For Quick Alerts
  ALLOW NOTIFICATIONS  
  For Daily Alerts

  ಸಿದ್ಧರಾಗಿರಿ ಬರ್ತಾ ಇದೆ 'ಬೆಲ್ ಬಾಟಂ ಪಾರ್ಟ್ -2'

  |

  'ಬೆಲ್ ಬಾಟಂ' ಸ್ಯಾಂಡಲ್ ವುಡ್ ನಲ್ಲಿ ಸದ್ಯ ಉತ್ತಮ ಪ್ರದರ್ಶನ ಕಾಣುತ್ತಿರುವ ಸಿನಿಮಾ. ಚಿತ್ರ ರಿಲೀಸ್ ಆಗಿ ಸುಮಾರು ಮೂರು ವಾರಗಳನ್ನು ಪೂರೈಸಿ 50 ದಿನಗಳತ್ತ ಯಶಸ್ವಿಯಾಗಿ ಮುನ್ನುಗುತ್ತಿದೆ. ಈ ಸಂದರ್ಭದಲ್ಲಿ ಚಿತ್ರತಂಡದ ಕಡೆಯಿಂದ ಮತ್ತೊಂದು ಸಂತಸದ ಸುದ್ದಿ ಹೊರಬಿದ್ದಿದೆ. ಅದೇನೆಂದರೆ, ಡಿಟೆಕ್ಟಿವ್ ದಿವಾಕರ ಮತ್ತು ಕುಸುಮ ಮತ್ತೆ ಬರ್ತಿದ್ದಾರೆ. ಅಂದರೆ, 'ಬೆಲ್ ಬಾಟಂ ಪಾರ್ಟ್ -2' ಮೂಲಕ ಈ ಪಾತ್ರಗಳನ್ನು ಮತ್ತೆ ಪ್ರೇಕ್ಷಕರ ಮುಂದೆ ತರುವ ಪ್ಲಾನ್ ಮಾಡುತ್ತಿದ್ದಾರೆ ನಿರ್ದೇಶಕ ಜಯತೀರ್ಥ.

  ಸದ್ಯ, ಯಶಸ್ಸಿನ ಅಲೆಯಲ್ಲಿ ತೇಲುತ್ತಿರುವ 'ಬೆಲ್ ಬಾಟಂ' ಸಿನಿಮಾ ತಂಡ ಚಿತ್ರದ ಸೀಕ್ವೆಲ್ ಮಾಡುವ ತಯಾರಿ ನಡೆಸುತ್ತಿದ್ದಾರೆ. ಈಗಾಗಲೇ 'ಬೆಲ್ ಬಾಟಂ' ನೋಡಿ ಬಹುಪರಾಕ್ ಹೇಳಿರುವ ಪ್ರೇಕ್ಷಕರು ಸೀಕ್ವೆಲ್ ಕೂಡ ಇಷ್ಟಪಡೋದ್ರಲ್ಲಿ ಯಾವುದೇ ಅನುಮಾನವಿಲ್ಲ ಅನ್ನೋದು ಚಿತ್ರತಂಡದ ಲೆಕ್ಕಾಚಾರ.

  ಅಂದಹಾಗೆ ಪಾರ್ಟ್ -2 ನಲ್ಲಿಯೂ ಡಿಡೆಕ್ಟಿವ್ ದಿವಾಕರ್ ಆಗಿ ರಿಶಭ್ ಶೆಟ್ಟಿ ಮತ್ತು ಕುಸುಮ ಆಗಿ ಹರಿಪ್ರಿಯಾ ಕಾಣಿಸಿಕೊಳ್ಳುತ್ತಿದ್ದಾರೆ. ಉಳಿದಂತೆ, ಮೊದಲ ಭಾಗ ನಿರ್ಮಾಣ ಮಾಡಿದ್ದ ಸಂತೋಷ್ ಕುಮಾರ್ ಪಾರ್ಟ್-2 ಗೆ ಬಂಡವಾಳ ಹೂಡುತ್ತಿದ್ದಾರೆ. ಮೊದಲ ಭಾಗದಲ್ಲಿದ್ದ ಬಹುತೇಕ ತಂಡ ಇಲ್ಲಿಯೂ ಮುಂದುವರೆಯಲಿದ್ದಾರೆ. ರಿಷಭ್ ಶೆಟ್ಟಿ ಮುಂದಿನ ಸಿನಿಮಾಗಳಲ್ಲಿ ಬ್ಯುಸಿ ಇರುವ ಕಾರಣ 'ಬೆಲ್ ಬಾಟಂ ಪಾರ್ಟ್-2' ಈ ವರ್ಷದ ಕೊನೆಯಲ್ಲಿ ಅಥವಾ ಮುಂದಿನ ವರ್ಷಾರಂಭದಲ್ಲಿ ಅಂದರೆ 2020ರಲ್ಲಿ ಸೆಟ್ಟೇರುವ ಸಾದ್ಯತೆ ಇದೆ.

  80ರ ದಶಕದ ಪತ್ತೆದಾರಿ ಕತೆಯನ್ನು ಇಂಟ್ರೆಸ್ಟಿಂಗ್ ಆಗಿ ಹೆಣೆದು, ಅಷ್ಟೆ ಅಚ್ಚುಕಟ್ಟಾಗಿ ಪ್ರೆಸೆಂಟ್ ಮಾಡಿರುವ ಜಯತೀರ್ಥ ಶ್ರಮಕ್ಕೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಇದೆ ಹುಮ್ಮಸ್ಸಿನ್ನಲ್ಲಿ ಸೀಕ್ವೆಲ್ ಗೆ ತಯಾರಿ ಮಾಡಿಕೊಳ್ಳುತ್ತಿದ್ದಾರೆ ನಿರ್ದೇಶಕರು.

  English summary
  Director Jayatheertha planned to direct 'Bell Bottom part-2' movie. Again actor Rishab Shetty and Haripriya joining hands for Bell bottom sequel.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X