ಹಾಲಿವುಡ್ ಗೆ ಎಂಟ್ರಿ ಕೊಟ್ಟ ಇಂದ್ರಜಿತ್ ಲಂಕೇಶ್
ಸ್ಯಾಂಡಲ್ ವುಡ್ ನಲ್ಲಿ ಖ್ಯಾತಿ ಗಳಿಸಿದ ನಿರ್ದೇಶಕ ಇಂದ್ರಜಿತ್ ಲಂಕೇಶ್ ಈಗ ಹಾಲಿವುಡ್ ಗೆ ಎಂಟ್ರಿ ಸಜ್ಜಾಗಿದ್ದಾರೆ ಎನ್ನುವ ಸುದ್ದಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಕನ್ನಡದಲ್ಲಿ ಸಿನಿಮಾ ಮಾಡಿ ನಂತರ ಬಾಲಿವುಡ್ ಕಡೆ ಹೊರಟಿದ್ದ ಇಂದ್ರಜಿತ್ ಈಗ ದಿಢೀರನೆ ಹಾಲಿವುಡ್ ಫ್ಲೈಟ್ ಹತ್ತಿದ್ದಾರೆ.
ಕಳೆದ ವರ್ಷ ಶಕೀಲಾ ಚಿತ್ರದ ಮೂಲಕ ಬಾಲಿವುಡ್ ಗೆ ಕಾಲಿಟ್ಟಿದ್ದರು ಇಂದ್ರಜಿತ್. ಶಾಕೀಲಾ ಜೀವನಾಧಾರಿತ ಚಿತ್ರ ಮಾಡುತ್ತಿರುವ ನಿರ್ದೇಶಕ ಇಂದ್ರಜಿತ್, ಶಕೀಲಾ ಸಿನಿಮಾ ರಿಲೀಸ್ ಗೂ ಮೊದಲೆ ಹಾಲಿವುಡ್ ಕಡೆ ಮುಖಮಾಡಿದ್ದಾರೆ. ಮುಸ್ಲಿಂ ಮಹಿಳೆಯರಿಗೆ ಸಂಬಂಧಿಸಿದ ಸೂಕ್ಷ್ಮವಾದ ಕಥೆಯ ಸಿನಿಮಾ ಇದಾಗಿರಲಿದೆಯಂತೆ. ವಿಶೇಷ ಅಂದ್ರೆ ಚಿತ್ರದ ಕಥೆಯನ್ನು ಮುಸ್ಲಿಂ ಮಹಿಳೆಯರೆ ಬರೆದಿದ್ದಾರಂತೆ.
ಕಥೆ ಕೇಳಿ ಇಷ್ಟಪಟ್ಟ ಇಂದ್ರಜಿತ್ ಗೆ ಸಿನಿಮಾ ಮಾಡಲು ಮುಂದಾಗಿದ್ದಾರೆ. ಇಂದ್ರಜಿತ್ ಗೆ ಹಾಲಿವುಡ್ ನ ನಿರ್ಮಾಣ ಸಂಸ್ಥೆಯೊಂದು ಸಾಥ್ ನೀಡಿದೆಯಂತೆ. ಇನ್ನು ಚಿತ್ರದಲ್ಲಿ ಆಸ್ಕರ್ ಪ್ರಶಸ್ತಿಗೆ ನಾಮಾಂಕಿತಗೊಂಡ ಹಾಲಿವುಡ್ ನಟಿ ಈ ಸಿನಿಮಾದಲ್ಲಿ ಬಣ್ಣಹಚ್ಚುತ್ತಿದ್ದಾರಂತೆ. ಆದ್ರೆ ಯಾರು ಎನ್ನುವುದನ್ನು ಫೈನಲ್ ಆಗುವ ತನಕ ಬಹಿರಂಗ ಪಡಿಸುವದಿಲ್ಲವಂತೆ ನಿರ್ದೇಶಕ ಇಂದ್ರಜಿತ್.

ಚಿತ್ರದಲ್ಲಿ ಸಂಪೂರ್ಣ ಹಾಲಿವುಡ್ ತಂತ್ರಜ್ಞರು ಮತ್ತು ಕಲಾವಿದರು ಇರಲಿದ್ದಾರೆ. ಅಂತಿಮ ಮಾತುಕಥೆಯೊಂದೆ ಬಾಕಿಯಿದ್ದು, ಇನ್ನು ಕೆಲವೆ ದಿನಗಳಲ್ಲಿ ಲಾಸ್ ಏಂಜಲೀಸ್ ತೆರಳಿ ಅಂತಿಮ ಒಪ್ಪಂದಕ್ಕೆ ಸಹಿ ಹಾಕಲಿದ್ದಾರಂತೆ. ಆ ನಂತರ ಸಿನಿಮಾವನ್ನು ಅಧಿಕೃತವಾಗಿ ಅನೌನ್ಸ್ ಮಡುವ ಪ್ಲಾನ್ ಮಾಡಿದ್ದಾರೆ ಇಂದ್ರಜಿತ್. ಇನ್ನು ಈಗಾಗಲೆ 45 ದಿನಗಳ ಚಿತ್ರೀಕರಣಕ್ಕೆ ತಯಾರಿ ನಡೆಸಿದ್ದು ಲೊಕೇಷನ್ ಹುಡುಕಾಟ ಸಹ ನಡೆಯುತ್ತಿದೆಯಂತೆ.


Click it and Unblock the Notifications











