twitter
    For Quick Alerts
    ALLOW NOTIFICATIONS  
    For Daily Alerts

    'ಟಗರು' ಡೈಲಾಗ್ ನಿಂದ ಗುರು - ಶಿಷ್ಯರ ಮಾತಿನ ಸಮರ ಮತ್ತೆ ಶುರು

    By Naveen
    |

    Recommended Video

    'ಟಗರು' ಡೈಲಾಗ್ ನಿಂದ ಗುರು - ಶಿಷ್ಯರ ಮಾತಿನ ಸಮರ ಮತ್ತೆ ಶುರು | Oneindia Kannada

    'ಟಗರು' ಸಿನಿಮಾ ನೋಡಿದವರಿಗೆ ಅದರ ಸಂಭಾಷಣೆಗಳು ಒಳ್ಳೆಯ ಮಜಾ ನೀಡುತ್ತದೆ. ಸಿನಿಮಾದ ಪ್ರತಿ ದೃಶ್ಯದಲ್ಲಿ ಒಂದೊಂದು ಪಂಚಿಂಗ್ ಡೈಲಾಗ್ ಗಳು ಇವೆ. ಅದರ ಜೊತೆಗೆ ಸಿನಿಮಾ ಪ್ರಾರಂಭದ ದೃಶ್ಯದಲ್ಲಿ ಬರುವ ಒಂದು ಸಂಭಾಷಣೆ ಇದು ಯಾರಿಗೊ ಟಾಂಗ್ ನೀಡುವ ಹಾಗೆ ಇದೆಯಲ್ಲ ಅನಿಸುತ್ತದೆ.

    ಸಿನಿಮಾದಲ್ಲಿ ಡಾಲಿ ಪಾತ್ರ ಮಾಡಿರುವ ಧನಂಜಯ್ ಅವರ ಬಾಸ್ ಆಗಿದ್ದವರು ಡಾನ್ ಅಂಕಲ್. ಗಡ್ಡ ಬಿಟ್ಟಿರುವ ಡಾನ್ ಅಂಕಲ್ ಕುರಿತು ಡಾಲಿ ಧನಂಜಯ್ ಸಿನಿಮಾದಲ್ಲಿ ಈ ಎರಡು ಡೈಲಾಗ್ ಹೇಳುತ್ತಾರೆ.

    'ಡಾಲಿ' ಧನಂಜಯ್ ಬಗ್ಗೆ ಕೇಳಿದ್ರೆ ಗುರುಪ್ರಸಾದ್ ಹೀಗೆ ಹೇಳಿದ್ದಾರೆ !'ಡಾಲಿ' ಧನಂಜಯ್ ಬಗ್ಗೆ ಕೇಳಿದ್ರೆ ಗುರುಪ್ರಸಾದ್ ಹೀಗೆ ಹೇಳಿದ್ದಾರೆ !

    ಮೊದಲ ಡೈಲಾಗ್ : ''ಇಲ್ಲಿ ಯಾರು ಯಾರನ್ನು ಬೆಳಸೋಲ್ಲ.. ನಾವೇ ಬೆಳದಿದ್ದು.'' (ಧನಂಜಯ್ ಅವರನ್ನು ಪರಿಚಯ ಮಾಡಿದ್ದು ಗುರುಪ್ರಸಾದ್)

    ಎರಡನೇ ಡೈಲಾಗ್ : ''ನಮ್ಮ 'ಗುರು' ಒಬ್ಬ ಇದ್ದಾನೆ. ____ ನನ್ ಮಗ. ಹವಾ ಬೆಳಸೋ ಅಂದರೆ ಗಡ್ಡ ಬೆಳೆಸಿದ್ದಾನೆ.'' (ಗುರುಪ್ರಸಾದ್ ತಮ್ಮ ಗಡ್ಡದಿಂದಲೇ ಫೇಮಸ್ ಆದವರು)

    'ಡಾಲಿ' ಧನಂಜಯ್ ಕಷ್ಟದ ದಿನಗಳನ್ನ ಬಿಚ್ಚಿಟ್ಟ ಸ್ನೇಹಿತ 'ಸಿಂಹಾಜಿ''ಡಾಲಿ' ಧನಂಜಯ್ ಕಷ್ಟದ ದಿನಗಳನ್ನ ಬಿಚ್ಚಿಟ್ಟ ಸ್ನೇಹಿತ 'ಸಿಂಹಾಜಿ'

