twitter
    For Quick Alerts
    ALLOW NOTIFICATIONS  
    For Daily Alerts

    ನಿರ್ದೇಶಕ ಗಿರೀಶ್ ಕಾಸರವಳ್ಳಿ ಅವರ ಮೆಚ್ಚಿನ ಐದು ಸಿನಿಮಾಗಳು

    |

    ಕನ್ನಡದ ಹಿರಿಯ ಮತ್ತು ಸಂವೇದನಶೀಲ ನಿರ್ದೇಶಕ ಗಿರೀಶ್ ಕಾಸರವಳ್ಳಿ, ಅವರ ಸಿನಿಮಾಗಳಿಗೆ ದೇಶದಾದ್ಯಂತ ಭಿನ್ನ ಅಭಿಮಾನಿ ವರ್ಗವೊಂದಿದೆ.

    Recommended Video

    ಸುಶಾಂತ್ ಗೆಳತಿ ಜೊತೆ 10 ಗಂಟೆ ವಿಚಾರಣೆ ನಡೆಸಿದ ಪೊಲೀಸ್ | Rhea Chakraborty | FILMIBEAT KANNADA

    ಕಲಾತ್ಮಕ ವರ್ಗಕ್ಕೆ ಸೇರಿಸಲಾಗುವ ಸಂವೇದನಾತ್ಮಕ ಸಿನಿಮಾಗಳನ್ನು ನಿರ್ದೇಶಿಸುವ ಗಿರೀಶ್ ಕಾಸರವಳ್ಳಿ ಅವರ ಸಿನಿಮಾಗಳಿಗೆ ಪ್ರಶಸ್ತಿಗಳು ಕಟ್ಟಿಟ್ಟ ಬುತ್ತಿ. ವಿಶ್ವಮಟ್ಟದಲ್ಲಿ ಅವರ ಸಿನಿಮಾಗಳು ಪ್ರದರ್ಶಿತಗೊಳ್ಳುತ್ತವೆ.

    ಜಯಂತ್ ಕಾಯ್ಕಿಣಿ ಕಥೆಗೆ ದೃಶ್ಯ ರೂಪ ನೀಡುತ್ತಿದ್ದಾರೆ ಗಿರೀಶ್ ಕಾಸರವಳ್ಳಿಜಯಂತ್ ಕಾಯ್ಕಿಣಿ ಕಥೆಗೆ ದೃಶ್ಯ ರೂಪ ನೀಡುತ್ತಿದ್ದಾರೆ ಗಿರೀಶ್ ಕಾಸರವಳ್ಳಿ

    ಇಂತಿಪ್ಪ ಗಿರೀಶ್ ಕಾಸರವಳ್ಳಿ ಅವರು ಲಾಕ್‌ಡೌನ್ ಸಮಯದಲ್ಲಿ ಹಲವು ಸಿನಿಮಾಗಳನ್ನು ನೋಡಿದ್ದಾರಂತೆ. ವಿಶ್ವ ಸಿನಿಮಾವನ್ನು ಚೆನ್ನಾಗಿ ಅಭ್ಯಸಿಸಿರುವ ಕಾಸರವಳ್ಳಿ ಅವರು, ತಮ್ಮ ಇಷ್ಟದ ಐದು ಸಿನಿಮಾಗಳ ಬಗ್ಗೆ ಆಂಗ್ಲಪತ್ರಿಕೆಯೊಂದರ ಜೊತೆ ಮಾತನಾಡಿದ್ದಾರೆ. ಸೂಕ್ಷ್ಮ ನಿರ್ದೇಶಕ ಕಾಸರವಳ್ಳಿ ಅವರ ನೆಚ್ಚಿನ ಐದು ಸಿನಿಮಾಗಳು ಇವು.

    ಪತೇರ್ ಪಾಂಚಾಲಿ, ಅಪಾರಿಜಿತೊ, ದಿ ವರ್ಲ್ಡ್ ಆಫ್ ಅಪು

    ಪತೇರ್ ಪಾಂಚಾಲಿ, ಅಪಾರಿಜಿತೊ, ದಿ ವರ್ಲ್ಡ್ ಆಫ್ ಅಪು

    ಸತ್ಯಜಿತ್ ರೇ ಭಾರತದ ಸರ್ವಶ್ರೇಷ್ಟ ಸಿನಿಮಾ ನಿರ್ದೇಶಕ ಅವರ ಪತೇರ್ ಪಾಂಚಾಲಿ ವಿಶ್ವದ ಬೆಸ್ಟ್ ಸಿನಿಮಾಗಳಲ್ಲಿ ಒಂದು. ಗಿರೀಶ್ ಕಾಸರವಳ್ಳಿ ಅವರಿಗೆ ಸತ್ಯಜಿತ್ ರೇ ಅವರ 'ಪತೇರ್ ಪಾಂಚಾಲಿ', 'ಅಪಾರಿಜಿತೊ','ಅಪುರ್ ಸಂಸಾರ್‌' ಮೂರೂ ಸಿನಿಮಾಗಳು ಅಚ್ಚು-ಮೆಚ್ಚಂತೆ. ಈ ಮೂರು ಸಿನಿಮಾಗಳನ್ನು ಒಟ್ಟು ಮಾಡಿ ಅಪು ಟ್ರೆಯಾಲಜಿ ಎಂದು ಕರೆಯುವ ರೂಢಿ ಇದೆ.

