For Quick Alerts
  ALLOW NOTIFICATIONS  
  For Daily Alerts

  ಫೋನ್ ಮಾಡಿ ಹಿಂದಿಯಲ್ಲಿ ಮಾತಾಡಿದ ಟಾಟಾ ಸ್ಕೈ ಸಿಬ್ಬಂದಿ, ಕೆಎಂ ಚೈತನ್ಯ ಏನಂದ್ರು?

  |

  ಭಾರತದಲ್ಲಿ ಹಿಂದಿ ರಾಷ್ಟ್ರೀಯ ಭಾಷೆ ಎಂದು ಅನೇಕರು ಅಂದುಕೊಂಡು ಬಿಟ್ಟಿದ್ದಾರೆ. ಓದು-ಬರಹ ತಿಳಿಯದ ಹಾಗೂ ಅವಿದ್ಯಾವಂತರು ಸಹ ಹಿಂದಿ ನಮ್ಮ ರಾಷ್ಟ್ರ ಭಾಷೆ ಎನ್ನುವ ಮಟ್ಟಿಗೆ ಪ್ರಭಾವ ಬೀರಿದೆ. ಆದರೆ, ಭಾರತದಲ್ಲಿ ಹಿಂದಿ ಅಧಿಕೃತ ರಾಷ್ಟ್ರೀಯ ಭಾಷೆಯಲ್ಲ.

  ಉತ್ತರ ಭಾರತದ ಭಾಗಗಳಲ್ಲಿ ಹಿಂದಿ ಹೆಚ್ಚು ಬಳಕೆಯಾಗುತ್ತೆ. ಆದರೆ, ದಕ್ಷಿಣ ಭಾರತದಲ್ಲಿ ಹಿಂದಿ ಹೇರಿಕೆಗೆ ಭಾರಿ ವಿರೋಧ ಇದೆ. ಪ್ರಾದೇಶಿಕ ಭಾಷೆಗೆ ಹೆಚ್ಚು ಮನ್ನಣೆ ನೀಡಲಾಗುತ್ತೆ. ಇದೆಲ್ಲ ಏಕೆ ಹೇಳ್ತಿದ್ದೀವಿ ಅಂದ್ರೆ, ಕನ್ನಡ ಸಿನಿಮಾ ನಿರ್ದೇಶಕ ಕೆಎಂ ಚೈತನ್ಯ ಅವರು ಹಿಂದಿ ಹೇರಿಕೆ ಕುರಿತು ಮಾತನಾಡಿದ್ದಾರೆ.

  ಕನ್ನಡ ಓಕೆ, ಹಿಂದಿ ಯಾಕೆ: ಹಿಂದಿ ಹೇರಿಕೆಗೆ ಕನ್ನಡ ಚಿತ್ರರಂಗದ ಧಿಕ್ಕಾರ!ಕನ್ನಡ ಓಕೆ, ಹಿಂದಿ ಯಾಕೆ: ಹಿಂದಿ ಹೇರಿಕೆಗೆ ಕನ್ನಡ ಚಿತ್ರರಂಗದ ಧಿಕ್ಕಾರ!

  ಕರ್ನಾಟಕದಲ್ಲಿ ಹಾಗೂ ಕನ್ನಡ ಚಿತ್ರರಂಗದಲ್ಲಿ ಹಿಂದಿ ಹೇರಿಕೆಗೆ ವಿರೋಧ ಇದೆ. ಇನ್ನು ಬೆಳ್ಳಂಬೆಳಗ್ಗೆ ಟಾಟಾ ಸ್ಕೈ ಸಿಬ್ಬಂದಿಯೊಬ್ಬರು ಫೋನ್ ಮಾಡಿ ಹಿಂದಿಯಲ್ಲಿ ಮಾತು ಶುರು ಮಾಡಿದ್ದಾರೆ. ಅದನ್ನು ತಡೆದ ಚೈತನ್ಯ ಏನು ಮಾಡಿದ್ರು? ಮುಂದೆ ಓದಿ....

