ಕನ್ನಡ ಸಿನಿಮಾರಂಗದಲ್ಲಿ ಕರಿಯ ಚಿತ್ರ ಬಿಡುಗಡೆಯಾಗಿ ಇಂದಿಗೆ(ಜನವರಿ 3) ಹದಿನೈದು ವರ್ಷಗಳು ಕಳೆದಿವೆ. ಈ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಅಂಗಳಕ್ಕೆ ಕಲಾವಿದರ ಜೊತೆಗೆ ಸಾಕಷ್ಟು ತಂತ್ರಜ್ಞರು ಕೂಡ ಎಂಟ್ರಿಕೊಟ್ಟಿದ್ದಾರೆ. ಕರಿಯ ಚಿತ್ರದ ಹದಿನೈದು ವರ್ಷದ ಸಂಭ್ರಮವನ್ನ ಅಭಿಮಾನಿಗಳು ಆಚರಣೆ ಮಾಡುತ್ತಿದ್ದು ಇತ್ತ ಜೋಗಿ ಪ್ರೇಮ್ ಸಿನಿಮಾರಂಗದಲ್ಲಿ 15 ವರ್ಷ ಪೂರೈಸಿರುವ ಬಗ್ಗೆ ಸಂತಸ ವ್ಯಕ್ತ ಪಡಿಸುತ್ತಿದ್ದಾರೆ.
ಕರಿಯ ಚಿತ್ರದ ಮೂಲಕ ಜೋಗಿ ಪ್ರೇಮ್ ಕನ್ನಡ ಸಿನಿಮಾರಂಗಕ್ಕೆ ಪಾದಾರ್ಪಣೆ ಮಾಡಿದರು. ನಂತರ ಪ್ರೇಮ್ ನಿರ್ದೇಶನ ಮಾಡಿದ ಎಲ್ಲಾ ಚಿತ್ರಗಳು ಸಕ್ಸಸ್ ಆಗಿ ಪ್ರದರ್ಶನ ಕಂಡಿವೆ. ಚಿತ್ರರಂಗಕ್ಕೆ ಬಂದು 15 ವರ್ಷ ಪೂರೈಸಿರೋ ಪ್ರೇಮ್ ಈ ಬಗ್ಗೆ ತಮ್ಮ ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ.
"15 ವರ್ಷದ ಹಿಂದೆ ಈ ದಿನ ನನ್ನ ಮೊದಲ ಚಿತ್ರ ತೆರೆ ಕಂಡಿತ್ತು. ವರ್ಷಕ್ಕೂ ಹೆಚ್ಚು ದಿನಗಳು ಈ ಚಿತ್ರ ಥಿಯೇಟರ್ ನಲ್ಲಿ ಪ್ರದರ್ಶನವಾಗಿತ್ತು. ಕರಿಯ ಚಿತ್ರದಿಂದ ನಮ್ಮ ಚಿತ್ರರಂಗದ ಪ್ರಯಾಣ ಪ್ರಾರಂಭ ಆಯಿತು. ನಿರ್ಮಾಪಕರಾದ ಆನೇಕಲ್ ಬಾಲರಾಜು ಹಾಗೂ ನಟ ದರ್ಶನ್ ಮತ್ತು ಚಿತ್ರದಲ್ಲಿ ಕೆಲಸ ಮಾಡಿದ ಎಲ್ಲಾ ತಂತ್ರಜ್ಙರಿಗೆ ನಾನು ಧನ್ಯವಾದ ತಿಳಿಸುತ್ತೇನೆ" ಎಂದಿದ್ದಾರೆ.
ಕರಿಯ ಚಿತ್ರ ಕನ್ನಡ ಸಿನಿಮಾರಂಗದಲ್ಲಿ ಬಾರಿ ಹೆಸರು ಮಾಡುವುದರ ಜೊತೆಗೆ ನಿರ್ಮಾಪಕರ ಜೇಬಿಗೆ ಬಾರಿ ಹಣವನ್ನ ತಂದುಕೊಟ್ಟಿದ್ದೆ. ಇದೇ ಹೆಸರಿನಲ್ಲಿ ನಿರ್ಮಾಪಕ ಆನೇಕಲ್ ಬಾಲರಾಜು ಮತ್ತೊಂದು ಚಿತ್ರಕ್ಕೆ ಬಂಡವಾಳ ಹಾಕಿದ್ದರು. ಚಿತ್ರದಲ್ಲಿ ಮಯೂರಿ ಹಾಗೂ ಸಂತೋಷ್ ಬಾಲರಾಜು ಅಭಿನಯಿಸಿದ್ದರು.
ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ | Subscribe to Kannada Filmibeat.