ದ್ರಾವಿಡ್ ಬಯೋಪಿಕ್‌ನಲ್ಲಿ ಸುದೀಪ್: ಸಿನಿಮಾ ಮಾಡ್ತೀನಿ ಎಂದ ಬಾಲಿವುಡ್ ನಿರ್ದೇಶಕ

ಇದೀಗ ಬಯೋಪಿಕ್‌ಗಳ ಕಾಲ. ಬಾಲಿವುಡ್‌ನಲ್ಲಿಯಂತೂ ತಿಂಗಳಿಗೊಂದು ಬಯೋಪಿಕ್ ಸಿನಿಮಾಗಳು ಸೆಟ್ಟೇರುತ್ತಿವೆ. ಅದರಲ್ಲಿಯೂ ಕ್ರೀಡಾಪಟುಗಳ ಬಯೋಪಿಕ್‌ಗೆ ಇನ್ನಿಲ್ಲದ ಬೇಡಿಕೆ. ಇದೀಗ ಕಪಿಲ್ ದೇವ್ ಜೀವನ, 1983 ರ ವಿಶ್ವಕಪ್ ವಿಜೇತ ಯಾತ್ರೆ ಕುರಿತಾದ '83' ಸಿನಿಮಾ ತಯಾರಾಗಿದ್ದು ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದೆ.

Recommended Video

'83' ಪ್ರೀ ರಿಲೀಸ್ ನಲ್ಲಿ ಮಾತನಾಡಿದ ಸುದೀಪ್ ಸಾಕಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ

'83' ಸಿನಿಮಾಕ್ಕೆ ಕನ್ನಡದಲ್ಲಿ ಸುದೀಪ್ ಬೆಂಬಲ ದೊರಕಿದ್ದು, ನಿನ್ನೆಯಷ್ಟೆ ಸಿನಿಮಾದ ಪ್ರಚಾರ ಕಾರ್ಯಕ್ರಮ ಬೆಂಗಳೂರಿನಲ್ಲಿ ನಡೆದಿದೆ. ಕಾರ್ಯಕ್ರಮದಲ್ಲಿ ನಟ ರಣ್ವೀರ್ ಸಿಂಗ್, ಕ್ರಿಕೆಟ್ ಕಪಿಲ್ ದೇವ್, ಕೃಷ್ಣಮಾಚಾರಿ ಶ್ರೀಕಾಂತ್, ನಿರ್ದೇಶಕ ಕಬೀರ್ ಸಿಂಗ್ ಹಾಗೂ ನಟ ಸುದೀಪ್ ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ಕನ್ನಡಿಗ ಕ್ರಿಕೆಟಿಗ ರಾಹುಲ್ ದ್ರಾವಿಡ್ ವಿಷಯವೂ ಚರ್ಚೆಗೆ ಬಂತು. ಲೆಜೆಂಡ್ ಕ್ರಿಕೆಟಿಗ ರಾಹುಲ್ ದ್ರಾವಿಡ್ ಜೀವನ ಸಿನಿಮಾ ಆಗಬೇಕು ಎಂಬ ಆಸೆಯನ್ನು ನಿರೂಪಕಿ ವ್ಯಕ್ತಪಡಿಸಿದರು. ಅದರಲ್ಲಿಯೂ ಸುದೀಪ್ ಅವರು ರಾಹುಲ್ ದ್ರಾವಿಡ್ ಪಾತ್ರ ಮಾಡಬೇಕೆಂಬ ಇಚ್ಛೆ ವ್ಯಕ್ತಪಡಿಸಿದರು. ಅದಕ್ಕೆ ಉತ್ತರಿಸಿದ ನಟ ಸುದೀಪ್, ''ನಾನು ನಟಿಸಲು ತಯಾರು, ನಿರ್ದೇಶಕ ಕಬೀರ್ ಸಿಂಗ್ ಇಲ್ಲಿಯೇ ಇದ್ದಾರೆ. ನೀವು ನೇರವಾಗಿ ಅವರನ್ನೇ ಕೇಳಿ ಬಿಡಿ ನಾನಂತೂ ನಟಿಸಲು ತಯಾರಾಗಿದ್ದೀನಿ'' ಎಂದರು.

Director Kabir Singh Agrees To Make Rahul Dravid Biopic, Sudeep Will Be The Lead Actor

ಪ್ರಶ್ನೆಗೆ ಉತ್ತರಿಸಿದ ನಟ ಕಬೀರ್ ಸಿಂಗ್, ''ಹಕ್ಕು ತಂದುಕೊಟ್ಟರೆ ಖಂಡಿತವಾಗಿಯೂ ರಾಹುಲ್ ದ್ರಾವಿಡ್ ಜೀವನದ ಬಗ್ಗೆ ಸಿನಿಮಾ ಮಾಡುತ್ತೇನೆ'' ಎಂದರು.

