For Quick Alerts
  ALLOW NOTIFICATIONS  
  For Daily Alerts

  ರಿಷಬ್ ಶೆಟ್ಟಿಯ ಹೊಸ ಸಿನಿಮಾದಿಂದ ಹೊರನಡೆದ ನಿರ್ದೇಶಕ

  |

  ನಟ ರಿಷಬ್ ಶೆಟ್ಟಿ ನಟಿಸುತ್ತಿರುವ ಹೊಸ ಸಿನಿಮಾ 'ಹರಿಕತೆ ಅಲ್ಲ ಗಿರಿಕತೆ' ಸಿನಿಮಾದ ನಿರ್ದೇಶಕ ಗಿರಿಶ್ ಕೃಷ್ಣ ಹಠಾತ್ತನೆ ಚಿತ್ರತಂಡದಿಂದ ಹೊರನಡೆದಿದ್ದಾರೆ.

  ಗಿರಿಶ್ ಕೃಷ್ಣ, ಯಾವುದೇ ಅಸಮಾಧಾನದ ಕಾರಣದಿಂದ ಚಿತ್ರವನ್ನು ತ್ಯಜಿಸಿಲ್ಲ, ಬದಲಿಗೆ ಅವರಿಗೆ ಆರೋಗ್ಯ ಸಮಸ್ಯೆ ಎದುರಾದ ಕಾರಣ ಗಿರಿಶ್ ಅವರು ಸಿನಿಮಾದಿಂದ ದೂರ ಉಳಿದಿದ್ದಾರೆ. ಅವರ ಸ್ಥಾನವನ್ನು ಇಬ್ಬರು ಹೊಸ ನಿರ್ದೇಶಕರು ತುಂಬುತ್ತಿದ್ದಾರೆ.

  ಕರಣ್ ಅನಂತ್ ಮತ್ತು ಅನಿರುದ್ ಮಹೇಶ್ ಅವರುಗಳು ಗಿರಿಶ್ ಕೃಷ್ಣ ಸ್ಥಾನಕ್ಕೆ ಬಂದಿದ್ದು, 'ಹರಿ ಕತೆ ಅಲ್ಲ ಗಿತಿಕತೆ' ಸಿನಿಮಾವನ್ನು ದಡ ತಲುಪಿಸಲಿದ್ದಾರೆ.

  ಗಿರಿಶ್ ಕೃಷ್ಣ, ಸಿನಿಮಾ ಚಿತ್ರೀಕರಣದ ಆರಂಭದಲ್ಲಿಯೇ ಅನಾರೋಗ್ಯಕ್ಕೆ ಒಳಗಾದರಂತೆ, 'ನನ್ನ ಆರೋಗ್ಯ ಸುಧಾರಿಸುವವರೆಗೆ ಕಾಯುತ್ತೇವೆ ಎಂದು ಚಿತ್ರತಂಡ ಹೇಳಿತು, ಆದರೆ ನನಗೆ ಅದು ಇಷ್ಟವಿರಲಿಲ್ಲ, ಹಾಗಾಗಿ ಅವರಿಗೆ ಸಿನಿಮಾ ಚಿತ್ರೀಕರಣ ಮುಂದುವರೆಸುವಂತೆ ಹೇಳಿದ್ದೇನೆ' ಎಂದಿದ್ದಾರೆ ಗಿರಿ ಕೃಷ್ಣ.

  ನನ್ನ ಅಭಿಮಾನಿಗಳು ಎಷ್ಟು ಸುಂದರ ಅಲ್ವಾ ಎಂದ ರಶ್ಮಿಕಾ | Filmibeat Kannada

  ರಿಷಬ್ ಶೆಟ್ಟಿ ಸಹ ಈ ಬಗ್ಗೆ ಮಾತನಾಡಿದ್ದು, 'ನಟ-ನಟಿಯರ ಡೇಟ್ಸ್‌ಗಳು ಬುಕ್ ಆಗಿಬಿಟ್ಟಿದ್ದವು ಹಾಗಾಗಿ ಚಿತ್ರೀಕರಣ ಮುಂದುವರೆಸಲೇ ಬೇಕಾಯಿತು. ಗಿರಿ ಪ್ರತಿಭಾವಂತ ನಿರ್ದೇಶಕ ಅವರೊಂದಿಗೆ ಮುಂದೆ ಮತ್ತೆ ಕೆಲಸ ಮಾಡುವ ಇರಾದೆ ಇದೆ. ಗಿರಿ ಸ್ಥಾನವನ್ನು ಈಗ ಕರಣ್-ಅನಿರುದ್ ತುಂಬಲಿದ್ದಾರೆ ಎಂದಿದ್ದಾರೆ.

  ಕಾಮಿಡಿ-ಡ್ರಾಮಾ ಸಿನಿಮಾ ಆಗಿರುವ ಹರಿ ಕತೆ ಅಲ್ಲ ಗಿರಿ ಕತೆ ಸಿನಿಮಾದಲ್ಲಿ ರಿಷಬ್ ನಾಯಕನಟರಾಗಿ ನಟಿಸುತ್ತಿದ್ದಾರೆ. ಸಿನಿಮಾವನ್ನು ಸಂದೇಶ್ ಪ್ರೊಡಕ್ಷನ್ಸ್ ನಿರ್ಮಿಸುತ್ತಿದೆ.

  English summary
  Director Giri Krishna exits Rishab Shetty's Harikathe Alla Girikathe Project owing health issues.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X