ಜಮೀರ್ ಅಹ್ಮದ್ ಪುತ್ರನಿಗಾಗಿ ಕಾಶಿಗೆ ಹೊರಟ ನಿರ್ದೇಶಕ ಜಯತೀರ್ಥ
Recommended Video
ಸ್ಯಾಂಡಲ್ ವುಡ್ ನ ಖ್ಯಾತ ನಿರ್ದೇಶಕ ಜಯತೀರ್ಥ 'ಬೆಲ್ ಬಾಟಂ' ಸಿನಿಮಾ ಸಕ್ಸಸ್ ನ ಖುಷಿಯಲ್ಲಿದ್ದಾರೆ. ಸಂತಸದ ಅಲೆಯಲ್ಲಿ ತೇಲುತ್ತಿರುವ ಜಯತೀರ್ಥ ಈಗ ಜಮೀರ್ ಅಹ್ಮದ್ ಪುತ್ರನಿಗಾಗಿ ಕಾಶಿಗೆ ಹೋಗ್ತಿದ್ದಾರೆ. ಅಚ್ಚರಿ ಪಡಬೇಡಿ, ಯಾಕಂದ್ರೆ ಜಮೀರ್ ಪುತ್ರ ಜಾಹಿದ್ ಖಾನ್ ಸಿನಿಮಾ ಎಂಟ್ರಿಗೆ ಭರ್ಜರಿ ಸಿದ್ಧತೆ ನಡೆಯುತ್ತಿದೆ.
ಜಾಹಿದ್ ಖಾನ್ ಅವರ ಮೊದಲ ಸಿನಿಮಾಗೆ ನಿರ್ದೇಶನ ಮಾಡುವ ಜವಾಬ್ದಾರಿ ಜಯತೀರ್ಥ ಹೆಗಲಿಗೆ ಬಿದ್ದಿದೆ. ಸಿನಿಮಾ ಕೆಲಸಕ್ಕಾಗಿ ಜಯತೀರ್ಥ ಕಾಶಿ ಕಡೆ ಪಯಣ ಬೆಳೆಸಿದ್ದಾರೆ. ವಿಶೇಷ ಅಂದ್ರೆ ಆ ಸಿನಿಮಾಗು ಕಾಶಿಗೂ ಒಂದು ಸಂಬಂಧವಿದೆಯಂತೆ ಹಾಗಾಗಿ ತಂಡದ ಜೊತೆ ಕಾಶಿಗೆ ಹೊರಟಿದ್ದಾರೆ.
ಪ್ರತಿ ಸಿಮಾದಲ್ಲೂ ಏನಾದರೊಂದು ಹೊಸತನದ ಮೂಲಕ ಅಭಿಮಾನಿಗಳ ಮನ ಸೆಳೆಯುವ ಜಯತೀರ್ಥ ಈ ಬಾರಿ ಸಹ ಜಾಹಿದ್ ಖಾನ್ ಗಾಗಿ ವಿಭಿನ್ನವಾದ ಕತೆ ಆಯ್ದು ಕೊಂಡಿದ್ದಾರೆ. ಚಿತ್ರಕ್ಕಾಗಿ ಕಾಶಿಗೆ ಹೊರಟಿರುವ ಜಯತೀರ್ಥ ಮತ್ತು ತಂಡ ಒಂದು ವಾರಗಳ ಕಾಲ ಅಲ್ಲೆ ತಂಗಲಿದ್ದಾರಂತೆ. ಚಿತ್ರಕ್ಕೆ ಬೇಕಾದ ಮಾಹಿತಿಗಳನ್ನು ಅಲ್ಲೆ ಇದ್ದು ಕಲೆಹಾಕಲಿದ್ದಾರಂತೆ ಜಯತೀರ್ಥ.

ಅಲ್ಲಿನ ಪರಿಸರಕ್ಕೆ ಅನುಗುಣವಾದ ಚಿತ್ರಕತೆ ಸಿದ್ಧವಾಗಲಿದೆ. ಈಗಾಗಲೆ ಜಾಹಿದ್ ಕೂಡ ಚಿತ್ರಕ್ಕಾಗಿ ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಬಾಲಿವುಡ್ ನಟ ಅನುಪಮ್ ಖೇರ್ ಅವರ ನಟನಾ ಶಾಲೆಯಲ್ಲಿ ತರಬೇತಿ ಪಡೆದಿದ್ದಾರೆ. ಸದ್ಯ ಚಿತ್ರದ ಪ್ರಿ-ಪ್ರೊಡಕ್ಷನ್ ಕೆಲಸ ನಡೆಯುತ್ತಿದೆ. ಚಿತ್ರದ ಟೈಟಲ್ ಮತ್ತು ಉಳಿದ ಕಲಾವಿದರ ಆಯ್ಕೆ ಇನ್ನು ಅಂತಿಮವಾಗಿಲ್ಲ. ಜಯತೀರ್ಥ ಕಾಶಿಯಿಂದ ಹಿಂತಿರುಗಿದ ಬಳಿಕ ಚಿತ್ರದ ಬಗ್ಗೆ ಹೆಚ್ಚಿನ ಮಾಹಿತಿ ನೀಡುವ ಸಾಧ್ಯತೆ ಇದೆ.


Click it and Unblock the Notifications