    ಅಕಿರಾ ಕುರುಸೋವಾ 'ರೋಶೊಮನ್'

    ಅಕಿರಾ ಕುರುಸೋವಾ 'ರೋಶೊಮನ್'

    ಅಕಿರಾ ಕುರುಸೋವಾ ಅವರ 'ರೋಶೊಮನ್' ಸಿನಿಮಾ ಆಲ್‌ಟೈಮ್ ಬೆಸ್ಟ್ ಸಿನಿಮಾ. ಇದೂ ಸಹ ಕಾಸರವಳ್ಳಿ ಅವರ ಮೆಚ್ಚಿನ ಸಿನಿಮಾ ಅಥವಾ ಮತ್ತೆ-ಮತ್ತೆ ನೋಡುವ ಸಿನಿಮಾಗಳಲ್ಲಿ ಒಂದು. ಕುರುಸೋವಾ ದೃಶ್ಯ ಕಟ್ಟುವುದರಲ್ಲಿ ಮಾಸ್ಟರ್. ಭಾವನೆಗಳನ್ನು ಆತನಷ್ಟು ಚೆನ್ನಾಗಿ ಯಾರೂ ಹಿಡಿದಿಡಲಾರರು ಎನ್ನುತ್ತಾರೆ ಗಿರೀಶ್ ಕಾಸರವಳ್ಳಿ.

    'ಆನ್ ಅಟಮ್ನ್ ಆಫ್ಟರ್‌ನೂನ್'

    'ಆನ್ ಅಟಮ್ನ್ ಆಫ್ಟರ್‌ನೂನ್'

    ಯಾಸಜಿರೊ ಓಜು ನಿರ್ದೇಶನದ ಜಪಾನಿ ಸಿನಿಮಾ ಆನ್ ಆಟಮ್ನ್ ಆಫ್ಟರ್‌ನೂನ್ (An Autumn Afternoon) ಸಿನಿಮಾ ನಿರ್ದೇಶಕ ಕಾಸರವಳ್ಳಿ ಅವರು ಮೆಚ್ಚುವ ಸಿನಿಮಾಗಳಲ್ಲಿ ಒಂದು. ಎರಡನೇ ವಿಶ್ವಯುದ್ಧದ ನಂತರ ಜಪಾನ್ ಸ್ಥಿತಿಯನ್ನು ಸುಂದರವಾಗಿ ನಿರ್ದೇಶಕ ಸಿನಿಮಾದಲ್ಲಿ ಹಿಡಿದಿಟ್ಟಿದ್ದಾನೆ. ಸಿನಿಮಾದ ಪಾತ್ರಗಳು ವಾಸ್ತವಕ್ಕೆ ಬಹಳ ಹತ್ತಿರವಿವೆ.

    'ವೈಲ್ಡ್‌ ಸ್ಟ್ರಾಬೆರ್ರೀಸ್'

    'ವೈಲ್ಡ್‌ ಸ್ಟ್ರಾಬೆರ್ರೀಸ್'

    ಇನ್ಗಮರ್ ಬರ್ಗಮನ್ ನಿರ್ದೇಶನದ 'ವೈಲ್ಡ್ ಸ್ಟ್ರಾಬೆರ್ರೀಸ್' (wild strawberries) ಕಾಸರವಳ್ಳಿ ಅವರ ಮೆಚ್ಚಿನ ಸಿನಿಮಾಗಳಲ್ಲಿ ಒಂದು. ಶಿಕ್ಷಕನೊಬ್ಬ ಪ್ರಶಸ್ತಿ ಸ್ವೀಕರಿಸಲು ಪಯಣಿಸುತ್ತಿರುವಾಗ ಆತನೊಳಗೆ ಆಗುವ ಬೌದ್ಧಿಕ, ಮಾನಸಿಕ ಎಚ್ಚರಗಳನ್ನು ಸಿನಿಮಾ ಹಿಡಿದಿಡುತ್ತದೆ.

    'ಲಾ ನೊಟ್ಟೆ'

    'ಲಾ ನೊಟ್ಟೆ'

    ಮೈಕಲ್‌ಆಂಜೆಲೊ ಅಂಟ್ಯಾನಿಯೋನಿ ನಿರ್ದೇಶನದ 'ಲಾ ನೊಟ್ಟೆ' (la notte) ಗಿರೀಶ್ ಕಾಸರವಳ್ಳಿ ಅವರು ಮತ್ತೆ-ಮತ್ತೆ ನೋಡಲಿಚ್ಛಿಸುವ ಸಿನಿಮಾಗಳಲ್ಲಿ ಒಂದು. 'ಲಾ ನೊಟ್ಟೆ' ಅಥವಾ 'ದಿ ನೈಟ್‌'. ಸಿನಿಮಾ ಸಹ ಒಂದು ರಾತ್ರಿ ಮಾತ್ರವೇ ನಡೆಯುತ್ತದೆ. ಉತ್ತಮ ಬರಹಗಾರ ಹಾಗೂ ಆತನ ಪತ್ನಿಯ ನಡುವೆ ನಡೆವ ಕತೆಯನ್ನು ಸಿನಿಮಾ ಹೊಂದಿದೆ.

    English summary
    Director Girish Kasaravalli gives his most favorite five world movies list.
    Friday, June 19, 2020, 17:31
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X