ಪತಿವ್ರತೆ ಅಂತ ಸಾಬೀತು ಮಾಡೋಕೆ 'ಮೀಟೂ': ಗುರುಪ್ರಸಾದ್ ಫೈರ್.!
ಸ್ಯಾಂಡಲ್ ವುಡ್ ನಲ್ಲಿ ಮೀಟೂ ಅಭಿಯಾನ ದೊಡ್ಡ ಸಂಚಲನ ಸೃಷ್ಟಿಸಿದೆ. ಶ್ರುತಿ ಹರಿಹರನ್, ಸಂಗೀತಾ ಭಟ್ ಮತ್ತು ಸಂಜನಾ ಗಲ್ರಾನಿ ಅವರ ಆರೋಪಗಳು ಕನ್ನಡ ಚಿತ್ರರಂಗದ ಬಿರುಗಾಳಿ ಎಬ್ಬಿಸಿದೆ.
ಅದರಲ್ಲೂ ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ ವಿರುದ್ಧ ಶ್ರುತಿ ಹರಿಹರನ್ ಮಾಡಿರುವ ಆರೋಪಗಳು ಈಗ ನ್ಯಾಯಾಲಯದಲ್ಲಿದ್ದು, ಪ್ರಕರಣ ತೀವ್ರ ಗಂಭೀರ ಸ್ವರೂಪ ಪಡೆದುಕೊಂಡಿದೆ.
ಹೀಗಿರುವಾಗ, 'ಮಠ' ಖ್ಯಾತಿಯ ನಿರ್ದೇಶಕ ಗುರು ಪ್ರಸಾದ್ ಮೀಟೂ ಅಭಿಯಾನದ ಬಗ್ಗೆ ತಮ್ಮ ಅಭಿಪ್ರಾಯ ಹೊರಹಾಕಿದ್ದಾರೆ. ತಾವು ಪತಿವ್ರತೆಗಳು ಎಂದು ಪ್ರೂವ್ ಮಾಡೋಕೆ ಈ ಮೀಟೂ ಅಭಿಯಾನವನ್ನ ಬಳಸಿಕೊಳ್ತಿದ್ದಾರೆ ಎಂದು ನೇರವಾದ ಆರೋಪ ಮಾಡಿದ್ದಾರೆ. ಈ ಆರೋಪಗಳ ಬಗ್ಗೆ ಗುರುಪ್ರಸಾದ್ ಹಲವು ಅನುಮಾನಗಳನ್ನ ಕೂಡ ವ್ಯಕ್ತಪಡಿಸಿದ್ದಾರೆ. ಅಷ್ಟಕ್ಕೂ, ಗುರು ಪ್ರಸಾದ್ ಏನಂದ್ರು.? ಮುಂದೆ ಓದಿ....

ಸಂಗೀತಾ ಭಟ್ ವಿಷಕನ್ಯೆ
ಸಂಗೀತಾ ಮೀಟೂ ಆರೋಪದ ಬಗ್ಗೆ ಮಾತನಾಡಿದ ಗುರುಪ್ರಸಾದ್ 'ನನ್ನ ಹೆಸರು ಆಕೆ ಹೇಳಿಲ್ಲ ಆದರೂ ಯಾಕೆ ನನಗೆ ಈ ಪ್ರಶ್ನೆ. ಅವಳು ವಿಷಕನ್ಯೆ ಅವಳನ್ನು ನಾನು ಗೆಳತಿ ಅಂತ ಹೇಳ್ತೀನಿ. ಅವಳನ್ನು ತಂಗಿಯಾಗಿ ನೋಡಲ್ಲ ಯಾಕೆ ಅಂದ್ರೆ ನನ್ನ ತಂಗಿಯ ಬೆನ್ನು ನಾನು ಸಿನಿಮಾದಲ್ಲಿ ತೋರಿಸಲ್ಲ. ಅವಳು ಸಿನಿಮಾದಲ್ಲಿ ಬೆನ್ನು ತೋರಿಸಲು ಬಲವಂತ ಮಾಡಿದ್ದಳು. ಅದಕ್ಕೆ ಮೇಕಪ್ ಕಾಸ್ಟ್ಯೂಮ್ ಹಾಕಿದ್ದು ನನ್ನ ಮಗಳು ಹಾಗೂ ನನ್ನ ಹೆಂಡತಿ. ಇಂತವೆಲ್ಲಾ ಬರುತ್ತೆ ಅಂತಲೇ ಅಂತ ಸನ್ನಿವೇಶ ಇದ್ದಾಗ ನನ್ನ ಮನೆಯವರನ್ನ ಶೂಟಿಂಗ್ ಮುಗಿಯವರೆಗೂ ಜೊತೆಯಲ್ಲೇ ಇಟ್ಟುಕೊಂಡಿದ್ದೆ' ಎಂದು ಹೇಳಿದ್ದಾರೆ.

