For Quick Alerts
  ALLOW NOTIFICATIONS  
  For Daily Alerts

  ರಿವಿಲ್ ಆಯ್ತು ದುನಿಯಾ ಸೂರಿ-ಡಾಲಿ ಸಿನಿಮಾ ಟೈಟಲ್

  By Pavithra
  |
  ಗೊತ್ತಾಗೋಯ್ತು ಡಾಲಿ-ಸೂರಿ ಸಿನಿಮಾ ಟೈಟಲ್ | Oneindia Kannada

  ದುನಿಯಾ ಸೂರಿ ಟಗರು ಚಿತ್ರದ ನಂತರ ಯಾವ ಸಿನಿಮಾ ಡೈರೆಕ್ಟ್ ಮಾಡುತ್ತಾರೆ ಎನ್ನುವ ಕುತೂಹಲವಿತ್ತು. ಟಗರು ಚಿತ್ರ ನೂರು ದಿನ ಪೂರೈಸುವ ಹಿನ್ನಲೆಯಲ್ಲಿ ಸೂರಿ ಅಭಿಮಾನಿಗಳಿಗೆ ತಮ್ಮ ಮುಂದಿನ ಚಿತ್ರದ ಸುಳಿವು ನೀಡಿದ್ದಾರೆ.

  ದುನಿಯಾ ಸೂನಿ ನಿರ್ದೇಶನದ ಡಾಲಿ ಧನಂಜಯ ಅಭಿನಯದ ಮುಂದಿನ ಸಿನಿಮಾದ ಟೈಟಲ್ ರಿವಿಲ್ ಆಗಿದೆ. ತಮ್ಮ ಚಿತ್ರಕ್ಕೆ 'ಪಾಪ್ ಕಾರ್ನ್ ಮಂಕಿ ಟೈಗರ್' ಎಂದು ಶೀರ್ಷಿಕೆ ಫಿಕ್ಸ್ ಮಾಡಿದ್ದಾರೆ.

  ಟೈಟಲ್ ಕೇಳಿದ ತಕ್ಷಣವೇ ಇದ್ಯಾವ ರೀತಿಯ ಸಿನಿಮಾ ಎನ್ನುವ ಕುತೂಹಲವನ್ನು ಪ್ರೇಕ್ಷಕರ ತಲೆಯಲ್ಲಿ ಬಿಟ್ಟಿದ್ದಾರೆ ನಿರ್ದೇಶಕ ಸೂರಿ. ಧನಂಜಯ ಚಿತ್ರದಲ್ಲಿ ನಾಯಕನಾಗಿ ಆಕ್ಟ್ ಮಾಡುತ್ತಿದ್ದು ಕೆ ಪಿ ಶ್ರೀಕಾಂತ್ ಅವರೇ ಸಿನಿಮಾವನ್ನು ನಿರ್ಮಾಣ ಮಾಡುತ್ತಾರೆ ಎನ್ನುವ ಸುದ್ದಿ ಕೇಳಿ ಬರುತ್ತಿದೆ.

  'ನಂ 1 ಯಾರಿ ವಿತ್ ಶಿವಣ್ಣ' ಕಾರ್ಯಕ್ರಮಕ್ಕೆ ದರ್ಶನ್ ಬರಲೇ ಇಲ್ಲ'ನಂ 1 ಯಾರಿ ವಿತ್ ಶಿವಣ್ಣ' ಕಾರ್ಯಕ್ರಮಕ್ಕೆ ದರ್ಶನ್ ಬರಲೇ ಇಲ್ಲ

  ಟಗರು ಚಿತ್ರದಲ್ಲಿ ಕೆಲಸ ಮಾಡಿದ ಬಹುತೇಕ ತಂತ್ರಜ್ಞರೇ ಇಲ್ಲಿಯೂ ಕೆಲಸ ಮಾಡಲಿದ್ದು ಟಗರು ಚಿತ್ರ ಖ್ಯಾತಿಯ ಮಾಸ್ತಿ ಸಂಭಾಷಣೆಯ ಜವಾಬ್ದಾರಿ ಹೊತ್ತುಕೊಳ್ಳಲಿದ್ದಾರೆ. 'ಪಾಪ್ ಕಾರ್ನ್ ಮಂಕಿ ಟೈಗರ್' ಚಿತ್ರದ ಮೂಲಕ ಶೇಖರ್ ಎಸ್ ಕ್ಯಾಮೆರಾ ಮ್ಯಾನ್ ಆಗಿ ಚಿತ್ರರಂಗಕ್ಕೆ ಕಾಲಿಡಲಿದ್ದಾರೆ.

  ಸದ್ಯ ಟೈಟಲ್ ನಿಂದ ಕುತೂಹಲ ಮೂಡಿಸಿರುವ ನಿರ್ದೇಶಕರು ಟಗರು ನೂರು ದಿನಗಳ ಸಂಭ್ರಮದಲ್ಲಿ ಚಿತ್ರದ ಮತ್ತಷ್ಟು ವಿಚಾರಗಳನ್ನ ಬಿಟ್ಟುಕೊಡಬಹುದು ಎನ್ನುವ ಕುತೂಹಲದಲ್ಲಿದ್ದಾರೆ ಅಭಿಮಾನಿಗಳು. ಒಟ್ಟಾರೆ ಡಾಲಿ ಮತ್ತು ದುನಿಯಾ ಸೂರಿ ಮತ್ತೆ ಒಂದಾಗಿರುವು ಸಿನಿಮಾ ಪ್ರೇಕ್ಷಕರಿಗಂತು ತುಂಬಾ ಖುಷಿಯನ್ನುಂಟು ಮಾಡಿದೆ.

  English summary
  Kannada Director Duniya Soori's next film is titled as 'Popcorn Monkey Tiger'. Kannada Actor Dhananjay is roped into play lead this movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X