    ಧನಂಜಯ್ ಬಾಯಿಂದ ಬಂದಿರುವ ಈ ಎರಡು ಡೈಲಾಗ್ ಗಳು ಚಿತ್ರದ ಆ ಸಂದರ್ಭಕ್ಕೆ ಅನುಗುಣವಾಗಿದೆ. ಆದರೂ ಸಹ ಇದು ಪರೋಕ್ಷವಾಗಿ ಗುರುಪ್ರಸಾದ್ ಅವರಿಗೆ ಟಾಂಗ್ ನೀಡಿದ್ದ ಎನ್ನುವ ಅನುಮಾನ ಮೂಡುತ್ತದೆ. ಸದ್ಯ ಸಿನಿಮಾದ ಡೈಲಾಗ್ ಗಳ ಬಗ್ಗೆ ನಿರ್ದೇಶಕ ಗುರುಪ್ರಸಾದ್ ಮಾತನಾಡಿದ್ದಾರೆ. ಮುಂದೆ ಓದಿ..ವಿಮರ್ಶೆ: ಟಗರು ಖದರು, ಡಾಲಿ ಪೊಗರು, ಸ್ಕ್ರೀನ್ ಪ್ಲೇ ಸೂಪರ್ರು

    ವಿಮರ್ಶೆ: ಟಗರು ಖದರು, ಡಾಲಿ ಪೊಗರು, ಸ್ಕ್ರೀನ್ ಪ್ಲೇ ಸೂಪರ್ರುವಿಮರ್ಶೆ: ಟಗರು ಖದರು, ಡಾಲಿ ಪೊಗರು, ಸ್ಕ್ರೀನ್ ಪ್ಲೇ ಸೂಪರ್ರು

    ಗುರುಪ್ರಸಾದ್ ಗೆ ಹೋಲುವ ಡೈಲಾಗ್ ಗಳು

    ಗುರುಪ್ರಸಾದ್ ಗೆ ಹೋಲುವ ಡೈಲಾಗ್ ಗಳು

    'ಟಗರು' ಸಿನಿಮಾದಲ್ಲಿ ಧನಂಜಯ್ ಬೇಕು ಅಂತಲೇ ಈ ಮೇಲಿನ ಡೈಲಾಗ್ ಹೇಳಿಲ್ಲ, ಅದು ಸಿನಿಮಾದ ದೃಶ್ಯಕ್ಕೆ ಮಾತ್ರ ಸೀಮಿತ ಎಂದುಕೊಂಡರು ಸಹ ಈ ಡೈಲಾಗ್ ಗುರುಪ್ರಸಾದ್ ಮತ್ತು ಧನಂಜಯ್ ಅವರ ಸಂದರ್ಭಕ್ಕೆ ಚೆನ್ನಾಗಿ ಹೋಲುತ್ತಿದೆ. ಅಷ್ಟೆ ಅಲ್ಲದೆ ಈ ಡೈಲಾಗ್ ಗಳ ಬಗ್ಗೆ ಗುರುಪ್ರಸಾದ್ ಇದೀಗ ಪ್ರತಿಕ್ರಿಯೆ ನೀಡಿದ್ದಾರೆ.

    ಸಾಯುವ ಪಾತ್ರದಿಂದ ಬಂದ ಮಾತು

    ಸಾಯುವ ಪಾತ್ರದಿಂದ ಬಂದ ಮಾತು

    ಇತ್ತೀಚಿಗಷ್ಟೆ ನಿರ್ದೇಶಕಿ ರೂಪ ಅಯ್ಯರ್ ಅವರ 'ನಮೋ' ಸಿನಿಮಾದ ಪತ್ರಿಕಾಗೋಷ್ಠಿಗೆ ಗುರುಪ್ರಸಾದ್ ಆಗಮಿಸಿದ್ದರು. ಈ ವೇಳೆ ಪತ್ರಕರ್ತರು 'ಟಗರು' ಸಿನಿಮಾ ಡೈಲಾಗ್ ಬಗ್ಗೆ ಕೇಳಿದ್ದಾರೆ. ಆಗ ಗುರು ''ನಾನು ಆ ಸಿನಿಮಾ ನೋಡಿಲ್ಲ. ಸಿನಿಮಾ ನೋಡಿದ ಕೆಲವರು ನನಗೆ ಟಾಂಗ್ ಕೊಟ್ಟಿದ್ದಾನೆ ಎಂದು ಹೇಳಿದರು. ಆದರೆ ಆ ರೀತಿ ಮಾತು ಹೇಳುವುದು ವಿಲನ್ ಪಾತ್ರ. ಅದು ಸಾಯುವ ಪಾತ್ರ. ಹೀಗಾಗಿ ನನಗೆ ಅದರ ಬಗ್ಗೆ ಯಾವುದೇ ನೋವು ಇಲ್ಲ'' ಎಂದಿದ್ದಾರೆ ಮಾತಿನ ಮಲ್ಲ ಗುರುಪ್ರಸಾದ್.

