twitter
    For Quick Alerts
    ALLOW NOTIFICATIONS  
    For Daily Alerts

    ನಟನೆ-ನಿರ್ದೇಶನ-ಸಂಕಲನ ತರಗತಿಗಳನ್ನು ಪುನರಾರಂಭಿಸಿದ 'ಜಿ ಅಕಾಡೆಮಿ'

    |

    ಕೊರೊನಾ ವೈರಸ್ ಲಾಕ್‌ಡೌನ್‌ನಿಂದ ಸ್ಥಗಿತಗೊಂಡಿದ್ದ ಜಿ ಅಕಾಡೆಮಿಯ ತರಗತಿಗಳು ಮತ್ತೆ ಪುನರಾರಂಭವಾಗಿದೆ. ಆಗಸ್ಟ್ 17ನೇ ತಾರೀಖಿನಿಂದ ತರಗತಿಗಳು ಶುರುವಾಗಿದ್ದು, ಆಸಕ್ತ ವಿದ್ಯಾರ್ಥಿಗಳು ದಾಖಲಾತಿ ಪಡೆಯಬಹುದು.

    Recommended Video

    ಕೊನೆಗೂ CCB ಪೋಲೀಸರ ಕೈಗೆ ತಗಲಾಕೊಂಡ Sanjjanaa Galrani | Filmibeat Kannada

    'ರಾಜಾಹುಲಿ' ಖ್ಯಾತಿಯ ನಿರ್ದೇಶಕ ಗುರುದೇಶಪಾಂಡೆ ಜಿ ಅಕಾಡೆಮಿಯನ್ನು ಸ್ಥಾಪಿಸಿದ್ದು, ಕನ್ನಡದ ಖ್ಯಾತ ನಿರ್ದೇಶಕ, ತಂತ್ರಜ್ಞರಿಂದ ಮಾರ್ಗದರ್ಶನ ಕೊಡಿಸುತ್ತಿದ್ದಾರೆ. ನಟನೆ, ನಿರ್ದೇಶನ, ಸಂಕಲನ ಕಲಿಯುವ ಆಸಕ್ತಿ ಇರುವ ವಿದ್ಯಾರ್ಥಿಗಳಿಗೆ ಅನುಭವಿ ಸಿನಿಮಾ ಮೇಕರ್ಸ್ ಪಾಠ ಮಾಡುತ್ತಿದ್ದಾರೆ.

    ಸುನಿಲ್ ಕುಮಾರ್ ದೇಸಾಯಿ, ದಯಾಳ್ ಪದ್ಮನಾಭನ್, ರಾಘು ಶಿವಮೊಗ್ಗ, ಮೌನೇಶ್ ಬಡಿಗೇರ್, ಬಿಎಂ ಗಿರಿರಾಜ್, ಭರ್ಜರಿ ಚೇತನ್ ಕುಮಾರ್, ರಾಜ್ಯ ಪ್ರಶಸ್ತಿ ವಿಜೇತರಾದ ಸಂಚಾರಿ ವಿಜಯ್, ಸಂಕಲನಕಾರರ ಆದಂತಹ ಸುರೇಶ್ ಅರಸ್, ಕೆಂಪರಾಜು, ದೀಪಕ್, ಖ್ಯಾತ ಡ್ಯಾನ್ಸ್ ಮಾಸ್ಟರ್ ಆದಂತಹ ಮುರಳಿ ಮಾಸ್ಟರ್, ಮತ್ತು ಸ್ಟಂಟ್ ಮಾಸ್ಟರ್ ಡಿಫರೆಂಟ್ ಡ್ಯಾನಿ, ಖ್ಯಾತ ಮ್ಯೂಸಿಕ್ ಡೈರೆಕ್ಟರ್ ಆದಂತಹ ಮಣಿಕಾಂತ್ ಕದ್ರಿ, ಶ್ರೀಧರ್ ವಿ ಸಂಭ್ರಮ್ ಸೇರಿದಂತೆ ಹಲವರು ಜಿ ಅಕಾಡೆಮಿಯ ಸದಸ್ಯರಾಗಿದ್ದಾರೆ.

    Director Guru Deshpandes G Academy start classes with new session

    ಇದೀಗ, ಜಿ ಅಕಾಡೆಮಿಯ ಹೊಸ ಸದಸ್ಯರಾಗಿ ಖ್ಯಾತ ನಿರ್ದೇಶಕರಾದ ಶಶಾಂಕ್ ಮತ್ತು ಪವನ್ ಒಡೆಯರ್ ಸಹ ಸೇರ್ಪಡೆಯಾಗಿದ್ದು, ವಿದ್ಯಾರ್ಥಿಗಳಿಗೆ ಚಲನಚಿತ್ರ ನಟನೆ-ನಿರ್ದೇಶನ-ಸಂಕಲನ ಕುರಿತಾದ ತರಗತಿಗಳನ್ನು ನಡೆಸಿಕೊಡಲಿದ್ದಾರೆ.

    Director Guru Deshpandes G Academy start classes with new session

    ಕೊರೊನಾ ವೈರಸ್‌ಗೆ ಸಂಬಂಧಿಸಿದಂತೆ ಜಿ ಅಕಾಡೆಮಿ ಸಕಲ ಮುಂಜಾಗ್ರತಾ ಕ್ರಮವನ್ನು ಕೈಗೊಂಡಿದೆ. ಸಂಪೂರ್ಣವಾಗಿ ಕಚೇರಿಯ ಹಾಗೂ ತರಗತಿಗಳನ್ನು ಸ್ಯಾನಿಟೈಸರ್ ನಿಂದ ಸ್ವಚ್ಛಗೊಳಿಸಿದೆ. ಮಾಸ್ಕ್ ಕಡ್ಡಾಯ ಮಾಡಿದೆ, ಸಾಮಾಜಿಕ ಅಂತರವನ್ನು ಸಹ ಕಾಯ್ದುಕೊಂಡು ಕಾರ್ಯನಿರ್ವಹಿಸುತ್ತಿದೆ.

    ಇದರ ಬಗ್ಗೆ ಮತ್ತಷ್ಟು ಮಾಹಿತಿ ತಿಳಿಯಲು ಸಂಪರ್ಕಿಸಿ 9900777222/9900195195

    English summary
    Director Guru Deshpande S "G Academy" Institute of cinema and entertainment starts classes from august 17th with new session.
    Tuesday, September 8, 2020, 11:09
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X