»   » 'ಕಿರಿಕ್ ಪಾರ್ಟಿ' ನಿರ್ದೇಶಕ 'ಬೆಲ್ ಬಾಟಮ್' ಚಿತ್ರಕ್ಕೆ ನಾಯಕ

'ಕಿರಿಕ್ ಪಾರ್ಟಿ' ನಿರ್ದೇಶಕ 'ಬೆಲ್ ಬಾಟಮ್' ಚಿತ್ರಕ್ಕೆ ನಾಯಕ

Posted By:
Subscribe to Filmibeat Kannada
ರಿಷಬ್ ಶೆಟ್ಟಿ 'ಬೆಲ್ ಬಾಟಮ್' ಚಿತ್ರಕ್ಕೆ ನಾಯಕ | Filmibeat Kannada

ಕಳೆದ ವರ್ಷ 'ಬ್ಯೂಟಿಫುಲ್ ಮನಸುಗಳು' ಚಿತ್ರದ ಮೂಲಕ ಸೂಪರ್ ಯಶಸ್ಸು ಕಂಡಿದ್ದ ನಿರ್ದೇಶಕ ಜಯತೀರ್ಥ ನಂತರ 'ವೆನಿಲ್ಲಾ' ಎಂಬ ಹೊಸಬರ ಸಿನಿಮಾ ಶುರು ಮಾಡಿದ್ದರು. ಈಗಾಗಲೇ ಚಿತ್ರೀಕರಣ ಮುಗಿಸಿರುವ 'ವೆನಿಲ್ಲಾ' ಬಿಡುಗಡೆಗೆ ಸಿದ್ದವಾಗಿದೆ. ಈ ಮಧ್ಯೆ ಜಯತೀರ್ಥ ತಮ್ಮ ಹೊಸ ಸಿನಿಮಾವನ್ನ ಕೈಗೆತ್ತಿಕೊಂಡಿದ್ದಾರೆ.

ವಿಶೇಷ ಅಂದ್ರೆ, ಈ ಚಿತ್ರಕ್ಕೆ ನಿರ್ದೇಶಕ ರಿಷಬ್ ಶೆಟ್ಟಿ ನಾಯಕ. 'ರಿಕ್ಕಿ', 'ಕಿರಿಕ್ ಪಾರ್ಟಿ' ಅಂತಹ ಸೂಪರ್ ಹಿಟ್ ಚಿತ್ರಗಳನ್ನ ನಿರ್ದೇಶನ ಮಾಡಿದ್ದ ರಿಷಬ್ ಶೆಟ್ಟಿ ಈಗ ಪೂರ್ಣ ಪ್ರಮಾಣದ ನಾಯಕನಾಗಿ ಅಭಿನಯಿಸುತ್ತಿದ್ದಾರೆ. ಮೂಲತಃ ನಟನಾಗಿದ್ದ ರಿಷಬ್ ಶೆಟ್ಟಿ ನಂತರ ನಿರ್ದೇಶಕರಾಗಿದ್ದರು. ಈಗ ಮತ್ತೆ ತೆರೆಮೇಲೆ ಕಾಣಿಸಿಕೊಳ್ಳುತ್ತಿದ್ದು, ನಾಯಕ ಎಂಬ ಪಟ್ಟ ಅಲಂಕರಿಸುತ್ತಿದ್ದಾರೆ.

ಹೊಸ ಪ್ರಯೋಗಕ್ಕೆ ಮುಂದಾದ ಕನ್ನಡದ ಈ ನಟನನ್ನು ಗುರುತಿಸಿ

Director Jayatheertha new film Bell Bottom

ಅಂದ್ಹಾಗೆ, ಜಯತೀರ್ಥ ನಿರ್ದೇಶನ ಮಾಡಲಿರುವ ಹೊಸ ಚಿತ್ರದ ಟೈಟಲ್ ಏನೆಂದು ಗುರುತಿಸಲು ವಿಭಿನ್ನವಾದ ಪೋಸ್ಟರ್ ಡಿಸೈನ್ ಮಾಡಲಾಗಿದ್ದು, ಚಿತ್ರದ ಹೆಸರನ್ನ ಕಂಡುಹಿಡಿಯಲು ಜನರಿಗೆ ಸವಾಲು ನೀಡಲಾಗಿದೆ. ಮೂಲಗಳ ಪ್ರಕಾರ ಚಿತ್ರಕ್ಕೆ 'ಬೆಲ್ ಬಾಟಮ್' ಎಂದು ಟೈಟಲ್ ಇಡಲಾಗಿದೆಯಂತೆ. ಜನರು ಕೂಡ ಈ ಪೋಸ್ಟರ್ ನೋಡಿ ಅದೇ ಹೆಸರನ್ನ ಕಂಡುಹಿಡಿದಿದ್ದಾರೆ.

Director Jayatheertha new film Bell Bottom

ಸದ್ಯ, ರಿಷಬ್ ಶೆಟ್ಟಿ ತಾನೇ ನಿರ್ದೇಶನ ಮಾಡ್ತಿರೋ 'ಕಥಾ ಸಂಗಮ' ಹಾಗೂ 'ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು' ಚಿತ್ರಗಳಲ್ಲಿ ತೊಡಗಿಕೊಂಡಿದ್ದಾರೆ. ಈ ಎರಡು ಚಿತ್ರಗಳು ಬಹುತೇಕ ಶೂಟಿಂಗ್ ಕಂಪ್ಲೀಟ್ ಮಾಡಿದೆ. ಜಯತೀರ್ಥ ನಿರ್ದೇಶನದ ಈ ಚಿತ್ರಕ್ಕೆ ಅಜನೀಶ್ ಲೋಕನಾಥ್‌ ಸಂಗೀತ ನೀಡುತ್ತಿದ್ದು, ಗೋಲ್ಡನ್‌ ಹಾರ್ಸ್‌ ಸಿನಿಮಾಸ್ ಅಡಿ ಸಂತೋಷ್‌ ಕುಮಾರ್‌ ನಿರ್ಮಾಣ ಮಾಡುತ್ತಿದ್ದಾರೆ. ಇತ್ರದ ಪೂರ್ವ ತಯಾರಿ ಆರಂಭಿಸರುವ ಚಿತ್ರತಂಡ ಸದ್ಯದಲ್ಲೇ ಚಿತ್ರೀಕರಣ ಆರಂಭಿಸಲಿದೆ.

English summary
Director Jayatheertha who is looking forward for the release of his latest film 'Venilla' is all set to start a new film. This time Jayatheertha will be directing a film for Rishab Shetty in lead role.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X