ಯಾರನ್ನ ಬೇಕಾದರೂ ಹೀರೋಯಿನ್ ಮಾಡ್ತೀನಿ
'ನಾನು ಅತ್ಯಂತ ಸುಂದರಿಯರನ್ನ ನೋಡಿದ್ದೇನೆ ಅವರ ಜೊತೆಯಲ್ಲಿ ಮಲಗಿಲ್ಲ ಆದರೆ ನಾನು ರಸಿಕ. ಒಂದು ಹೆಣ್ಣಿನ ಸೌಂದರ್ಯ ಸವಿತೀನಿ ಅಂದ್ರೆ ನಾನು ಗಂಡಸು ಮಲಗಿದರೆ ಮಾತ್ರ ಗಂಡಸಲ್ಲ. ಬೀದಿಲಿ ಹೋಗೋ ಒಬ್ಬ ಸುಂದರ ಹುಡುಗಿಯನ್ನ ಕರೆತಂದು ಹೀರೋಯಿನ್ ಮಾಡ್ತೀನಿ' ಎಂದರು.

ಪತಿವ್ರತೆ ಎಂದು ಸಾಬೀತು ಮಾಡಲು
'ಮೀಟು ಅಭಿಯಾನ ಒಳ್ಳೆಯದು ಯಾರಿಗೆ ಆಗಲಿ ಆ ತರಹದ ಕಿರುಕುಳವಾದ ಆಗಲೇ ಅದರ ಬಗ್ಗೆ ಖಂಡಿಸಬೇಕು. ಆಮೇಲೆ ಯಾವಾಗಲೋ ಮಾತಾಡೋದು ತಪ್ಪು. ಎಲ್ಲರೂ ಕೆಟ್ಟವರಲ್ಲ. ಕೆಲವರು ತಮ್ಮ ಅತ್ತೆ, ಮಾವ ಕುಟುಂಬದಲ್ಲಿ ತಾನು ಪತಿವ್ರತೆ ಎಂದು ಸಾಬೀತು ಪಡಿಸಿಕೊಳ್ಳಲು ಹಾಗೂ ತನ್ನ ಗಂಡನಿಗೆ ತನಗೆ ಅಂತ ದೊಡ್ಡ ಸ್ಟಾರ್ ಕರೆದಿದ್ದ, ಆದರೂ ನಾನು ನಿನಗೆ ಸಿಕ್ಕಿದ್ದೀನಿ ಸರಿಯಾಗಿ ನೋಡ್ಕೋ ಅನ್ನೋಕ್ಕಾಗಿ ಹೀಗೆ ಮೀಟು ಹೆಸರಲ್ಲಿ ಕೆಲವರ ಮಾನ ಹರಾಜು ಹಾಕೋ ಕೆಲಸ ಮಾಡ್ತಿದ್ದಾರೆ' ಎಂದು ಕಠಿಣವಾಗಿ ಮಾತಾಡಿದರು.

ಸನ್ನಿ ಲಿಯೋನ್ ಬಗ್ಗೆ ಗೌರವ
'ನಾನು ಅತ್ಯಂತ ಗೌರವಿಸುವ ಹೆಣ್ಣು ಸನ್ನಿ ಲಿಯೋನ್. ಯಾಕಂದರೆ ಅವಳು ತನ್ನ ವೃತ್ತಿಗೆ ಗೌರವ ಸಲ್ಲಿಸಿ ತನ್ನ ಕೆಲಸ ಏನಿದೆಯೋ ಅದರ ಬಗ್ಗೆ ಗಮನ ಹರಿಸಿ ಮುಂದೆ ಹೋಗುತ್ತಿದ್ದಾಳೆ' ಎಂದು ಮಾಜಿ ನೀಲಿತಾರೆ ಸನ್ನಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಮೀಟೂ ಬಗ್ಗೆ ಸಿನಿಮಾ.?
ಇಷ್ಟೆಲ್ಲಾ ಮಾತನಾಡಿದ ಗುರು ಪ್ರಸಾದ್ 'ತಮ್ಮನ್ನು ಮೀಟು ವಿಚಾರದಲ್ಲಿ ಎಳೆದು ತರಲಾಗುತ್ತಿದೆ. ಮುಂದೆ ಇದನ್ನೇ ಕತೆಯಾಗಿಟ್ಟುಕೊಂಡು ಚಿತ್ರ ಮಾಡಲಿದ್ದೇನೆ ಎಂದ ಗುರು ಪ್ರಸಾದ್ ಚಿತ್ರಕ್ಕೆ ನಾಯಕ ನಾನೇ' ಎಂದು ಹೇಳುವ ಮೂಲಕ ಮತ್ತಷ್ಟು ಚರ್ಚೆಗೆ ಕಾರಣರಾದರು.


Click it and Unblock the Notifications











