twitter
    For Quick Alerts
    ALLOW NOTIFICATIONS  
    For Daily Alerts

    ಡ್ರಗ್ಸ್ ಎಫೆಕ್ಟ್: ಮೂರು ಘಟನೆಗಳಿಗೆ ಸ್ಪಷ್ಟನೆ ಕೇಳಿದ ಇಂದ್ರಜಿತ್ ಲಂಕೇಶ್

    |

    ಕನ್ನಡ ಚಿತ್ರರಂಗದಲ್ಲಿ ಕೆಲವು ನಟ-ನಟಿಯರು ಹಾಗೂ ತಂತ್ರಜ್ಞರು ಡ್ರಗ್ಸ್ ಸೇವಿಸುತ್ತಾರೆ ಎಂಬ ವಿಚಾರಕ್ಕೆ ಸಂಬಂಧಪಟ್ಟಂತೆ ನಿರ್ದೇಶಕ ಇಂದ್ರಜಿತ್ ಲಂಕೇಶ್ ಬಹಿರಂಗವಾಗಿ ಹೇಳಿಕೆ ನೀಡಿದ್ದಾರೆ.

    Recommended Video

    Upendra Reaction On Sandalwood Drug Mafia | Filmibeat Kannada

    'ಇಂಡಸ್ಟ್ರಿಯಲ್ಲಿ ಡ್ರಗ್ಸ್ ಬಳಕೆ ಇದೆ, ಚಿತ್ರರಂಗವನ್ನು ಸ್ವಚ್ಛಗೊಳಿಸಬೇಕು, ಯಾರೆಲ್ಲ ಡ್ರಗ್ಸ್ ಸೇವಿಸುತ್ತಾರೆ ಎಂಬ ವಿವರ ನನ್ನ ಬಳಿ ಇದೆ. ಅಗತ್ಯವಿದ್ದರೆ ಪೊಲೀಸ್ ತನಿಖೆಗೆ ನಾನು ಸಹಕರಿಸುತ್ತೇನೆ ಎಂದಿದ್ದರು. ಅಷ್ಟೇ ಅಲ್ಲದೆ ಇತ್ತೀಚಿಗೆ ಮೃತಪಟ್ಟಿದ್ದ ಯುವನಟನ ಪೋಸ್ಟ್ ಮಾರ್ಟಮ್ ಏಕೆ ಮಾಡಲಿಲ್ಲ ಎಂದು ಸಹ ಪ್ರಶ್ನಿಸಿದ್ದರು.

    ಅಪಘಾತ, ಡ್ರಗ್ಸ್ ಆರೋಪಕ್ಕೆ ಪ್ರಜ್ವಲ್ ದೇವರಾಜ್, ದಿಗಂತ್ ಸ್ಪಷ್ಟನೆಅಪಘಾತ, ಡ್ರಗ್ಸ್ ಆರೋಪಕ್ಕೆ ಪ್ರಜ್ವಲ್ ದೇವರಾಜ್, ದಿಗಂತ್ ಸ್ಪಷ್ಟನೆ

    ಈ ಎಲ್ಲ ವಿಚಾರಕ್ಕೆ ಕುರಿತು ಮತ್ತಷ್ಟು ಮಾತನಾಡಿರುವ ಇಂದ್ರಜಿತ್ ಲಂಕೇಶ್ ಸಿನಿಮಾರಂಗಕ್ಕೆ ಸಂಬಂಧಿಸಿದಂತೆ ಪ್ರಮುಖ ಘಟನೆಗಳನ್ನು ಉಲ್ಲೇಖಿಸಿ, ಇದಕ್ಕೆ ಸ್ಪಷ್ಟನೆ ನೀಡಿ ಎಂದಿದ್ದಾರೆ. ಈ ಘಟನೆಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಚಿತ್ರಜಗತ್ತಿನಲ್ಲಿ ಡ್ರಗ್ಸ್ ಹೇಗೆ ಬಳಕೆಯಾಗುತ್ತಿದೆ ಎಂದು ತಿಳಿಯುತ್ತದೆ ಎಂದಿದ್ದಾರೆ. ಅಷ್ಟಕ್ಕೂ, ಯಾವುದು ಆ ಘಟನೆಗಳು? ಮುಂದೆ ಓದಿ...

    ಘಟನೆ ಒಂದು

    ಘಟನೆ ಒಂದು

    ಮೂರು ವರ್ಷದ ಹಿಂದೆ 2017 ಸೆಪ್ಟೆಂಬರ್ 27 ರಂದು ಮಧ್ಯರಾತ್ರಿ ಬೆಂಗಳೂರಿನ ಸೌತ್ ಎಂಡ್ ವೃತ್ತದಲ್ಲಿ ಕಾರೊಂದು ಅಪಘಾತಕ್ಕೆ ಒಳಗಾಗುತ್ತೆ. ಕಾರಿನಲ್ಲಿ ಉದ್ಯಮಿಯೊಬ್ಬರು ಮೊಮ್ಮಗ ಹಾಗೂ ಕನ್ನಡ ಕೆಲವು ನಟರು ಇದ್ದರು ಎಂದು ವರದಿಯಾಗುತ್ತದೆ. ಅಪಘಾತ ಸ್ಥಳದಲ್ಲಿ ಕಾರನ್ನು ಬಿಟ್ಟು ನಟರು ಪರಾರಿಯಾದರು ಎಂದು ಸ್ಥಳೀಯರು ಹೇಳಿದ್ದರು. ಈ ಪ್ರಕರಣ ಏನಾಯಿತು ಎಂದು ಇಂದ್ರಜಿತ್ ಪ್ರಶ್ನಿಸಿದ್ದಾರೆ.

