATIONS  
  For Daily Alerts

  ಕಾಣದಂತೆ ಮಾಯವಾದರು... ದುನಿಯಾ ಸೂರಿ...

  By Rajendra
  |

  'ಕಡ್ಡಿಪುಡಿ' ಚಿತ್ರದ ನಂತರ ದುನಿಯಾ ಸೂರಿ ಎಲ್ಲೂ ಕಾಣ್ತಿಲ್ಲ. ಸಿನಿಮಾ ಕಾರ್ಯಕ್ರಮಗಳಿಂದಲೂ ಸದಾ ದೂರ ಇರೋ ಸೂರಿ ಏನ್ಮಾಡ್ತಿದ್ದಾರೆ. ಪತ್ರಕರ್ತರ ಕಣ್ಣಿಗಂತೂ ಸ್ವಲ್ಪ ಸಮಯದಿಂದ ಕಾಣಿಸಿಕೊಂಡೇ ಇಲ್ಲ. ಸೂರಿ ಯಾವ ಸಿನಿಮಾ ಮಾಡಿದ್ರೂ ಟೈಮ್ ತಗೊಂಡ್ ಮಾಡ್ತಾರೆ. ಹಾಗೆ ಟೈಮ್ ಕೊಟ್ಟು ಮಾಡ್ತಾರೆ. ಆದ್ರೆ ಇತ್ತೀಚೆಗೆ ಯಾಕೋ ಸೂರಿಯವ್ರ ಟೈಮೇ ಸರಿಯಾಗಿಲ್ಲ ಅನ್ಸುತ್ತೆ.

  2012ರಲ್ಲಿ ಬಂದ ಪುನೀತ್ ಅಭಿನಯದ 'ಅಣ್ಣಾಬಾಂಡ್' ಒಳ್ಳೆ ಸಿನಿಮಾ ಅನ್ನಿಸಿಕೊಳ್ಳದಿದ್ರೂ ಹಣ ಮಾಡಿತು. 'ಕಡ್ಡಿಪುಡಿ' ಒಳ್ಳೆ ಸಿನಿಮಾ ಅನ್ನಿಸಿಕೊಂಡ್ರೂ ಹಣ ಮಾಡಲಿಲ್ಲ. ವರ್ಷಕ್ಕೊಮ್ಮೆ ಎರಡು ಸಿನಿಮಾ ಮಾಡೋ ಸೂರಿ ಸಿನಿಮಾಗಳು ಭಾರೀ ನಿರೀಕ್ಷೆ ಮೂಡಿಸುತ್ತವೆ. ಆದರೆ 'ಕಡ್ಡಿಪುಡಿ'ಯ ನಂತರ ಸೂರಿಯ ಸಿನಿಮಾ ಯಾವುದು ಅಂತ ಇನ್ನೂ ಗೊತ್ತಿಲ್ಲ. ಸದ್ಯಕ್ಕೆ ಸೂರಿ ಕಾಣಿಸ್ತಿಲ್ಲ.

  ಯೋಗರಾಜ್ ಭಟ್ ಜೊತೆ ಬಾಂಬೆ ಸೇರ್ಕೊಂಡ್ರಾ? ಅಲ್ಲೇನಾದ್ರೂ ಕೆಲ್ಸ ಮಾಡ್ತಿದ್ದಾರಾ ಅಂದ್ರೆ ಅದೂ ಡೌಟು. ಇನ್ನು ಸೂರಿ ಯಾವ ಸ್ಟಾರ್ ಗೂ ಕಡಿಮೆಯಿಲ್ಲ. ದುನಿಯಾ ಸಿನಿಮಾ ನಂತರ ಸೂರಿ ಸಿನಿಮಾಗಳಿಗೇ ಒಂದು ಅಭಿಮಾನಿ ವರ್ಗವಿದೆ.

  ಆದರೆ ಸೂರಿ ಮಾತ್ರ 'ಅಣ್ಣಾಬಾಂಡ್' ರೀಮಿಕ್ಸ್ ಸಾಂಗ್ ತರಹ ಕಾಣದಂತೆ ಮಾಯವಾಗಿದ್ದಾರೆ. ಸುಮ್ನೆ ಇದ್ದುಕೊಂಡೇ ಸದ್ದು ಮಾಡೋ ಸೂರಿ ಸದ್ಯದಲ್ಲೇ ಒಂದು ಸಿನಿಮಾ ಅನೌನ್ಸ್ ಮಾಡಿದ್ರೂ ಮಾಡ್ಬಹುದು. ಸೂರಿ ತಮ್ಮ ಮುಂದಿನ ಸಿನಿಮಾ ಬಗ್ಗೆ ರೀಸರ್ಚ್ ಮಾಡ್ತಿರಬಹುದು. ಒಟ್ಟಾರೆ ಸಿನಿಪ್ರಿಯರು ಕೇಳ್ತಿರೋದು ಎಲ್ಹೋದ್ರು ಸೂರಿ ಏನಾದ್ರೂ ಹೇಳ್ರಿ.

  English summary
  After 'Kaddipudi' film director Duniya Soori disappears from Sandalwood. There is no clue about his next project. Where he is gone? What is he doing differently now?

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X