'ಮಠ' ಡೈರೆಕ್ಟರ್ ಗುರುಪ್ರಸಾದ್ ಈಗ ಹೀರೋ
Recommended Video

'ಮಠ' ನಿರ್ದೇಶಕ ಗುರುಪ್ರಸಾದ್ ಇತ್ತೀಚಿಗಷ್ಟೆ ಮೀಟೂ ಅಭಿಯಾನದ ಬಗ್ಗೆ ಹೇಳಿಕೆ ನೀಡಿ ಸುದ್ದಿಯಾಗಿದ್ದರು. ಮೀಟೂ ಬಗ್ಗೆ ಸಿನಿಮಾ ಮಾಡಿ, ತಾವೇ ಆ ಸಿನಿಮಾಗೆ ನಾಯಕ ಆಗುತ್ತೇನೆ ಎಂದಿದ್ದ ಗುರುಪ್ರಸಾದ್ ಈಗ ಅದಕ್ಕೂ ಮುಂಚೆಯೇ ಒಂದು ಸಿನಿಮಾ ಮಾಡುತ್ತಿದ್ದಾರೆ.

'ಕುಷ್ಕ' ಎಂಬ ಸಿನಿಮಾದಲ್ಲಿ ಗುರುಪ್ರಸಾದ್ ನಾಯಕನ ಪಾತ್ರ ಮಾಡುತ್ತಿದ್ದಾರೆ. ಈ ಸಿನಿಮಾವನ್ನು ವಿಕ್ರಮ್ ಯೋಗನಾಥ್ ನಿರ್ದೇಶನ ಮಾಡುತ್ತಿದ್ದಾರೆ. ಈ ಹಿಂದೆ 'ಹೀಗೊಂದು ದಿನ' ಸಿನಿಮಾವನ್ನು ನಿರ್ದೇಶನ ಮಾಡಿದ್ದ ಅವರು ಈಗ ಮತ್ತೊಂದು ಹೊಸ ಪ್ರಯತ್ನಕ್ಕೆ ಕೈ ಹಾಕಿದ್ದಾರೆ.
ಗುರುಪ್ರಸಾದ್ ಪಾತ್ರದ ಫೋಟೋಗಳು ಹೊರಬಂದಿದೆ. ಸಖತ್ ಸ್ಟೈಲಿಷ್ ಲುಕ್ ನಲ್ಲಿ ಗುರುಪ್ರಸಾದ್ ಕಾಣಿಸಿಕೊಂಡಿದ್ದಾರೆ. ಮತ್ತೊಂದು ವಿಶೇಷ ಅಂದರೆ, ಈ ಸಿನಿಮಾದಲ್ಲಿ 'ಡಾ|| ಪಾಲ್' ವೆಬ್ ಸೀರಿಸ್ ಮೂಲಕ ಜನಪ್ರಿಯತೆ ಗಳಿಸಿದ್ದ ಕೈಲಾಶ್ ಪಾಲ್ ನಟಿಸುತ್ತಿದ್ದಾರೆ.

ಈ ಸಿನಿಮಾದಲ್ಲಿ ಇನ್ನೊಬ್ಬ ದೊಡ್ಡ ನಟರು ಕೂಡ ಕಾಣಿಸಿಕೊಂಡಿದ್ದು, ಅದನ್ನು ಸದ್ಯದಲ್ಲಿಯೇ ನಿರ್ದೇಶಕರು ರಿವೀಲ್ ಮಾಡಲಿದ್ದಾರಂತೆ. ಇನ್ನು ಚಿತ್ರದ 75% ಚಿತ್ರೀಕರಣ ಈಗಾಗಲೇ ಮುಗಿದಿದೆ.


Click it and Unblock the Notifications