    ಗಾಂಜಾ ಸಿಕ್ಕಿತ್ತು ಎಂಬ ವರದಿ

    ಗಾಂಜಾ ಸಿಕ್ಕಿತ್ತು ಎಂಬ ವರದಿ

    ಉದ್ಯಮಿ ಆದಿಕೇಶವುಲು ಮೊಮ್ಮಗ ವಿಷ್ಣು ಸೇರಿದಂತೆ ಕೆಲವು ನಟರು ಇದ್ದರು ಎಂದು ಹೇಳಲಾಗಿತ್ತು. ಪೊಲೀಸ್ ತನಿಖೆ ವೇಳೆ ಈ ಕಾರಿನಲ್ಲಿ ಗಾಂಜಾ ಸಹ ಪತ್ತೆಯಾಗಿತ್ತು ಎಂದು ವರದಿಯಾಗುತ್ತದೆ. ಆದರೆ, ಈ ಅಪಘಾತ ಪ್ರಕರಣದ ತನಿಖೆ ಏನಾಯ್ತು? ಆ ನಟರನ್ನು ಯಾರು ಮತ್ತು ವಿಚಾರಣೆಗೆ ಏಕೆ ಹೋಗಲಿಲ್ಲ? ಗಾಂಜಾ ಬಗ್ಗೆ ಏಕೆ ತನಿಖೆ ಆಗ್ಲಿಲ್ಲ ಎಂದು ಕೇಳಿದ್ದಾರೆ.

    ಸ್ಯಾಂಡಲ್ ವುಡ್ ಗೆ ಡ್ರಗ್ ನಂಟು: ಯುವ ನಟನ ಸಾವಿನ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಇಂದ್ರಜಿತ್ ಲಂಕೇಶ್ಸ್ಯಾಂಡಲ್ ವುಡ್ ಗೆ ಡ್ರಗ್ ನಂಟು: ಯುವ ನಟನ ಸಾವಿನ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಇಂದ್ರಜಿತ್ ಲಂಕೇಶ್

    ಘಟನೆ ಎರಡು

    ಘಟನೆ ಎರಡು

    ಇನ್ನು ಕೆಪಿಎಲ್ ಟೂರ್ನಿಯನ್ನಿ ಸ್ಪಾಟ್ ಫಿಕ್ಸಿಂಗ್ ಹಾಗೂ ಹನಿ ಟ್ರ್ಯಾಪ್‌ ನಡೆದಿತ್ತು ಎನ್ನಲಾದ ಪ್ರಕರಣದಲ್ಲಿ ಕೆಲವು ಆಟಗಾರರನ್ನು ಬಂಧಿಸಲಾಯಿತು. ಈ ಕೇಸ್‌ನಲ್ಲಿ ನಟಿಯರು ಸಹಕರಿಸಿದ್ದರು ಎಂದು ವರದಿಯಾಯಿತು. ಆದರೆ, ನಟಿಯರ ವಿಚಾರಣೆ ಆಗಿಲ್ಲ, ಅವರ ಹೆಸರು ಬಂದಿಲ್ಲ ಏಕೆ ಎಂದು ಇಂದ್ರಜಿತ್ ಲಂಕೇಶ್ ಕೇಳಿದ್ದಾರೆ.

    ಘಟನೆ ಮೂರು

    ಘಟನೆ ಮೂರು

    ಇತ್ತೀಚಿಗಷ್ಟೆ ಯುವ ನಟನ ಸಾವಾಯಿತು? ಅವರ ಪಾರ್ಥಿವ ಶರೀರವನ್ನು ಪೋಸ್ಟ್ ಮಾರ್ಟಮ್ ಏಕೆ ಮಾಡಿಲ್ಲ ಎಂದು ಇಂದ್ರಜಿತ್ ಲಂಕೇಶ್ ಪ್ರಶ್ನಿಸಿದ್ದಾರೆ. ಪರೋಕ್ಷವಾಗಿ ಚಿರು ಸರ್ಜಾ ಸಾವಿನ ಬಗ್ಗೆಯೂ ಮಾತನಾಡಿದ ನಿರ್ದೇಶಕರು ಚಿರು ಸಾವಿನ ಬಗ್ಗೆಯೂ ಅನುಮಾನ ವ್ಯಕ್ತಪಡಿಸಿದ್ದಾರೆ.

    English summary
    Director Indrajit Lankesh alleges that the Kannada film actor and actresses are in touch with drug dealers.
    Monday, August 31, 2020, 9:56
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X