ಸಂಜಯ್ ದತ್ ಆಯ್ತು.. ಧ್ರುವ ಸರ್ಜಾ 'KD' ಅಖಾಡಕ್ಕೆ ಬರ್ತಾರಾ ಶಿಲ್ಪಾ ಶೆಟ್ಟಿ?
ಜೋಗಿ ಪ್ರೇಮ್ ನಿರ್ದೇಶನದ 'KD' ಸಿನಿಮಾ ಸ್ಟಾರ್‌ಕಾಸ್ಟ್‌ನಿಂದಲೇ ಭಾರೀ ನಿರೀಕ್ಷೆ ಹುಟ್ಟಾಕ್ಕಿದೆ. ಈಗಾಗಲೇ ತಂಡಕ್ಕೆ ಕ್ರೇಜಿಸ್ಟಾರ್ ರವಿಚಂದ್ರನ್ ಹಾಗೂ ಸಂಜಯ್ ದತ್ ಸೇರಿಕೊಂಡಿದ್ದಾರೆ. ಇದೀಗ ನಟಿ ಶಿಲ್ಪಾ ಶೆಟ್ಟಿ ಹೆಸರು ಕೇಳಿಬರ್ತಿದೆ. ಶಿಲ್ಪಾ ಶೆಟ್ಟಿಗೆ ಸ್ಯಾಂಡಲ್‌ವುಡ್ ಹೊಸದೇನು ಅಲ್ಲ. ಈಗಾಗಲೇ 3 ಚಿತ್ರಗಳಲ್ಲಿ ಬಳಕುವ ಬಳ್ಳಿಯಂತ ಚೆಲುವೆ ಮಿಂಚಿದ್ದಾರೆ. ಬಹಳ ವರ್ಷಗಳ ನಂತರ ಮತ್ತೆ ಕಂಬ್ಯಾಕ್ ಸುಳಿವು ಸಿಕ್ತಿದೆ.
ಉಪೇಂದ್ರ ನಟನೆಯ 'ಆಟೋ ಶಂಕರ್' ಆಕೆಯ ಕೊನೆಯ ಕನ್ನಡ ಸಿನಿಮಾ. ಇದೀಗ 17 ವರ್ಷಗಳ ನಂತರ ಮತ್ತೆ ಶಿಲ್ಪಾ ಕನ್ನಡ ಚಿತ್ರದಲ್ಲಿ ನಟಿಸುವ ಬಗ್ಗೆ ಚರ್ಚೆ ನಡೀತಿದೆ. ಕೆವಿಎನ್ ಪ್ರೊಡಕ್ಷನ್ ಬ್ಯಾನರ್‌ನಲ್ಲಿ 'KD' ಸಿನಿಮಾ ಬಹಳ ಅದ್ಧೂರಿಯಾಗಿ ನಿರ್ಮಾಣ ಆಗುತ್ತಿದೆ. ಚಿತ್ರದಲ್ಲಿ 60- 70ರ ದಶಕದ ಕಥೆಯನ್ನು ಹೇಳಲಾಗುತ್ತಿದೆ. ಆ ಕಾಲಘಟ್ಟವನ್ನು ಕಟ್ಟಿಕೊಡಲು ಚಿತ್ರತಂಡ ಸಾಕಷ್ಟು ಶ್ರಮ ವಹಿಸುತ್ತಿದೆ. ಭಾರೀ ಬಜೆಟ್‌ನಲ್ಲಿ ಸಿನಿಮಾ ನಿರ್ಮಾಣ ಆಗುತ್ತಿದೆ.

