Duniya Suri: ದರ್ಶನ್, ಯಶ್ ಜೊತೆ ಸಿನ್ಮಾ ಕಷ್ಟ ಎಂದ ಸೂರಿ, ನೆಕ್ಸ್ಟ್ ಪ್ರಾಜೆಕ್ಟ್ ಬಗ್ಗೆ ಹೇಳಿದ್ದಿಷ್ಟು
ಮೂರು ವರ್ಷಗಳಿಂದ ಸೈಲೆಂಟ್ ಆಗಿದ್ದ ದುನಿಯಾ ಸೂರಿ ಅಂತೂ ಇಂತೂ 'ಬ್ಯಾಡ್ ಮ್ಯಾನರ್ಸ್' ರಿಲೀಸ್‌ಗೆ ರೆಡಿಯಾಗಿದ್ದಾರೆ. ಯೂಟ್ಯೂಬ್ ಸಂದರ್ಶನಗಳಲ್ಲಿ ಮಾತನಾಡಿ ಸಾಕಷ್ಟು ವಿಚಾರಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಅಭಿಷೇಕ್ ಅಂಬರೀಶ್ ನಟನೆಯ ಆಕ್ಷನ್ ಎಂಟರ್‌ಟೈನರ್ 'ಬ್ಯಾಡ್ ಮ್ಯಾನರ್ಸ್' ಭಾರೀ ನಿರೀಕ್ಷೆ ಹುಟ್ಟಾಕ್ಕಿದೆ. ನವೆಂಬರ್ 24ಕ್ಕೆ ಸಿನಿಮಾ ರಿಲೀಸ್ ಆಗಲಿಲ್ಲ.
'ಪಾಪ್ ಕಾರ್ನ್ ಮಂಕಿ ಟೈಗರ್' ಸಿನಿಮಾ ಬಂದೋಗಿ ಮೂರು ವರ್ಷ ಆಗಿದೆ. ಕನ್ನಡ ಚಿತ್ರರಂಗದಲ್ಲಿ ಸ್ಟಾರ್ ನಟರು, ಸ್ಟಾರ್ ನಿರ್ದೇಶಕರು ವರ್ಷಕ್ಕೆ ಎರಡು ಮೂರು ಸಿನಿಮಾ ಮಾಡಬೇಕು ಎನ್ನುವ ಕೂಗು ಕೇಳಿ ಬರುತ್ತಲೇ ಇರುತ್ತದೆ. ಆದರೆ ಸೂರಿ ಕೂಡ ಯಾಕೋ ಸಿನಿಮಾ ಮಾಡುವ ವೇಗ ತಗ್ಗಿಸಿದ್ದಾರೆ. ಈ ಬಗ್ಗೆ ಗೌರೀಶ್ ಅಕ್ಕಿ ಯೂಟ್ಯೂಬ್ ಸಂದರ್ಶನದಲ್ಲಿ ಮಾತನಾಡಿದ್ದಾರೆ. "ದೊಡ್ಡದಾಗಿ ಸಿನಿಮಾ ಮಾಡಬೇಕು ಎಂದಾಗ ಸಮಯ ಹಿಡಿಯುತ್ತದೆ. ಅಷ್ಟು ಸಮಯ ಕೇಳುತ್ತದೆ" ಎಂದು ಸೂರಿ ಹೇಳಿದ್ದಾರೆ.

ಸ್ಟಾರ್ ನಟರ ಜೊತೆ ಸೂರಿ ಸಿನಿಮಾ ಮಾಡಬೇಕು ಎಂದು ಸಿನಿರಸಿಕರು ಕೇಳುತ್ತಲೇ ಇರುತ್ತಾರೆ. ದರ್ಶನ್, ಯಶ್, ಸುದೀಪ್ ಜೊತೆ ಯಾಕೆ ಸಿನಿಮಾ ಮಾಡಿ ಎಂದು ಮನವಿ ಮಾಡುತ್ತಲೇ ಇರುತ್ತಾರೆ. ಈ ಬಗ್ಗೆ ಕೂಡ ಸೂರಿ ಇಂಟ್ರೆಸ್ಟಿಂಗ್ ಸಂಗತಿಗಳನ್ನು ಹಂಚಿಕೊಂಡಿದ್ದಾರೆ. ನಾನು 'ದುನಿಯಾ' ಸಿನಿಮಾ ಮಾಡೋಕೆ ಮುಂಚೆ ಕೂಡ ದರ್ಶನ್ ಸರ್, ಸುದೀಪ್ ಸರ್ ಸಿನಿಮಾಗಳಲ್ಲಿ ಕೆಲಸ ಮಾಡಿದ್ದೆ. ಅವರೊಟ್ಟಿಗೆ ಆತ್ಮೀಯ ಒಡನಾಟ ಇದೆ. ಆದರೆ ಅವರಿಗೆ ದೊಡ್ಡದಾಗಿ ಬರೆಯಬೇಕು. ದೊಡ್ಡ ಸಿನಿಮಾ ಮಾಡಬೇಕು ಅದು ಸದ್ಯಕ್ಕೆ ಆಗುತ್ತಿಲ್ಲ ಎಂದಿದ್ದಾರೆ.
ಶೈಲಜಾ ಮೇಡಂ, ಸುರೇಶ್ ನನಗೆ ಗುರುಗಳು. 'ಯಜಮಾನ', 'ಕ್ರಾಂತಿ' ಸಮಯದಲ್ಲಿ ದರ್ಶನ್ ಸರ್‌ಗೆ ಸಿನಿಮಾ ಮಾಡುವಂತೆ ಕೇಳಿದರು. ಆದರೆ ಮಾಡಿದರೆ ದೊಡ್ಡದಾಗಿ ಮಾಡಬೇಕು, ಅದು ಯಾಕೋ ಆಗುತ್ತಿಲ್ಲ ಎಂದಿದ್ದೆ. ಸುದೀಪ್ ಸರ್ ಜೊತೆಗೂ ಮತ್ತೆ ಕೆಲಸ ಮಾಡಲು ಸಾಧ್ಯವಿಲ್ಲ. ಯಶ್ ಸರ್‌ಗೆ ಸಿನಿಮಾ ಮಾಡೋದು ಕಷ್ಟ. 'ಮಾಸ್ಟರ್ ಪೀಸ್' ಬರುವವರೆಗೂ ಅವರೊಟ್ಟಿಗೆ ಸಿನಿಮಾ ಮಾಡಬಹುದು ಅಂದುಕೊಂಡಿದ್ದೆ. ಆದರೆ 'KGF-2' ಸಿನಿಮಾ ನೋಡಿದಮೇಲೆ ಕಷ್ಟ ಅನ್ನಿಸಿಬಿಡ್ತು. ಅವರಿಗೆ ನನ್ನಿಂದ ಸಿನಿಮಾ ಮಾಡೋಕೆ ಸಾಧ್ಯವಿಲ್ಲ. ಅಷ್ಟು ದೊಡ್ಡದಾಗಿ ಬೆಳೆದಿದ್ದಾರೆ" ಎಂದು ಸೂರಿ ಹೇಳಿದ್ದರು.

