twitter
    For Quick Alerts
    ALLOW NOTIFICATIONS  
    For Daily Alerts

    'ದೊಡ್ಮನೆ ಹುಡ್ಗ' ಬಗ್ಗೆ ಸೂರಿ ಬೇಸರ: ಕೆಟ್ಟ ಪರಿಸ್ಥಿತಿಯಲ್ಲಿ ಸಿನಿಮಾ ಮಾಡಿದ್ರಂತೆ

    |

    ಚಿತ್ರರಂಗದಲ್ಲಿ ಅನೇಕ ಬಾರಿ ಹಣಕಾಸಿನ ಸಮಸ್ಯೆಗಳು ಒಬ್ಬ ಪ್ರತಿಭಾವಂತ ನಿರ್ದೇಶಕ ಮಾಡುವ ಕೆಲಸವನ್ನು ಬದಲಾಯಿಸಿಬಿಡುತ್ತದೆ. ಹೊಸ ರೀತಿಯ, ತನ್ನ ಕಲ್ಪನೆ ಸಿನಿಮಾ ಮಾಡಬೇಕು ಎನ್ನುವ ನಿರ್ದೇಶಕನೂ ಕೂಡ ಕೆಲವು ಬಾರಿ ಹಣಕಾಸಿನ ಕಾರಣದಿಂದ ಮನಸ್ಸಿಲ್ಲದ ರೀತಿಯ ಸಿನಿಮಾಗಳನ್ನು ಮಾಡಬೇಕಾಗುತ್ತದೆ.

    Recommended Video

    ಹಂಪಿಯಲ್ಲಿ ಜೋರಾಯ್ತು ರಾಕಿಭಾಯ್ ಹವಾ. | Yash | FILMIBEAT KANNADA

    ಅಂತಹ ಪರಿಸ್ಥಿತಿ ನಿರ್ದೇಶಕ ದುನಿಯಾ ಸೂರಿ ಅವರಿಗೂ ಬಂದಿತ್ತು. 'ದುನಿಯಾ', 'ಕೆಂಡಸಂಪಿಗೆ', 'ಕಡ್ಡಿಪುಡಿ'ಯಂತಹ ತಮ್ಮದೆ ಹೊಸ ಸ್ಟೈಲ್ ಸಿನಿಮಾ ಮಾಡಿದ್ದ ಸೂರಿ ಸಹ, ತಮಗೆ ಇಷ್ಟ ಇಲ್ಲದಿದ್ದರೂ ಸಿದ್ಧ ಸೂತ್ರದ ಕಮರ್ಷಿಯಲ್ ಸಿನಿಮಾ ಮಾಡಿದ್ದರು.

    ವಿಮರ್ಶೆ: 'ದೊಡ್ಮನೆ' ಬಿರಿಯಾನಿ ರುಚಿ ಓಕೆ, 'ಪೀಸ್'ಗಳು ಕಮ್ಮಿವಿಮರ್ಶೆ: 'ದೊಡ್ಮನೆ' ಬಿರಿಯಾನಿ ರುಚಿ ಓಕೆ, 'ಪೀಸ್'ಗಳು ಕಮ್ಮಿ

    ಮೂರು ಹಾಡು, ಆರು ಫೈಟ್ ಇರುವ ಸಿನಿಮಾ ಸೂರಿ ಮಾಡುವವರಲ್ಲ. ಆದರೆ, ಆ ರೀತಿಯ ಸಿನಿಮಾ ಸೂರಿ ಖಾತೆಗೆ ಸೇರಿಕೊಂಡಿತ್ತು. ಅದೇ 'ದೊಡ್ಮೆನೆ ಹುಡ್ಗ'. 'ದೊಡ್ಮೆನೆ ಹುಡ್ಗ' ದೊಡ್ಡ ಕೆಲೆಕ್ಷನ್ ಮಾಡಿದೆ, ಕಿರುತೆರೆ ಟಿ ಆರ್ ಪಿ ಯಲ್ಲಿ ದೊಡ್ಡ ದಾಖಲೆ ಮಾಡಿದೆ.

    ಹೀಗೆ, ಸಿನಿಮಾ ಅದೇನೇ ಯಶಸ್ಸು ಪಡೆದರೂ, ಸೂರಿ ಮನಸ್ಸಿಗೆ ಮಾತ್ರ 'ದೊಡ್ಮನೆ ಹುಡ್ಗ' ಹತ್ತಿರ ಆಗಿಲ್ಲ. ಆ ಸಿನಿಮಾ ಸೂರಿಗೆ ಬೇಸರ ಉಂಟು ಮಾಡಿದೆ. ಆ ಕಾರಣವನ್ನು ಅವರೇ ಇತ್ತೀಚಿಗೆ ಪತ್ರಕರ್ತ ಗೌರೀಶ್ ಅಕ್ಕಿ ಸಂದರ್ಶನದಲ್ಲಿ ಹಂಚಿಕೊಂಡಿದ್ದಾರೆ.

