Dhruva Sarja: ಪ್ರೇಮ್-ಧ್ರುವ ಚಿತ್ರಕ್ಕೆ ಮುಹೂರ್ತ ಫಿಕ್ಸ್, ಅಭಿಮಾನಿಗಳೆ ಅತಿಥಿಗಳು!

ನಟ ಧ್ರುವ ಸರ್ಜಾ ಬ್ಯಾಕ್ ಟು ಬ್ಯಾಕ್ ಚಿತ್ರಗಳನ್ನು ಮಾಡುವತ್ತ ಹೆಜ್ಜೆ ಇಟ್ಟಿದ್ದಾರೆ. ಸದ್ಯ 'ಮಾರ್ಟಿನ್' ಚಿತ್ರದಲ್ಲಿ ಧ್ರುವ ಸರ್ಜಾ ಬ್ಯುಸಿಯಾಗಿದ್ದಾರೆ. ಅದಾಗಲೇ ಅವರ ಮುಂದಿನ ಚಿತ್ರ ಪ್ರಕಟ ಆಗಿದೆ. ಈ ಚಿತ್ರಕ್ಕೆ ನಿರ್ದೇಶಕ ಪ್ರೇಮ್ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ತಡ ಮಾಡದೆ ಚಿತ್ರದ ಕೆಲಸಗಳನ್ನು ಆರಂಭಿಸಲು ಚಿತ್ರತಂಡ ಸಜ್ಜಾಗಿದೆ.

ಇನ್ನು 'ಏಕ್‌ ಲವ್ ಯಾ' ಸಿನಿಮಾ ಬಿಡುಗಡೆಯಾದ ಬಳಿಕ ಪ್ರೇಮ್ ಮುಂದಿನ ನಡೆಯ ಬಗ್ಗೆ ಸಾಕಷ್ಟು ಕುತೂಹಲಗಳು ಹುಟ್ಟಿಕೊಂಡಿದ್ದವು. 'ಏಕ್‌ ಲವ್ ಯಾ' ಚಿತ್ರ ರಿಲೀಸ್ ಬೆನ್ನಲ್ಲೇ ಧ್ರುವ ಸರ್ಜಾಗೆ ಪ್ರೇಮ್ ನಿರ್ದೇಶನ ಮಾಡುತ್ತಾರೆ ಎನ್ನುವ ಸುದ್ದಿ ಹೊರ ಬಂದಿತ್ತು. ಈಗ ಈ ಸುದ್ದಿ ಪಕ್ಕಾ ಆಗಿದೆ. ಪ್ರೇಮ್ ಚಿತ್ರದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.

ಪ್ರೇಮ್ ಅಂದರೆ ಡಿಫ್ರೆಂಟ್ ಅಂತ ಅರ್ಥ. ಧ್ರುವ ಅಂದರೆ ಮಾಸ್ ಅಂತ ಅರ್ಥ. ಹಾಗಾಗಿ ಈ ಇಬ್ಬರು ಒಂದಾದರೆ ಸಿನಿಮಾ ಹೇಗೆ ಇರಬಹುದು ಎನ್ನುವ ಕುತೂಹಲ ಹೆಚ್ಚಾಗಿದೆ. ಇನ್ನು ಪ್ರೇಮ್ ಈ ಬಾರಿ ಅಂಡರ್ ವರ್ಲ್ಡ್ ಕಥೆ ಕೈಗೆತ್ತಿ ಕೊಂಡಿದ್ದಾರೆ. ಹಾಗಾಗಿ ನಿರೀಕ್ಷೆ ಹೆಚ್ಚಾಗಿಯೇ ಇದೆ.

Director Jogi Prem And Dhruva Sarja Combination Film Launch On April 24th

ಏಪ್ರಿಲ್ 24ಕ್ಕೆ ಪ್ರೇಮ್- ಧ್ರುವ ಚಿತ್ರ ಲಾಂಚ್!

