For Quick Alerts
  ALLOW NOTIFICATIONS  
  For Daily Alerts

  ವಿಡಿಯೋ ರಿಲೀಸ್ ಮಾಡಿದ್ರೆ ನಿಮ್ಮ ಮನೆ ವಾಚ್‌ಮ್ಯಾನ್ ಆಗ್ತೀನಿ: ಸಂಬರ್ಗಿಗೆ ಸವಾಲು

  By ಫಿಲ್ಮಿಬೀಟ್ ಡೆಸ್ಕ್
  |

  ಸ್ಯಾಂಡಲ್‌ವುಡ್ ಡ್ರಗ್ಸ್ ಪ್ರಕರಣದಲ್ಲಿ ಮೈಲೇಜು ಗಿಟ್ಟಿಸಿರುವ, ಗಿಟ್ಟಿಸಲು ಯತ್ನಿಸುತ್ತಿರುವ ಪ್ರಶಾಂತ್ ಸಂಬರ್ಗಿಗೆ ಸ್ಯಾಂಡಲ್‌ವುಡ್‌ನ ಯುವ ನಿರ್ದೇಶಕನೊಬ್ಬ ಬಹಿರಂಗ ಸವಾಲು ಹಾಕಿದ್ದಾರೆ.

  ಪ್ರಶಾಂತ್ ಸಂಬರ್ಗಿ ಗಂಡಸ್ತನಕ್ಕೆ ಸವಾಲ್ ಹಾಕಿದ ಕೀರ್ತನ್ ಶೆಟ್ಟಿ

  ಎರಡು ದಿನದ ಹಿಂದೆ ಅನುಶ್ರೀ ಹೆಸರು ಡ್ರಗ್ಸ್ ಪ್ರಕರಣದಲ್ಲಿ ಸುಖಾ-ಸುಮ್ಮನೆ ಕೇಳಿಬಂದಾಗ ಸುದ್ದಿಗೋಷ್ಠಿ ನಡೆಸಿದ್ದ ಪ್ರಶಾಂತ್ ಸಂಬರ್ಗಿ, ನವೆಂಬರ್ ಒಂದರಂದು ಆಡಿಯೋ ಬಿಡುಗಡೆ ಮಾಡುತ್ತೇನೆ, ವಿಡಿಯೋ ಬಿಡುಗಡೆ ಮಾಡುತ್ತೇನೆ ಎಂದು ಗಾಳಿಯಲ್ಲಿ ಗುಂಡು ಹಾರಿಸಿದ್ದರು.

  ಇದರ ಬಗ್ಗೆ ಪ್ರತಿಕ್ರಿಯಿಸಿರುವ ಸ್ಯಾಂಡಲ್‌ವುಡ್ ಯುವ ನಿರ್ದೇಶಕ ಕೀರ್ತನೆ ಶೆಟ್ಟಿ ಪ್ರಶಾಂತ್ ಸಂಬರ್ಗಿಗೆ ನೇರವಾಗಿ ಸವಾಲು ಹಾಕಿದ್ದಾರೆ. ''ನೀವು ಗಂಡಸಾಗಿದ್ರೆ ನವೆಂಬರ್ 1 ಕ್ಕೆ ವಿಡಿಯೋ ಬಿಡುಗಡೆ ಮಾಡಿ'' ಎಂದು ಸವಾಲು ಎಸೆದಿದ್ದಾರೆ.

  ''ಥಾಕತ್ ಇದ್ದರೆ ಡ್ರಗ್ಸ್ ನಿರ್ಮೂಲನೆ ಮಾಡಿ. ನೀವು ಗಂಡಸೇ ಆಗಿದ್ರೆ ನವೆಂಬರ್ 1 ಕ್ಕೆ ವಿಡಿಯೋ ಬಿಡುಗಡೆ ಮಾಡಿ. ನಿಮ್ಮ ಪ್ರಚಾರದ ಹುಚ್ಚಿಗೆ ಸುಮ್ಮನೆ ಕಂಡ-ಕಂಡ ಹೆಣ್ಣು ಮಕ್ಕಳ ಜೀವನ ಹಾಳು ಮಾಡಬೇಡಿ. ನವೆಂಬರ್ ಒಂದನೇ ತಾರೀಖಿಕ್ಕೆ ಪ್ರಶಾಂತ್ ಸಂಬರ್ಗಿ ಸ್ಪೋಟಕ ಆಡಿಯೋ ರಿಲೀಸ್ ಮಾಡಿದ್ರೇ ನಾನು ನನ್ನ ಅರ್ಧ ಮೀಸೆಯನ್ನು ಬೋಳಿಸುತ್ತೇನೆ ಹಾಗೂ ಸಾಯುವವರೆಗೂ ಪ್ರಶಾಂತ್ ಸಂಬರ್ಗಿಯವರ ಮನೆಯ "ವಾಚ್ ಮ್ಯಾನ್" ಆಗಿ ಕೆಲಸ ಮಾಡುತ್ತೇನೆ'' ಎಂದು ಕೀರ್ತನ್ ಶೆಟ್ಟಿ ಸವಾಲು ಹಾಕಿದ್ದಾರೆ.