    ಸಿನಿಮಾ ಮಾಡುವಾಗಲೇ ಬೋರ್ ಆಗಿತ್ತು

    ಸಿನಿಮಾ ಮಾಡುವಾಗಲೇ ಬೋರ್ ಆಗಿತ್ತು

    'ದೊಡ್ಮನೆ ಹುಡ್ಗ' ಸಿನಿಮಾ ಮಾಡುವಾಗಲೇ ಸೂರಿಗೆ ಬೋರ್ ಆಗಿತಂತೆ. ಸೂರಿ ಮಾತ್ರವಲ್ಲ ಛಾಯಾಗ್ರಾಹಕ ಸತ್ಯ ಹೆಗಡೆ ಕೂಡ ಇದೇ ಮನಸ್ಥಿತಿಯಲ್ಲಿ ಇದ್ದರಂತೆ. ಅದಕ್ಕೆ ಕಾರಣ 'ದೊಡ್ಮನೆ ಹುಡ್ಗ' ನನ್ನ ಶೈಲಿಯ ಸಿನಿಮಾ ಅಲ್ಲ ಎನ್ನುವ ಬೇಸರ ಸೂರಿಗೆ ಇತ್ತು. ಸತ್ಯ ಹೆಗಡೆ ಕೂಡ ಹೊಸತನದ ಹುಡುಕಾಟದಲ್ಲಿ ಇದ್ದರು.

    ಹುಷಾರ್... ಸೂರಿ ಸಿನಿಮಾಗಳ ಹೆಸರಿನಲ್ಲಿ 'ಕಾಗೆ' ಹಾರಿಸ್ತಿದ್ದಾರೆಹುಷಾರ್... ಸೂರಿ ಸಿನಿಮಾಗಳ ಹೆಸರಿನಲ್ಲಿ 'ಕಾಗೆ' ಹಾರಿಸ್ತಿದ್ದಾರೆ

    ಕೆಟ್ಟ ಕಮಿಟ್ಮೆಂಟ್ ಗಾಗಿ ಸಿನಿಮಾ ಮಾಡಿದೆ

    ಕೆಟ್ಟ ಕಮಿಟ್ಮೆಂಟ್ ಗಾಗಿ ಸಿನಿಮಾ ಮಾಡಿದೆ

    ರೆಗ್ಯುಲರ್ ಕಮರ್ಷಿಯಲ್ ಸಿನಿಮಾ ಮಾಡುವುದು ಸೂರಿಗೆ ಇಷ್ಟವಿರಲಿಲ್ಲ. ಆದರೆ, ತಮ್ಮ ಹಣಕಾಸಿನ ಸ್ಥಿತಿಯಿಂದ ಸಿನಿಮಾ ಮಾಡಲೇಬೇಕಾಯಿತು. ''ಕೆಟ್ಟ ಕಮಿಟ್ಮೆಂಟ್ ಗಾಗಿ ಈ ಸಿನಿಮಾ ಒಪ್ಪಿಕೊಂಡೆ. ಕಥೆ ಮಾಡಿ, ಅಪ್ಪು ಸರ್ ಒಪ್ಪಿಸಿ, ಅಂಬರೀಶಣ್ಣನನ್ನು ಇಟ್ಟುಕೊಂಡು ಸಿನಿಮಾ ಮಾಡಿದೆ'' ಎಂದು ಸೂರಿ ಹೇಳಿದ್ದಾರೆ.

    ಸಿನಿಮಾ ನನ್ನ ಕೈ ತಪ್ಪಿತ್ತು

    ಸಿನಿಮಾ ನನ್ನ ಕೈ ತಪ್ಪಿತ್ತು

    ''ಸಿನಿಮಾ ಮುಗಿಯುವ ಹೊತ್ತಿಗೆ ಅದು ನನ್ನ ಕೈ ತಪ್ಪಿತ್ತು. ಈ ಶೈಲಿ ನನ್ನದಲ್ಲ ಅಂತ ಗೊತ್ತಾಗುತ್ತಿತ್ತು. ಅದನ್ನು ನಾನು ಆಗಲೇ ಒಪ್ಪಿಕೊಂಡೆ. ಅಪ್ಪು ಸರ್ ಇದ್ದ ಕಾರಣ ಸಿನಿಮಾ ಹೋಯ್ತು. ಆದರೆ, ನನಗೆ ವೈಯಕ್ತಿಕವಾಗಿ ಆ ಸಿನಿಮಾ ಸಮಾಧಾನ ಆಗಲಿಲ್ಲ.'' ಎಂದು ಸೂರಿ ಬೇಸರ ಹಂಚಿಕೊಂಡಿದ್ದಾರೆ.

    ಅಲ್ಲಿಂದಲೇ ಅರಳಿದ 'ಕೆಂಡಸಂಪಿಗೆ'

    ಅಲ್ಲಿಂದಲೇ ಅರಳಿದ 'ಕೆಂಡಸಂಪಿಗೆ'

    ಸಂದರ್ಶನದಲ್ಲಿ 'ಕೆಂಡಸಂಪಿಗೆ' ಸಿನಿಮಾ ಹುಟ್ಟಿದ ಕಥೆ ತಿಳಿಸುವಾಗ ಈ ಬೇಸರ ಕಥೆಯನ್ನೂ ಸೂರಿ ಹೇಳಬೇಕಾಯಿತು. 'ದೊಡ್ಮೆನೆ ಹುಡ್ಗ' ಚಿತ್ರದ ಬೇಸರದಲ್ಲಿಯೇ ಸೂರಿ ದುಡ್ಡಿನ ಬಗ್ಗೆ ಒಂದಷ್ಟು ವಿಷಯಗಳನ್ನು ಬರೆಯುತ್ತಿದ್ದರಂತೆ. ಆ ವೇಳೆ ಒಂದು ಕೆಂಡಸಂಪಿಗೆ ಮರ ನೋಡಿ ಹುಟ್ಟಿದ ಕಥೆಯೇ 'ಕೆಂಡಸಂಪಿಗೆ' ಸಿನಿಮಾ ಆಗಿದೆ.

    English summary
    Director Duniya Suri unhappy about Dodmane Huduga kannada movie.
    Saturday, January 11, 2020, 19:08
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X