ಇದೆ ಏಪ್ರಿಲ್ 24ಕ್ಕೆ ಧ್ರುವ ಮತ್ತು ಪ್ರೇಮ್ ಹೊಸ ಚಿತ್ರ ಲಾಂಚ್ ಆಗಲಿದೆ. ಈ ಬಗ್ಗೆ ನಿರ್ದೇಶಕ ಪ್ರೇಮ್ ಟ್ವೀಟ್ ಮಾಡಿ ವಿಚಾರ ಹಂಚಿಕೊಂಡಿದ್ದಾರೆ. ಚಿತ್ರದ ಮುಹೂರ್ತ ಕಾರ್ಯಕ್ರಮಕ್ಕೆ ಅಭಿಮಾನಿಗಳಿಗೆ ಆಹ್ವಾನ ಕೊಟ್ಟಿದ್ದಾರೆ. "ಯುದ್ಧದ ಮುನ್ನುಡಿ ಇಲ್ಲಿಂದ ಆರಂಭ, 24ರಂದು ಬೆಳಿಗ್ಗೆ 9:30ಕ್ಕೆ ತಾಯಿ ಚಾಮುಂಡೇಶ್ವರಿಯ ಸನ್ನಿಧಿಯಲ್ಲಿ ನಡೆಯೋ ಮುಹೂರ್ತಕ್ಕೆ ನೀವೇ ಮುಖ್ಯ ಅತಿಥಿ, ಬನ್ನಿ ಒಟ್ಟಿಗೆ ಹಬ್ಬ ಮಾಡೋಣ, ನಿಮ್ಮ ಆಶೀರ್ವಾದ ಸದಾ ಹೀಗೆ ಇರಲಿ, ಹರಸಿ ಹಾರೈಸಿ. ಸ್ಥಳ: ಮೈಸೂರು ನಾಡದೇವತೆ ಶ್ರೀ ಚಾಮುಂಡೇಶ್ವರಿ ತಾಯಿ ಸನ್ನಿಧಿ." ಎಂದು ಪ್ರೇಮ್ ಟ್ವಿಟ್ ಮಾಡಿದ್ದಾರೆ.

ಈ ಮೂಲಕ ಮುಹೂರ್ತ ಕಾರ್ಯಕ್ರಮಕ್ಕೆ ಅಭಿಮಾನಿಗಳಿಗೆ ಆಹ್ವಾನಿಸಲಾಗಿದ್ದು, ಅವರೆ ಈ ಕಾರ್ಯಕ್ರಮದ ಅತಿಥಿಗಳು ಆಗಿರಲಿದ್ದಾರೆ. ಹಾಗಾಗಿ ನೀವೂ ಕೂಡ ಈ ಕಾರ್ಯಕ್ರಮದಲ್ಲಿ ಭಾಗಿ ಆಗ ಬೇಕು ಎಂದು ಕೊಂಡರೆ ನಿಮಗೆ ಯಾವುದೇ ಅಡ್ಡಿ ಇರುವುದಿಲ್ಲ. 24ರಂದು ಸೀದಾ ಮೈಸೂರಿಗೆ ಹೋಗಿ ಕಾರ್ಯಕ್ರಮದಲ್ಲಿ ಭಾಗಿ ಆಗ ಬಹುದು.

ಇನ್ನು ಈ ಸಂದೇಶದ ಜೊತೆಗೆ ಪ್ರೇಮ್ ಪೋಸ್ಟರ್ ಕೂಡ ಹಂಚಿಕೊಂಡಿದ್ದಾರೆ. ಚಿತ್ರದಲ್ಲಿ ಈ ಪೋಸ್ಟರ್ ಪತನಗೊಂಡ ಕೋಟೆ ಬಾಗಿಲಿನ ಚಿತ್ರ ಹೊಂದಿದೆ. ಕೋಟೆಯ ಮೇಲೆ 1970 ಎಂದು ಬರೆಯಲಾಗಿದೆ. ಇದು ಕೂಡ ಕುತೂಹಲಕ್ಕೆ ಕಾರಣ ಆಗಿದೆ.

ಧ್ರುವ ಸರ್ಜಾಗೆ ಆಕ್ಷನ್ ಹೇಳುತ್ತಿರುವ ಸಿನಿಮಾಗೆ ಇನ್ನೂ ಟೈಟಲ್ ಫಿಕ್ಸ್ ಆಗಿಲ್ಲ. ಲಾಂಚ್ ದಿನವೇ ಟೈಟಲ್‌ ಫಿಕ್ಸ್ ಆಗುವ ಸಾಧ್ಯತೆ ಇದೆ. ಈ ಚಿತ್ರದ ಮೂಲಕ ಕೊತ್ವಾಲ್ ರಾಮಚಂದ್ರ ಹಾಗೂ ಎಂ ಪಿ ಜೈರಾಜ್ ಕಾಲದ ಭೂಗತಲೋಕದ ಕತೆಯೊಂದನ್ನು ತೆರೆಮೇಲೆ ತರಲು ಹೊರಟಿದ್ದಾರೆ ಅನ್ನುವ ಮಾತುಗಳು ಸ್ಯಾಂಡಲ್‌ವುಡ್‌ನಲ್ಲಿ ಹರಿದಾಡುತ್ತಿದೆ. 70ರ ದಶಕಕ್ಕೆ ಹೋಲುವ ಸೆಟ್ಟನ್ನು ನಿರ್ಮಿಸಲಾಗುತ್ತಿದ್ದು, ಇದು ಭೂಗಲೋಕದ ಕಥೆಯನ್ನು ಹೇಳುತ್ತಿದ್ದಾರೆ ಎನ್ನಲಾಗಿದೆ.

More from Filmibeat

English summary
Director Jogi Prem And Dhruva Sarja Combination Film Launch On April 24th In Mysore
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X