twitter
    For Quick Alerts
    ALLOW NOTIFICATIONS  
    For Daily Alerts

    ಡಾ.ವಿಷ್ಣುವರ್ಧನ್ ಪ್ರಶಸ್ತಿ ಸ್ವೀಕರಿಸಲಿರುವ ನಿರ್ದೇಶಕ ಗಿರೀಶ್ ಕಾಸರವಳ್ಳಿ

    By Bharath Kumar
    |

    ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ವಿಷ್ಣು ಸೇನಾ ಸಮಿತಿಯ ಸಹಯೋಗದಲ್ಲಿ ಪ್ರತಿ ವರ್ಷ ನೀಡುವ ಅಭಿನವ ಬಾರ್ಗವ ಡಾ.ವಿಷ್ಣುವರ್ಧನ್ ಪ್ರಶಸ್ತಿಯನ್ನ ಈ ಬಾರಿ ಕನ್ನಡದ ಖ್ಯಾತ ನಿರ್ದೇಶಕ ಗಿರೀಶ್ ಕಾಸರವಳ್ಳಿ ಅವರಿಗೆ ನೀಡಲಾಗುತ್ತಿದೆ.

    ಇಂದು ಸಂಜೆ (ಅಕ್ಟೋಬರ್ 6) 5.30ಕ್ಕೆ ಚಾಮರಾಜಪೇಟೆಯಲ್ಲಿರುವ ಕನ್ನಡ ಸಾಹಿತ್ಯ ಪರಿಷತ್ತು ಕಚೇರಿಯ ಸಭಾಂಗಣದಲ್ಲಿ ಕಾರ್ಯಕ್ರಮ ನಡೆಯಲಿದ್ದು, ಲೋಕೋಪಯೋಗಿ ಸಚಿವ ಹೆಚ್.ಸಿ. ಮಹದೇವಪ್ಪ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.

    Director Girish Kasaravalli's Will Honor Dr Vishnuverden Awrad

    ಶ್ರೀ ಮನು ಬಳಿಗಾರ್ ಅವರ ಅಧ್ಯಕ್ಷತೆಯಲ್ಲಿ ಆಯ್ಕೆ ಸಮಿತಿ ಸದಸ್ಯರಾದ ಗಂಗಾಧರ್ ಮೊದಲಿಯಾರ್, ವ.ಚ.ಚನ್ನೇಗೌಡ್ರು, ಮಲ್ಲಿಕಾರ್ಜುನಪ್ಪ, ರಾಜಶೇಖರ್ ಹತಗುಂದಿ, BN Paraddi ಮತ್ತು ವಿಷ್ಣು ಸೇನಾ ಸಮಿತಿ ಅಧ್ಯಕ್ಷ ವೀರಕಪುತ್ರ ಶ್ರೀನಿವಾಸ ಅವರು ಸೇರಿ ಗಿರೀಶ್ ಕಾಸರವಳ್ಳಿ ಅವರನ್ನ ಆಯ್ಕೆ ಮಾಡಲಾಗಿತ್ತು.

    Director Girish Kasaravalli's Will Honor Dr Vishnuverden Awrad

    ಹಿರಿಯ ನಟಿ ಲೀಲಾವತಿಗೆ ಡಾ.ವಿಷ್ಣುವರ್ಧನ್ ಪ್ರಶಸ್ತಿ ಹಿರಿಯ ನಟಿ ಲೀಲಾವತಿಗೆ ಡಾ.ವಿಷ್ಣುವರ್ಧನ್ ಪ್ರಶಸ್ತಿ

    ಅಂದ್ಹಾಗೆ, 1977 ರಲ್ಲಿ ಗಿರೀಶ್ ಕಾಸರವಳ್ಳಿ ಅವರ ಚೊಚ್ಚಲ ನಿರ್ದೇಶನದ 'ಘಟಶ್ರಾದ್ಧ' ಚಿತ್ರ ಪ್ರತಿಷ್ಠಿತಿ 'ಸ್ವರ್ಣ ಕಮಲ' ಪ್ರಶಸ್ತಿ ಗೆದ್ದಿತ್ತು. ಪ್ರಥಮ ಚಿತ್ರಕ್ಕೆ ಸ್ವರ್ಣ ಕಮಲ ಪಡೆದ ನಂತರ 1986ರಲ್ಲಿ 'ತಬರನ ಕಥೆ'ಗೆ, 1997ರಲ್ಲಿ 'ತಾಯಿ ಸಾಹೇಬ' ಸಿನಿಮಾಕ್ಕೆ ಮತ್ತೆ 2001ರಲ್ಲಿ 'ದ್ವೀಪ' ಸಿನಿಮಾಕ್ಕೆ ಸ್ವರ್ಣ ಕಮಲ ಪ್ರಶಸ್ತಿ ಪಡೆದು ಅದ್ವಿತೀಯ ಸಾಧನೆ ಮಾಡಿದವರು ಗಿರೀಶ್‌ ಕಾಸರವಳ್ಳಿ.

    Director Girish Kasaravalli's Will Honor Dr Vishnuverden Awrad

    ಅಷ್ಟೇ ಅಲ್ಲದೇ, ಕಾಸರವಳ್ಳಿ ಅವರು 'ಗುಲಾಬಿ ಟಾಕೀಸ್', 'ಕೊರ್ಮಾವತಾರ, 'ಕನಸೆಂಬ ಕುದುರೆಯನೇರಿ' ಚಿತ್ರಗಳಿಗೂ ರಾಷ್ಟ್ರ ಪ್ರಶಸ್ತಿ ದೊರತಿದೆ. ಕೇವಲ ರಾಜ್ಯಪ್ರಶಸ್ತಿ ಮಾತ್ರವಲ್ಲದೇ ಕಾಸರವಳ್ಳಿ ಅವರ ಬಹುತೇಕ ಚಿತ್ರಗಳಿಗೆ ರಾಜ್ಯಪ್ರಶಸ್ತಿ ಕೂಡ ಲಭಿಸಿದೆ.

    ಕಳೆದ ನಾಲ್ಕು ವರ್ಷಗಳಿಂದ ಕನ್ನಡ ಸಾಹಿತ್ಯ ಪರಿಷತ್ ಡಾ. ವಿಷ್ಣುವರ್ಧನ್ ಅವರ ಹೆಸರಿನಲ್ಲಿ ಪ್ರಶಸ್ತಿಯನ್ನ ನೀಡುತ್ತಿದ್ದು, ಮೊದಲ ವರ್ಷ ಎಸ್.ಪಿ ಬಾಲಸುಬ್ರಮಣ್ಯಂರವರಿಗೆ ಹಾಗೂ ಎರಡನೇ ವರ್ಷ ರೆಬಲ್ ಸ್ಟಾರ್ ಡಾ.ಅಂಬರೀಶ್ ರವರಿಗೆ ಮೂರನೇ ವರ್ಷ ಲೀಲಾವತಿಯವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. ಈಗ ನಿರ್ದೇಶಕ ಗಿರೀಶ್ ಕಾಸರವಳ್ಳಿ ಅವರಿಗೆ ವಿಷ್ಣುವರ್ಧನ್ ಪ್ರಶಸ್ತಿ ನೀಡಲಾಗುತ್ತಿದೆ.

    English summary
    Director Girish Kasaravalli To Honor 4th Dr Vishnuverden Awrad From Kannada Sahithya Parishath With Vishnu Sena Samithi.
    Friday, October 6, 2017, 10:25
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X