ತಮಿಳಿಗೆ ರಿಮೇಕ್ ಆಗುತ್ತಿದೆ 'ಎದ್ದೇಳು ಮಂಜುನಾಥ' ಸಿನಿಮಾ
ಕನ್ನಡದ ಸಿನಿಮಾಗಳು ತೆಲುಗು ಮತ್ತು ತಮಿಳು ಭಾಷೆಯಲ್ಲಿ ರಿಮೇಕ್ ಆಗುವುದು ಈಗ ಹೆಚ್ಚಾಗುತ್ತಿದೆ. 'ಉಳಿದವರು ಕಂಡಂತೆ' ಮತ್ತು 'ಕಿರಿಕ್ ಪಾರ್ಟಿ' ಚಿತ್ರದ ನಂತರ 'ಎದ್ದೇಳು ಮಂಜುನಾಥ' ಸಿನಿಮಾ ಕೂಡ ಬೇರೆ ಭಾಷೆಗೆ ರಿಮೇಕ್ ಆಗುತ್ತಿದೆಯಂತೆ.
'ಎದ್ದೇಳು ಮಂಜುನಾಥ' ಸಿನಿಮಾ ಕನ್ನಡದ ಸೂಪರ್ ಹಿಟ್ ಸಿನಿಮಾ. 2009ರಲ್ಲಿ ರಿಲೀಸ್ ಆಗಿದ್ದ ಈ ಚಿತ್ರವನ್ನು ಗುರುಪ್ರಸಾದ್ ನಿರ್ದೇಶನ ಮಾಡಿದ್ದರು. ಜಗ್ಗೇಶ್ ಮತ್ತು ಯಜ್ಞಾ ಶೆಟ್ಟಿ ಸಿನಿಮಾದಲ್ಲಿ ನಟಿಸಿದ್ದರು. ಜಗ್ಗೇಶ್ ಅಭಿನಯ, ಗುರುಪ್ರಸಾದ್ ಡೈಲಾಗ್ ಸಿನಿಮಾದ ಹೈಲೈಟ್ ಆಗಿತ್ತು. 'ಮಠ' ನಂತರ ಜಗ್ಗೇಶ್ ಹಾಗೂ ಗುರುಪ್ರಸಾದ್ ಕಾಂಬಿನೇಶನ್ ನಲ್ಲಿ 'ಎದ್ದೇಳು ಮಂಜುನಾಥ' ಸಿನಿಮಾ ಬಂದಿತ್ತು.

ಸದ್ಯ ಈ ಚಿತ್ರವನ್ನು ತಮಿಳಿನಲ್ಲಿ ರಿಮೇಕ್ ಮಾಡಲು ನಿರ್ದೇಶಕ ಗುರುಪ್ರಸಾದ್ ತಯಾರಿ ನಡೆಸಿದ್ದಾರಂತೆ. ನಿರ್ದೇಶನ ಜೊತೆಗೆ ತಮ್ಮ ಬ್ಯಾನರ್ ನಲ್ಲಿಯೇ ಚಿತ್ರವನ್ನು ನಿರ್ಮಾಣ ಮಾಡುವ ಪ್ಲಾನ್ ಸಹ ಗುರುಪ್ರಸಾದ್ ಮಾಡಿದ್ದಾರಂತೆ. ತಮಿಳು ಚಿತ್ರರಂಗದ ಬಗ್ಗೆ ಸಾಕಷ್ಟು ತಿಳಿದುಕೊಂಡಿರುವ ಗುರುಪ್ರಸಾದ್ ಅಲ್ಲಿ ಒಂದು ಸಿನಿಮಾ ಮಾಡುವ ಬಯಕೆ ಹೊಂದಿದ್ದು, ಅದು ಈಗ ನೆರವೇರುತ್ತಿದೆ.
ಅಂದಹಾಗೆ, ಸದ್ಯ ಅನೂಪ್ ಸಾ.ರಾ.ಗೋವಿಂದು ಜೊತೆಗೆ 'ಅದೇಮಾ' ಸಿನಿಮಾವನ್ನು ಗುರುಪ್ರಸಾದ್ ಮಾಡುತ್ತಿದ್ದರೆ. ಅದರ ಜೊತೆಗೆ ಸ್ಟಾರ್ ಸುವರ್ಣ ವಾಹಿನಿಯ 'ಭರ್ಜರಿ ಕಾಮಿಡಿ' ರಿಯಾಲಿಟಿ ಶೋಗೆ ಸಹ ಗುರುಪ್ರಸಾದ್ ತೀರ್ಪುಗಾರರಾಗಿದ್ದಾರೆ.


Click it and Unblock the Notifications











