ಮೇಘನಾ ರಾಜ್ ಮತ್ತು ಸರ್ಜಾ ಕುಟುಂಬಕ್ಕೆ ಬಹಿರಂಗ ಕ್ಷಮೆ ಕೇಳಿದ ಇಂದ್ರಜಿತ್ ಲಂಕೇಶ್

ಡ್ರಗ್ಸ್ ಪ್ರಕರಣದಲ್ಲಿ ದಿವಂಗತ ನಟ ಚಿರಂಜೀವಿ ಸರ್ಜಾ ಹೆಸರು ತಂದಿದ್ದಕ್ಕಾಗಿ ನಿರ್ದೇಶಕ ಇಂದ್ರಜಿತ್ ಲಂಕೇಶ್, ನಟಿ ಮೇಘನಾ ರಾಜ್ ಮತ್ತು ಸರ್ಜಾ ಕುಟುಂಬಕ್ಕೆ ಬಹಿರಂಗ ಕ್ಷಮೆಯಾಚಿಸಿದ್ದಾರೆ.

Recommended Video

Ganja ಬಗ್ಗೆ ತಪ್ಪು ಕಲ್ಪನೆ ಬೇಡ , ಮುಕ್ತವಾಗಿ ಚರ್ಚಿಸೋಣ ಬನ್ನಿ | Rakesh Adiga | Filmibeat Kannada

ಸ್ಯಾಂಡಲ್ ವುಡ್ ಗೆ ಡ್ರಗ್ಸ್ ಜಾಲದ ನಂಟಿನ ಬಗ್ಗೆ ಮಾತನಾಡುತ್ತಾ ಇಂದ್ರಜಿತ್ ಲಂಕೇಶ್, ನಟ ಚಿರಂಜೀವಿ ಸರ್ಜಾ ಸಾವಿನ ಬಗ್ಗೆ ಪ್ರಶ್ನೆ ಮಾಡಿದ್ದರು. ಸಾವಿನ ಬಳಿಕ ಮರಣೋತ್ತರ ಪರೀಕ್ಷೆ ಯಾಕೆ ನಡೆಸಿಲ್ಲ ಎಂದು ಕೇಳಿದ್ದರು. ಇಂದ್ರಜಿತ್ ಹೇಳಿಕೆಗೆ ಹಲವರು ಬೇಸರ ವ್ಯಕ್ತಪಡಿಸಿದ್ದರು. ಸತ್ತ ವ್ಯಕ್ತಿಯ ತೇಜೋವಧೆ ಮಾಡುವುದು ಸರಿಯಲ್ಲ ಎಂದು ನಟ ದರ್ಶನ್, ಸುದೀಪ್ ಸೇರಿದಂತೆ ಅನೇಕರು ಖಂಡಿಸಿದ್ದರು.

ಕ್ಷಮೆ ಕೇಳಬೇಕೆಂದು ಪತ್ರ ಬರೆದಿದ್ದ ಮೇಘನಾ ರಾಜ್

ಕ್ಷಮೆ ಕೇಳಬೇಕೆಂದು ಪತ್ರ ಬರೆದಿದ್ದ ಮೇಘನಾ ರಾಜ್

ಚಿರು ಬಗ್ಗೆ ಹೇಳಿದ್ದ ಮಾತನ್ನು ವಾಪಸ್ ಪಡೆದಿರುವುದಾಗಿ ಈಗಾಗಲೇ ನಿರ್ದೇಶಕ ಇಂದ್ರಜಿತ್ ಲಂಕೇಶ್ ಹೇಳಿದ್ದರು. ಆದರೆ ಚಿರು ಪತ್ನಿ, ಮೇಘನಾ ರಾಜ್ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಪತ್ರ ಬರೆದು, 'ನನ್ನ ಗಂಡನ ವ್ಯಕ್ತಿತ್ವಕ್ಕೆ ಧಕ್ಕೆ ತಂದಿರುವ ಇಂದ್ರಜಿತ್ ಲಂಕೇಶ್ ಅವರು ಸಾರ್ವಜನಿಕ ಕ್ಷಮೆ ಕೇಳಲಿ' ಎಂದು ಹೇಳಿದ್ದರು.

