For Quick Alerts
  ALLOW NOTIFICATIONS  
  For Daily Alerts

  'ಅರ್ಜಸ್ಟ್ ಮಾಡ್ಕೊಳ್ಳಿ' ಎಂದ ನಿರ್ದೇಶಕನಿಗೆ ನಟಿ ಕವಿತಾ ತಿರುಗೇಟು

  |

  ಚಿತ್ರರಂಗದಲ್ಲಿ ಆಗಾಗ ಲೈಂಗಿಕ ಕಿರುಕುಳ ಪ್ರಕರಣಗಳು ನಡೆಯುತ್ತಿರುತ್ತದೆ. ಅಲ್ಲದೆ, ಇತ್ತೀಚಿಗಷ್ಟೆ ಮೀ ಟೂ ವಿವಾದ ತಣ್ಣಗಾಗಿದೆ. ಅದರ ನಂತರ ಇದೀಗ ನಟಿಯೊಬ್ಬರು ತನಗೆ ಬಂದ ಅಸಭ್ಯ ಮೆಸೇಜ್ ಬಗ್ಗೆ ಸಿಟ್ಟಿಗೆದಿದ್ದಾರೆ.

  ನಟಿ ಕವಿತಾ ರಾಧೇಶ್ಯಾಮ್, ಕಾಲಿವುಡ್ ಯುವ ನಿರ್ದೇಶಕ ನಿರ್ದೇಶಕ ಗೌತಮ್ ಶಂಕರ್ ಮೇಲೆ ಆರೋಪ ಮಾಡಿದ್ದಾರೆ. 'ಅರ್ಜಸ್ಟ್ ಮಾಡ್ಕೊಳ್ಳಿ' ಎಂದು ಅಸಭ್ಯವಾಗಿ ಮೆಸೇಜ್ ಮಾಡಿದ್ದಾರೆ. 'ಆ ಮಾತಿನ ಅರ್ಥ ಏನು?' ಎಂದು ಫೇಸ್ ಬುಕ್ ನಲ್ಲಿ ಆ ಘಟನೆಯನ್ನು ಹಂಚಿಕೊಂಡಿದ್ದಾರೆ.

  ನಟಿ, ನಿರೂಪಕಿ ಕಾವ್ಯ ಶಾಸ್ತ್ರಿಗೆ ಅಸಭ್ಯ ಸಂದೇಶ ಕಳುಹಿಸಿದವನಿಗೆ ತಕ್ಕ ಶಾಸ್ತಿ ಆಯ್ತು.!

  ಸಿನಿಮಾವೊಂದರ ನಿರ್ಮಾಪಕರಿಗಾಗಿ ನೀವು ಎಲ್ಲ ರೀತಿ 'ಅರ್ಜಸ್ಟ್ ಮಾಡ್ಕೊಳ್ಳಿ'. ಹಾಗಿದ್ದರೆ, ನಿಮಗೆ 8 ಲಕ್ಷ ರೂಪಾಯಿಯನ್ನು ನೀಡುತ್ತಾರೆ ಎಂದು ನಿರ್ದೇಶಕ ಗೌತಮ್ ಶಂಕರ್ ಪೀಡಿಸಿದ್ದಾನಂತೆ. ಗೌತಮ್ ಶಂಕರ್ ಈ ರೀತಿ ಮೆಸೇಜ್ ಮಾಡಿರುವುದನ್ನು ವಾಟ್ಸ್ ಅಪ್ ಸ್ಕ್ರೀನ್ ಶಾಟ್ಸ್ ಮೂಲಕ ಸಾಬೀತು ಮಾಡಿದ್ದಾರೆ.

  ಅಂದಹಾಗೆ, ಈ ಘಟನೆ ನಡೆದಿರುವುದು ಯಾವ ಸಿನಿಮಾಗಾಗಿ ಎನ್ನುವುದನ್ನು ಕವಿತಾ ತಮ್ಮ ಫೇಸ್ ಬುಕ್ ನಲ್ಲಿ ಹೇಳಿಕೊಂಡಿಲ್ಲ. ಕವಿತಾ ಈ ಹಿಂದೆ ನಟಿ ಶ್ರೀ ರೆಡ್ಡಿ ವಿಚಾರದಲ್ಲಿ ದೊಡ್ಡ ಸುದ್ದಿ ಮಾಡಿದ್ದರು. ಅಲ್ಲದೆ, ಕನ್ನಡದ 'ರಾಗಿಣಿ ಐಪಿಎಸ್' ಸೇರಿದಂತೆ ಬೇರೆ ಬೇರೆ ಭಾಷೆಯ ಸಿನಿಮಾಗಳಲ್ಲಿ ನಟಿಸಿದ್ದಾರೆ.

  English summary
  Director Gautham Shankar posted vulgar message on actress Kavya Radheshyam.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X