  ಪ್ರಚಾರಕ್ಕಾಗಿ ಸುಳ್ಳು ಆರೋಪ ಮಾಡಬೇಡಿ: ಕೀರ್ತನ್

  ಪ್ರಚಾರಕ್ಕಾಗಿ ಸುಳ್ಳು ಆರೋಪ ಮಾಡಬೇಡಿ: ಕೀರ್ತನ್

  ''ಡ್ರಗ್ಸ್ ಬುಡ ಸಮೇತ ಕಿತ್ತು ಹಾಕಿ ಅದು ಬಿಟ್ಟು ಇಲ್ಲಸಲ್ಲದ ನಿಮ್ಮ ಪ್ರಚಾರಕ್ಕಾಗಿ ಕನ್ನಡ ಚಿತ್ರರಂಗದ ಮರ್ಯಾದೆ ತೆಗಿಬೇಡ್ರಿ. ನೀವೊಬ್ಬ ಮಹಾನ್ ಸುಳ್ಳುಗಾರ ಎಲ್ಲರಿಗೂ ಒಂದೇ ನ್ಯಾಯ ಇರ್ಲಿ ನಿಮಗೆ ವಾರ್ನಿಂಗ್ ಮಾಡ್ತಾ ಇದ್ದೀನಿ ನಿಮ್ಮ ಹತ್ತಿರ ಸರಿಯಾದ ಸಾಕ್ಷ್ಯ ಇದ್ದರೆ ಅದನ್ನು ನಾಳೆ ಬೆಳಿಗ್ಗೆ ಬಿಡುಗಡೆ ಮಾಡಿ ನಿಮ್ಮ ಪಬ್ಲಿಕ್ ಸಿಟಿ ತೆವಲಿಗೋಸ್ಕರ ಪರಭಾಷೆಯ ಮುಂದೆ ನಮ್ಮ ಕನ್ನಡ ಚಿತ್ರರಂಗದ ಮಾನಾ ಮರ್ಯಾದೆ ತೆಗಿಬೇಡಿ ಇಂದ್ರಜಿತ್ ಲಂಕೇಶ್ ಅವರೇ ಇದನ್ನು ನಿಮಗೂ ಸೇರಿಸಿಯೇ ಹೇಳುತ್ತಿದ್ದೇನೆ'' ಎಂದಿದ್ದಾರೆ ಕೀರ್ತನ್ ಶೆಟ್ಟಿ.

  ನಿನ್ನ ಬಳಿ ಸಾಕ್ಷಿ ಇದ್ದರಷ್ಟೆ ಮಾತನಾಡು: ಕೀರ್ತನ್ ಶೆಟ್ಟಿ

  ನಿನ್ನ ಬಳಿ ಸಾಕ್ಷಿ ಇದ್ದರಷ್ಟೆ ಮಾತನಾಡು: ಕೀರ್ತನ್ ಶೆಟ್ಟಿ

  ಕಿರಿಕ್ ಹುಡುಗ ಕೀರ್ತನ್ ಶೆಟ್ಟಿ, ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪ್ರಶಾಂತ್ ಸಂಬರ್ಗಿಗೆ ಸವಾಲು ಎಸೆದಿದ್ದು, 'ಅನುಶ್ರೀಯ 12 ಕೋಟಿ ಆಸ್ತಿಯ ಬಗ್ಗೆ ಮಾತಾಡ್ತೀಯ, ಮೂರು-ನಾಲ್ಕು ಸಿನಿಮಾ ಮಾಡಿರುವ ನಟಿಯರೇ ಬಿಎಂಡಬ್ಲು ನಲ್ಲಿ ಓಡಾಡ್ತಿದ್ದಾರೆ. ಸ್ವಂತ ಅಪಾರ್ಟ್‌ಮೆಂಟ್‌ಗಳನ್ನು ಖರೀದಿಸಿದ್ದಾರೆ. ನಿನ್ನ ಬಳಿ ಸಾಕ್ಷಿ ಇದ್ದರಷ್ಟೆ ಆ ಬಗ್ಗೆ ಮಾತನಾಡಿ'' ಎಂದಿದ್ದಾರೆ.