ಚಿಕ್ಕ ವಯಸ್ಸಿನಲ್ಲಿ ಸತ್ತಾಗ ಸಂಶಯ ಬರುವುದು ಸಹಜ

ಚಿಕ್ಕ ವಯಸ್ಸಿನಲ್ಲಿ ಸತ್ತಾಗ ಸಂಶಯ ಬರುವುದು ಸಹಜ

ಈ ಸಂಬಂಧ ನಡೆದ ಪತ್ರಿಕಾಗೋಷ್ಠಿಯಲ್ಲಿ ಇಂದ್ರಜಿತ್ ಬಹಿರಂಗವಾಗಿ ಕ್ಷಮೆಯಾಚಿದ್ದಾರೆ. ಮೇಘನಾ ರಾಜ್ ಪತ್ರ ಬರೆದು ತುಂಬಾ ನೋವಾಗಿದೆ ಎಂದು ಹೇಳಿದ್ದಾರೆ. ಸುಂದರ್ ರಾಜ್ ಮತ್ತು ಅವರ ಪತ್ನಿ ನನ್ನನ್ನು ಮಗುವಾಗಿದ್ದಾಗಿನಿಂದನೂ ನೋಡಿದ್ದಾರೆ, ಆಡಿಸಿದ್ದಾರೆ. ಚಿರು ಯುವ ನಟ ಭವಿಷ್ಯದ ನಟ, ದೊಡ್ಡ ಭವಿಷ್ಯವಿತ್ತು, ಸಾಯಬಾರದ ವಯಸ್ಸಿನಲ್ಲಿ ಸತ್ತಾಗ ಸಂಶಯ ಬರುವುದು ಸಹಜ ಹಾಗಾಗಿ ಹೇಳಿದೆ ಅಷ್ಟೆ ಎಂದಿದ್ದಾರೆ.

ಅಕ್ಕನ ಬಗ್ಗೆ ಮಾತನಾಡಿದ್ದು ತುಂಬಾ ನೋವು ತಂದಿದೆ: ಇಂದ್ರಜಿತ್ ಲಂಕೇಶ್

ಕ್ಷಮೆಯಾಚಿಸಿದ ಇಂದ್ರಜಿತ್

ಕ್ಷಮೆಯಾಚಿಸಿದ ಇಂದ್ರಜಿತ್

'ನನ್ನ ಪದಗಳಲ್ಲಿ, ವಾಕ್ಯಗಳಲ್ಲಿ ತಪ್ಪಾಗಿದ್ದಾರೆ ವಿಷಾದ ವ್ಯಕ್ತಪಡಿಸುತ್ತೇನೆ, ಪೋಸ್ಟ್ ಮಾರ್ಟಂ ಬಗ್ಗೆ ಹೇಳಿದ ಮಾತನ್ನು ವಾಪಸ್ ಪಡೆಯುತ್ತೇನೆ. ಎಲ್ಲರ ಮುಂದೆ ಕ್ಷಮೆ ಕೇಳುತ್ತೇನೆ. ಕ್ಷಮೆ ಕೇಳುವುದರಲ್ಲಿ ಯಾವುದೇ ಸಣ್ಣತನ ದೊಡ್ಡತನ ಇಲ್ಲ' ಎಂದು ಕ್ಷಮೆಯಾಚಿಸಿದ್ದಾರೆ.

ಡ್ರಗ್ಸ್ ವಿಚಾರಕ್ಕು ಚಿರುಗೂ ಯಾವುದೇ ಸಂಬಂಧವಿಲ್ಲ

ಡ್ರಗ್ಸ್ ವಿಚಾರಕ್ಕು ಚಿರುಗೂ ಯಾವುದೇ ಸಂಬಂಧವಿಲ್ಲ

ಚಿಕ್ಕ ವಯಸ್ಸಿನಲ್ಲಿ ಸತ್ತಾಗ ಸಂಶಯ ಬರುವುದು ಸಹಜ ಹಾಗಾಗಿ ಕೇಳಿದ್ದೇನೆ. ಡ್ರಗ್ಸ್ ವಿಚಾರಕ್ಕು ಚಿರಂಜೀವಿಗೂ ಸಂಬಂಧವಿದೆ ಎಂದು ಹೇಳಲಿಲ್ಲ. ಮರಣೋತ್ತರ ಪರೀಕ್ಷೆ ಬಗ್ಗೆ ಮಾತ್ರ ಮಾತನಾಡಿದ್ದೆ ಎಂದು ಇಂದ್ರಜಿತ್ ಲಂಕೇಶ್ ಹೇಳಿದ್ದಾರೆ. ಇನ್ನೂ ಡ್ರಗ್ಸ್ ವಿರುದ್ಧ ನನ್ನ ಹೋರಾಟ ಮುಂದುವರೆಯಲಿದೆ ಎಂದು ಇಂದ್ರಜಿತ್ ಹೇಳಿದ್ದಾರೆ.

More from Filmibeat

English summary
Director Indrajit Lankesh apologize to Meghana Raj for statement on Chiranjeevi Sarja.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X