ಕೂಡಲೇ ಮಾತನಾಡಿದ ನಟ ರಣ್ವೀರ್ ಸಿಂಗ್, ''ಅದ್ಭುತ, ನಿರ್ದೇಶಕ ಇಲ್ಲಿಯೇ ಇದ್ದಾರೆ, ನಿರ್ಮಾಪಕ ಇಲ್ಲಿಯೇ ಇದ್ದಾರೆ. ನಟ ಇಲ್ಲಿಯೇ ಇದ್ದಾರೆ. ಎಲ್ಲರೂ ಒಪ್ಪಿಕೊಂಡು ಆಗಿದೆ. ನಾನು ಈ ಸಿನಿಮಾದಲ್ಲಿ ಯಾವ ಪಾತ್ರ ಮಾಡಬಹುದು?,'' ಎಂದರು

ರಣ್ವೀರ್ ಸಿಂಗ್‌ರಿಗೆ ಮೈಕ್ ಪಡೆದು ಮಾತನಾಡಿದ ಸುದೀಪ್, ''ನೀವು ನಮ್ಮ ಸಿನಿಮಾವನ್ನು ಮುಂಬೈನಲ್ಲಿ ಪ್ರೆಸೆಂಟ್ ಮಾಡಿ ಕೊಡಿ ಸರ್,'' ಎಂದರು. ಇದಕ್ಕೆ ಒಪ್ಪಿಕೊಂಡ ರಣ್ವೀರ್ ಸಿಂಗ್ ಜೋರಾಗಿ ಚಪ್ಪಾಳೆ ತಟ್ಟಿ ಸ್ವಾಗತಿಸಿದರು.

'83' ಸಿನಿಮಾವು ಡಿಸೆಂಬರ್ 24 ರಂದು ವಿಶ್ವದಾದ್ಯಂತ ಬಿಡುಗಡೆ ಆಗುತ್ತಿದ್ದು, ಸಿನಿಮಾವನ್ನು ಕರ್ನಾಟಕದಲ್ಲಿ ನಟ ಸುದೀಪ್ ಪ್ರೆಸೆಂಟ್ ಮಾಡುತ್ತಿದ್ದಾರೆ. ಸಿನಿಮಾದ ಹಂಚಿಕೆಯೂ ಅವರದ್ದೇ ಎನ್ನಲಾಗುತ್ತಿದೆ. '83' ಸಿನಿಮಾವು ಭಾರತ ಕ್ರಿಕೆಟ್ ತಂಡ 1983 ರಲ್ಲಿ ವಿಶ್ವಕಪ್ ಗೆದ್ದ ಕತೆಯಾಗಿದ್ದು, ಕಪಿಲ್ ದೇವ್ ಜೀವನದ ಬಗ್ಗೆ ಹೆಚ್ಚು ಪ್ರಾಮುಖ್ಯತೆ ನೀಡಲಾಗಿದೆ. ರಣ್ವೀರ್ ಸಿಂಗ್ ಕಪಿಲ್ ದೇವ್ ಪಾತ್ರದಲ್ಲಿ ನಟಿಸಿದ್ದಾರೆ. ಕೃಷ್ಣಮಾಚಾರಿ ಶ್ರೀಕಾಂತ್ ಪಾತ್ರದಲ್ಲಿ ತಮಿಳಿನ ನಟ ಜೀವ ನಟಿಸಿದ್ದಾರೆ. ನಟಿ ದೀಪಿಕಾ ಪಡುಕೋಣೆ, ಕಪಿಲ್ ದೇವ್ ಪತ್ನಿಯ ಪಾತ್ರದಲ್ಲಿ ನಟಿಸಿದ್ದಾರೆ. ಸಿನಿಮಾವನ್ನು ಕಬೀರ್ ಸಿಂಗ್ ನಿರ್ದೇಶನ ಮಾಡಿದ್ದು, ದೀಪಿಕಾ ಪಡುಕೋಣೆ, ಸಾಜಿದ್ ನಾಡಿಯಾವಾಲಾ, ವಿಷ್ಣುವರ್ಧನ್ ಇಂಧೂರಿ, ರಿಲಯನ್ಸ್ ಎಂಟರ್ಟೈನ್‌ಮೆಂಟ್, ಫ್ಯಾಂಟಮ್ ಫಿಲಮ್ಸ್ ಅವರುಗಳು ಒಟ್ಟಾಗಿ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ.

More from Filmibeat

English summary
Bollywood Director Kabir Singh said he will make Rahul Dravid biopic, He some one bring rights. Sudeep will be leading actor in that movie.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X