  ಅನುಶ್ರೀ ವಿರುದ್ಧ ಹಲವು ಹೇಳಿಕೆಗಳು

  ಅನುಶ್ರೀ ವಿರುದ್ಧ ಹಲವು ಹೇಳಿಕೆಗಳು

  ಡ್ರಗ್ಸ್ ಪ್ರಕರಣ ಹೊರಗೆ ಬಂದಾಗಿನಿಂದಲೂ ಪ್ರಶಾಂತ್ ಸಂಬರ್ಗಿ ನಟಿಯರನ್ನು ಗುರಿ ಮಾಡಿಕೊಂಡು ಹೇಳಿಕೆಗಳನ್ನು ನೀಡುತ್ತಲೇ ಇದ್ದಾರೆ. ವಿಶೇಷವಾಗಿ ಸಂಜನಾ ಗಲ್ರಾನಿ ಬಗ್ಗೆ ವಿಪರೀತ ಹೇಳಿಕೆಗಳನ್ನು ನೀಡಿದ್ದ ಪ್ರಶಾಂತ್ ಸಂಬರ್ಗಿ ಶ್ರೀಲಂಕಾದ ಕಸಿನೊ ಕತೆಗಳನ್ನು ಹೇಳಿದ್ದರು. ಆದರೆ ಯಾವೊಂದು ಆರೋಪಕ್ಕೂ ಸಾಕ್ಷ್ಯಗಳನ್ನು ನೀಡಲಿಲ್ಲ. ಅನುಶ್ರೀ ಹೆಸರು ಡ್ರಗ್ಸ್ ಪ್ರಕರಣದಲ್ಲಿ ಕೇಳಿಬಂದಾಗಲೂ ಪ್ರಶಾಂತ್ ಸಂಬರ್ಗಿ, ಅನುಶ್ರೀಗೆ 'ಶುಗರ್ ಡ್ಯಾಡಿ' ಇದ್ದಾರೆ. ಅವರಿಂದಲೇ ಕೋಟಿಗಟ್ಟಲೆ ಹಣ ಸಂಪಾದನೆ ಮಾಡಿದ್ದಾರೆ. ಡ್ರಗ್ಸ್ ವ್ಯಾಪಾರದಲ್ಲಿ ನಿರತರಾಗಿದ್ದಾರೆ ಇನ್ನೂ ಹಲವು ಆರೋಪಗಳನ್ನು ಮಾಡಿದ್ದರು. ಆದರೆ ಯಾವುದಕ್ಕೂ ಈವರೆಗೆ ಸಾಕ್ಷ್ಯ ನೀಡಿಲ್ಲ. ಅಲ್ಲದೆ ಮಂಗಳೂರು ಪೊಲೀಸರು ಸಹ ಅನುಶ್ರೀಯನ್ನು ದೋಷಾರೋಪ ಪಟ್ಟಿಯಿಂದ ಕೈಬಿಟ್ಟಿದ್ದಾರೆ.

  ಪ್ರಶಾಂತ್ ವಿರುದ್ಧ ಪೋಸ್ಟ್ ಹಾಕಿದ ಚಕ್ರವರ್ತಿ ಚಂದ್ರಚೂಡ್

  ಪ್ರಶಾಂತ್ ವಿರುದ್ಧ ಪೋಸ್ಟ್ ಹಾಕಿದ ಚಕ್ರವರ್ತಿ ಚಂದ್ರಚೂಡ್

  ನಿರ್ದೇಶಕ, ನಟ, ಮಾಜಿ ಬಿಗ್‌ಬಾಸ್ ಸ್ಪರ್ಧಿ ಚಕ್ರವರ್ತಿ ಚಂದ್ರಚೂಡ್ ಸಹ ಪ್ರಶಾಂತ್ ಸಂಬರ್ಗಿ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದು, ಪ್ರಶಾಂತ್ ಸಂಬರ್ಗಿಯ ನಿಜ ವ್ಯಕ್ತಿತ್ವವನ್ನು ಬಹಿರಂಗಪಡಿಸಿದ್ದಾರೆ. ಬಿಗ್‌ಬಾಸ್ ಮನೆಯಲ್ಲಿ ಪ್ರಶಾಂತ್ ಸಂಬರ್ಗಿ ಏನು ಮಾಡಿದರು. ಯಾರಿಗೆ ಮೋಸ ಮಾಡಿದರು. ಹಣ ಗಳಿಸಿದ್ದು ಹೇಗೆ? ಇನ್ನೂ ಹಲವು ವಿಷಯಗಳನ್ನು ಚಕ್ರವರ್ತಿ ಚಂದ್ರಚೂಡ್ ಬರೆದಿದ್ದಾರೆ.

  English summary
  Director Keerthan Shetty open challenge to Prashant Sambargi. He said if Prashant has guts then he should release video about actress involving in drugs.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X