ಸೂರಿ ತಮ್ಮ ಮುಂದಿನ ಸಿನಿಮಾ ಬಗ್ಗೆ ಕೂಡ ಇದೇ ಸಂದರ್ಶನದಲ್ಲಿ ಮಾತನಾಡಿದ್ದಾರೆ. "ದುನಿಯಾ ಸಿನಿಮಾದಿಂದಲೂ ನಾನು ಜಯಣ್ಣ ಬ್ಯಾನರ್‌ನಲ್ಲಿ ಕೆಲಸ ಮಾಡಿಲ್ಲ. 'ಪರಮಾತ್ಮ' ಮಾಡಿದಾಗ ಯೋಗರಾಜ್ ಭಟ್ ಸರ್‌ಗೆ ಸಿನ್ಮಾ ಮಾಡಿದ್ದರು. ಅವರ ಬ್ಯಾನರ್‌ಗೆ ನಾನು ವರ್ಕ್ ಮಾಡಿಲ್ಲ ಅನ್ನಿಸ್ತಿತ್ತು. ದುನಿಯಾ ಅವರೇ ರಿಲೀಸ್ ಮಾಡಿಕೊಟ್ಟಿದ್ದು. ಅವರದ್ದೇ ವಿತರಣೆ. 'ಬ್ಯಾಡ್ ಬ್ಯಾನರ್ಸ್' ಬಳಿಕ ಜಯಣ್ಣ ಬ್ಯಾನರ್‌ಗೆ ದೊಡ್ಡ ಸಿನಿಮಾ ಆಗೋದಿದೆ. ದೊಡ್ಡ ಸಿನ್ಮಾ ಮಾಡಿಕೊಡಿ ಎಂದು ಕೇಳಿದ್ದಾರೆ. ವಿರಾಟ್ ಜೊತೆ ಮಾತಾಡಿದ್ದೀವಿ. ಅದು ಸಿನಿಮಾ ದೊಡ್ಡ ಮಟ್ಟದಲ್ಲಿ ಶುರುವಾಗುತ್ತದೆ" ಎಂದು ಸೂರಿ ವಿವರಿಸಿದ್ದಾರೆ.
'ಬ್ಯಾಡ್ ಮ್ಯಾನರ್ಸ್' ವಿಚಾರಕ್ಕೆ ಬಂದರೆ ಇದು ಪಕ್ಕಾ ಸೂರಿ ಸ್ಟೈಲ್ ಕಾಪ್ ಆಕ್ಷನ್ ಥ್ರಿಲ್ಲರ್ ಸಿನಿಮಾ. ಅಭಿಷೇಕ್ ಅಂಬರೀಶ್ ಜೋಡಿಯಾಗಿ ರಚಿತಾ ರಾಮ್ ನಟಿಸಿದ್ದಾರೆ. ಚಿತ್ರದಲ್ಲಿ ರುದ್ರ ಎನ್ನುವ ಖಡಕ್ ಪೊಲೀಸ್ ಆಫೀಸರ್ ಅವತಾರದಲ್ಲಿ ಅಭಿ ಕಾಣಿಸಿಕೊಂಡಿದ್ದಾರೆ. ಚಿತ್ರಕ್ಕೆ ಸುಧೀರ್ ಬಂಡವಾಳ ಹೂಡಿದ್ದಾರೆ. ಈಗಾಗಲೇ ಚಿತ್ರದ ಟೀಸರ್, ಸಾಂಗ್ಸ್ ರಿಲೀಸ್ ಆಗಿ ಸದ್ದು ಮಾಡ್ತಿದೆ. ಶೀಘ್ರದಲ್ಲೇ ಟ್ರೈಲರ್ ರಿಲೀಸ್ ಪ್ಲ್ಯಾನ್ ನಡೀತಿದೆ. ಬಹಳ ದೊಡ್ಡ ಮಟ್ಟದಲ್ಲಿ ಸಿನಿಮಾ ತೆರೆಗಪ್ಪಳಿಸಲಿದೆ.


Click it and Unblock the Notifications