    ಅವರ ಬಗ್ಗೆ ಮಾತನಾಡಿದರೆ ಚಿಕ್ಕವನಾಗಿ ಬಿಡುತ್ತೇನೆ

    ಅವರ ಬಗ್ಗೆ ಮಾತನಾಡಿದರೆ ಚಿಕ್ಕವನಾಗಿ ಬಿಡುತ್ತೇನೆ

    ''ಅವರ (ಧನಂಜಯ್) ಕೆಲಸದ ಬಗ್ಗೆ ನಾನು ಏನು ಹೇಳಲ್ಲ. ಅವರ ಬಗ್ಗೆ ಮಾತನಾಡಿದರೆ ನಾನು ಚಿಕ್ಕವನಾಗಿ ಬಿಡುತ್ತೇನೆ. ಬಲಗೈ ನಲ್ಲಿ ಮಾಡಿದ ಕೆಲಸ ಎಡಗೈಗೆ ಗೊತ್ತಾಗಬಾರದು. ನಾನು ಮಾಡುವ ಕೆಲಸವನ್ನು ನಾನು ಪ್ರಾಮಾಣಿಕವಾಗಿ ಮಾಡಿದ್ದೇನೆ. ಅದನ್ನು ಉಳಿಸುವುದು ಬಿಡುವುದು ಅವರ ಕೈನಲ್ಲಿ ಇತ್ತು. ಆದರೆ ಅವರು ಆಗ ಏನೇನೋ ಮಾತನಾಡಿದರು. ಅವರಿಗೆ ಅರ್ಥ ಆದರೆ ಸಾಕು. ನಾನು ಈಗ ಅದರ ಬಗ್ಗೆ ಮತ್ತೆ ಮಾತನಾಡುವುದಿಲ್ಲ.'' ಎಂದು ಗುರು ಹೇಳಿಕೆ ನೀಡಿದ್ದಾರೆ.

    ಧನಂಜಯ್ ಪ್ರತಿಕ್ರಿಯೆ

    ಧನಂಜಯ್ ಪ್ರತಿಕ್ರಿಯೆ

    ''ಗುರು ಪ್ರಸಾದ್ ಅವರ ಮಾತಿಗೆ ಡಾಲಿ ಧನಂಜಯ್ ಕೂಡ ಪ್ರತಿಕ್ರಿಯೆ ನೀಡಿದ್ದಾರೆ. ''ಮಾಡುವುದಕ್ಕೆ ಬೇಕಾದಷ್ಟು ಕೆಲಸ ಇವೆ. ಗಡ್ಡದ ಗುರು ಮಾತಿಗೆ ಸಾವಿರ ಮುತ್ತುಗಳು ಅಷ್ಟೇ. ಹೊಡಿ ಒಂಬತ್ತ್'' ಎಂಬ ಉತ್ತರವನ್ನು ಧನಂಜಯ್ ಕೊಟ್ಟಿದ್ದಾರೆ.

    ಡಾಲಿ ಪಾತ್ರದ ಬಗ್ಗೆ

    ಡಾಲಿ ಪಾತ್ರದ ಬಗ್ಗೆ

    'ಟಗರು' ಸಿನಿಮಾದಲ್ಲಿ ಡಾಲಿ ಅಲಿಯಸ್ ನಿಂಬೆ ಒಂದು ಬಹು ಮುಖ್ಯ ಪಾತ್ರ. ಇಡೀ ಸಿನಿಮಾಗೆ ಕಿಕ್ ನೀಡುವ ಪಾತ್ರ ಆದಾಗಿದೆ. ಈ ಪಾತ್ರವನ್ನು ನಟ ಧನಂಜಯ್ ಅಮೋಘವಾಗಿ ನಿಭಾಯಿಸಿದ್ದಾರೆ. ಟಗರು ಶಿವ ಮತ್ತು ಡಾಲಿಯ ಸೆಣಸಾದ ಕಥೆ ಸಿನಿಮಾದಲ್ಲಿದೆ. ಒಂದೇ ಪದದಲ್ಲಿ ಹೇಳಬೇಕು ಅಂದರೆ 'ಡಾಲಿ ಅಂದರೆ ಕ್ರೂರಿ.

    English summary
    Director Guruprasad spoke about Tagaru movie Dolly Dhananjay dialogue. Actor Dhananjay played dolly character in Kannada actor Shiva Rajkumar's 'Tagaru' movie. The movie is directed by Duniya Suri.
    Tuesday, March 13, 2018, 17:18
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X