ಟೈಟಲ್ ಟೀಸರ್‌ನಿಂದಲೇ 'KD' ಸಿನಿಮಾ ಸಂಚಲನ ಸೃಷ್ಟಿಸಿತ್ತು. ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಸಿನಿಮಾವನ್ನು ಕ್ರೇಮ್ ಕಟ್ಟಿಕೊಡುತ್ತಿದ್ದಾರೆ. ಅದಕ್ಕೆ ತಕ್ಕಂತೆ ಪ್ರೇಮ್ ಬಾಲಿವುಡ್ ಕಲಾವಿದರನ್ನು ತಂಡಕ್ಕೆ ಸೇರಿಸಿಕೊಳ್ಳುತ್ತಿದ್ದಾರೆ. ಆ ಮೂಲಕ ಬಾಲಿವುಡ್‌ನಲ್ಲೂ ಬಝ್ ಕ್ರಿಯೇಟ್ ಮಾಡುವ ಪ್ರಯತ್ನ ನಡೀತಿದೆ. 'KGF'- 2 ಚಿತ್ರದಲ್ಲಿ ಅಧೀರ ಆಗಿ ಅಬ್ಬಸಿದ್ದ ಸಂಜು ಬಾಬಾ ನಟಿಸುತ್ತಿರುವ 2ನೇ ಕನ್ನಡ ಸಿನಿಮಾ ಇದು.
ಪ್ರೇಮ್ ತಮ್ಮ ಸಿನಿಮಾಗಳಿಗೆ ಪರಭಾಷಾ ಕಲಾವಿದರನ್ನು ಕರೆದುಕೊಂಡುವ ಬರುವ ಕೆಲಸವನ್ನು ಬಹಳ ದಿನಗಳಿಂದ ಮಾಡುತ್ತಿದ್ದಾರೆ. ಈ ಮೊದಲು ಚಿತ್ರದ ಸ್ಪೆಷಲ್ ಸಾಂಗ್‌ಗಳಿಗೆ ಬಾಲಿವುಡ್ ಬೆಡಗಿಯರನ್ನು ಕರೆಸುತ್ತಿದ್ದಾರೆ. ಈ ಬಾರಿ ವಿಲನ್ ರೋಲ್‌ಗೆ ಸಂಜಯ್ ದತ್‌ನ ಅಖಾಡಕ್ಕೆ ಇಳಿಸಿದ್ದಾರೆ. ಇನ್ನು 'KD' ಚಿತ್ರದ ಮತ್ತೊಂದು ಮುಖ್ಯವಾದ ಪಾತ್ರಕ್ಕೆ ಶಿಲ್ಪಾ ಶೆಟ್ಟಿ ಹೆಸರು ಕೇಳಿ ಬರ್ತಿದೆ. ಈ ಬಗ್ಗೆ ಚಿತ್ರತಂಡದಿಂದ ಇನ್ನು ಅಧಿಕೃತ ಮಾಹಿತಿ ಸಿಕ್ಕಿಲ್ಲ.

'KD' ಧ್ರುವ ಸರ್ಜಾ ನಟನೆಯ 7ನೇ ಸಿನಿಮಾ. ಪಾತ್ರಕ್ಕಾಗಿ 18 ಕೆಜಿ ತೂಕ ಇಳಿಸಿ ಆಕ್ಷನ್ ಪ್ರಿನ್ಸ್ ಬಣ್ಣ ಹಚ್ಚುತ್ತಿದ್ದಾರೆ. ಧ್ರುವ ನಟನೆಯ 'ಮಾರ್ಟಿನ್' ಸಿನಿಮಾ ಟೀಸರ್ ರಿಲೀಸ್ ಆಗಿ ಸಖತ್ ಸದ್ದು ಮಾಡ್ತಿದೆ. ಚುನಾವಣೆ ನಂತರ ಈ ಸಿನಿಮಾ ತೆರೆಗಪ್ಪಳಿಸಿಲಿದೆ. KD ಈ ವರ್ಷದ ಕೊನೆಗೆ ಅಥವಾ ಮುಂದಿನ ವರ್ಷ ರಿಲೀಸ್ ಆಗುವ ಸಾಧ್ಯತೆಯಿದೆ. ಒಟ್ನಲ್ಲಿ ಮೇಕಿಂಗ್ ಹಂತದಲ್ಲೇ ಸಿನಿಮಾ ಸಖತ್ ಸೌಂಡ್ ಮಾಡ್ತಿರೋದು ಸುಳ್ಳಲ್ಲ.


Click it and Unblock the Notifications











