'ಅಂಬಿ ನಿಂಗೆ ವಯಸ್ಸಾಯ್ತೋ' ಆಡಿಯೋ ಬಗ್ಗೆ ನಿರ್ದೇಶಕರ ಮಾತು

By Naveen

Recommended Video

ಈ ಕಾರಣಕ್ಕಾ ಅಂಬಿ ಆಡಿಯೋ ಲಾಂಚ್ ಲೇಟ್ ಆಗ್ತಿರೋದು..? | Filmibeat Kannada

ನಟ ಅಂಬರೀಶ್ ಅವರ 'ಅಂಬಿ ನಿಂಗೆ ವಯಸ್ಸಾಯ್ತೋ' ಸಿನಿಮಾ ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿದೆ. ಅದರಲ್ಲಿಯೂ ಸಿನಿಮಾದ ಹಾಡುಗಳು ಹೇಗಿರುತ್ತದೆ ಎಂಬ ಕುತೂಹಲ ಅಭಿಮಾನಿಗಳಲ್ಲಿ ಇದೆ. ಆದರೆ, ಚಿತ್ರದ ಆಡಿಯೋ ರಿಲೀಸ್ ಮತ್ತೆ ಮುಂದಕ್ಕೆ ಹೋಗಿದೆ.

ಕಳೆದ ಬಾರಿ ನಡೆದ ಚಿತ್ರದ ಸುದ್ದಿಗೋಷ್ಟಿಯಲ್ಲಿ ಆಗಸ್ಟ್ 10ಕ್ಕೆ ಅಂದರೆ ಇಂದು ಚಿತ್ರದ ಆಡಿಯೋ ಬಿಡುಗಡೆ ಮಾಡುತ್ತೇವೆ ಎಂದು ಚಿತ್ರತಂಡ ಹೇಳಿತ್ತು. ಆದರೆ, ಇಂದು ಚಿತ್ರದ ಆಡಿಯೋ ಲಾಂಚ್ ಆಗುತ್ತಿಲ್ಲ. ಈ ಬಗ್ಗೆ ಫಿಲ್ಮಿಬೀಟ್ ಕನ್ನಡದ ಜೊತೆಗೆ ಮಾತನಾಡಿರುವ ನಿರ್ದೇಶಕ ಗುರುದತ್ ಗಾಣಿಗ ಚಿತ್ರದ ಆಡಿಯೋ ಕಾರ್ಯಕ್ರಮದ ಕೆಲವು ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ.

director gurudatta ganiga spoke about Ambi Ninge Vaiyasayitho movie audio launch

''ಚಿತ್ರದ ಆಡಿಯೋ ಬಿಡುಗಡೆ ಇದೇ ತಿಂಗಳ 15ರ ಒಳಗೆ ಆಗುತ್ತದೆ. ಅರಮನೆ ಮೈದಾನದಲ್ಲಿ ಅದ್ದೂರಿಯಾಗಿ ಹಾಡುಗಳು ಲಾಂಚ್ ಆಗಲಿದೆ. ಈ ಕಾರ್ಯಕ್ರಮಕ್ಕೆ ಕನ್ನಡದ ಎಲ್ಲ ನಟರಿಗೆ ಆಹ್ವಾನ ಮಾಡಲಿದ್ದೇವೆ. ಅಂಬರೀಶ್ ಸರ್ ಕಾರ್ಯಕ್ರಮ ಅಂದರೆ ಎಲ್ಲರೂ ಬರುವ ಸಾಧ್ಯತೆ ಇದೆ. ಜೊತೆಗೆ ಸೌತ್ ಚಿತ್ರರಂಗದ ಕೆಲವು ನಟರು ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಹೀಗಾಗಿ ಸ್ವಲ್ಪ ತಡ ಆಗುತ್ತಿದೆ.'' ಎಂದಿದ್ದಾರೆ.

director gurudatta ganiga spoke about Ambi Ninge Vaiyasayitho movie audio launch

ಅಂದಹಾಗೆ, ಸಿನಿಮಾದ ಹಾಡುಗಳು ತುಂಬ ಚೆನ್ನಾಗಿ ಮೂಡಿಬಂದಿದೆಯಂತೆ. ಒಳ್ಳೆಯ ಮೆಲೋಡಿ ಹಾಡುಗಳನ್ನು ಅರ್ಜುನ್ ಜನ್ಯ ನೀಡಿದ್ದಾರಂತೆ. ಈ ಚಿತ್ರ ತಮಿಳಿನ ರಿಮೇಕ್ ಆಗಿದ್ದರೂ, ಅಲ್ಲಿನ ಯಾವ ಟ್ಯೂನ್ ಅನ್ನು ಬಳಸಿಲ್ಲ. ಮಾಸ್, ಕ್ಲಾಸ್, ಮೆಲೋಡಿ ಹೀಗೆ ಎಲ್ಲ ಶೈಲಿಯ ಹಾಡುಗಳು ಸಿನಿಮಾ ಆಲ್ಬಂ ನಲ್ಲಿ ಇವೆಯಂತೆ.

More from Filmibeat

English summary
Director Gurudatta Ganiga spoke about Ambareesh's 'Ambi Ninge Vaiyasayitho' movie audio launch. The movie is a remake of tamil movie 'Power Pandi'.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X