  ಫೋನ್ ಮಾಡಿದ ಟಾಟಾ ಸ್ಕೈ ಸಿಬ್ಬಂದಿ

  ಫೋನ್ ಮಾಡಿದ ಟಾಟಾ ಸ್ಕೈ ಸಿಬ್ಬಂದಿ

  ''ಈ ಬೆಳಿಗ್ಗೆ, ಟಾಟಾ ಸ್ಕೈನಿಂದ ನನಗೆ ಕರೆ ಬಂತು. ಕರೆ ಮಾಡಿದ ವ್ಯಕ್ತಿ ಹಿಂದಿಯಲ್ಲಿ ಮಾತನಾಡಲು ಆರಂಭಿಸಿದರು. ಒಂದು ಹಂತದಲ್ಲಿ ಅವನ್ನು ನಿಲ್ಲಿಸಿ, ಇಂಗ್ಲಿಷ್ ಅಥವಾ ಕನ್ನಡದಲ್ಲಿ ಮಾತನಾಡಬಹುದೇ ಎಂದು ಕೇಳಿದೆ. ನಾನು ಹಿಂದಿ ವಿರುದ್ಧ ಅಲ್ಲ. ನನಗೆ ಹಿಂದಿ ಸಿನಿಮಾ ಮತ್ತು ಸಂಗೀತ ತುಂಬಾ ಇಷ್ಟ. ಆದರೆ, ನಾನೊಬ್ಬ ಕನ್ನಡಿಗನಾಗಿ, ಬೇರೆ ಭಾಷೆಯಲ್ಲಿ ವ್ಯವಹರಿಸಿದಾಗ ಕೆಲವು ವಿವರಗಳನ್ನು ಕಳೆದುಕೊಳ್ಳುತ್ತೇನೆ'' ಎಂದು ಹಿಂದಿ ಭಾಷೆಯ ಪ್ರಭಾವ ಕುರಿತು ಅನುಭವ ಹಂಚಿಕೊಂಡರು.

  ಹಿಂದಿ ಮಾತನಾಡುವವರಲ್ಲಿ ಒಂದು ಕೆಟ್ಟ ಭಾವನೆ

  ಹಿಂದಿ ಮಾತನಾಡುವವರಲ್ಲಿ ಒಂದು ಕೆಟ್ಟ ಭಾವನೆ

  'ನಾನು ಬೇರೆ ಭಾಷೆಯವರೊಂದಿಗೆ ಮಾತನಾಡುವಾಗ, ನಾನು ಕನ್ನಡಿಗನಾಗಿದ್ದರೂ, ಅವರ ಭಾಷೆಗೆ ಬೇಗನೆ ಹೋಗುತ್ತೇನೆ. ಅಥವಾ ನಾನು ಇಂಗ್ಲಿಷ್‌ನಲ್ಲಿ ಮಾತನಾಡುತ್ತೇನೆ. ಹಿಂದಿ ಮಾತನಾಡುವವರ ಬಳಿ ಒಂದು ಸಮಸ್ಯೆ ಇದೆ. ಹಿಂದಿ ಮಾತನಾಡಲು ಎಲ್ಲರಿಗೂ ಬರುತ್ತೆ ಎಂದು ಭಾವಿಸಿಬಿಡುತ್ತಾರೆ. ಏಕಂದರೆ, ಅವರ ಮನಸ್ಸಿನಲ್ಲಿ ಹಿಂದಿ ರಾಷ್ಟ್ರೀಯ ಭಾಷೆ, ಅದು ಭಾರತದಲ್ಲಿ ಎಲ್ಲರಿಗೂ ತಿಳಿದಿದೆ ಅಂದುಕೊಂಡಿರುತ್ತಾರೆ'

  ಹಿಂದಿ ಹೇರಿಕೆ ವಿರುದ್ಧ ತೊಡೆ ತಟ್ಟಿ ನಿಂದ ದೊಡ್ಮನೆ ಮೊಮ್ಮಗಹಿಂದಿ ಹೇರಿಕೆ ವಿರುದ್ಧ ತೊಡೆ ತಟ್ಟಿ ನಿಂದ ದೊಡ್ಮನೆ ಮೊಮ್ಮಗ

  ದಕ್ಷಿಣ ಭಾರತೀಯರಿಗೆ ಹಿಂದಿ-ಇಂಗ್ಲಿಷ್ ಒಂದೇ

  ದಕ್ಷಿಣ ಭಾರತೀಯರಿಗೆ ಹಿಂದಿ-ಇಂಗ್ಲಿಷ್ ಒಂದೇ

  'ಕಾನೂನಿನ ಪ್ರಕಾರ ಭಾರತದ ಎಲ್ಲ ಭಾಷೆಗಳು ಅಧಿಕೃತ ಭಾಷೆಗಳೇ. ಇಂಗ್ಲಿಷ್ ಬದಲಿಗೆ ಹಿಂದಿ ಹೆಚ್ಚು ಬಳಕೆಯಾಗಬೇಕು ಎಂದು ವಾದಿಸುವವರು ಇದ್ದಾರೆ. ಏಕಂದ್ರೆ, ಹಿಂದಿ ಭಾರತದ ಭಾಷೆ. ವಾಸ್ತವ ಏನಂದರೆ, ದಕ್ಷಿಣ ಭಾರತೀಯರಿಗೆ ಹಿಂದಿ ಸಹ ಇಂಗ್ಲಿಷ್ ಭಾಷೆಯಿದ್ದಂತೆ' ಎಂದು ನಿರ್ದೇಶಕ ತಿಳಿಸಿದ್ದಾರೆ.

  ನಿಮ್ಮ ಭಾಷೆಗೆ ಮಾನ್ಯತೆ ನೀಡಿ

  ನಿಮ್ಮ ಭಾಷೆಗೆ ಮಾನ್ಯತೆ ನೀಡಿ

  ''ನಿಮ್ಮ ಆಫೀಸ್‌ನಲ್ಲಿ ಯಾರಾದರೂ ಹಿಂದಿಯಲ್ಲಿ ಮಾತನಾಡಲು ಶುರು ಮಾಡಿದರೆ, ನೀವು ನಿಮ್ಮ ಮಾತೃಭಾಷೆಯಲ್ಲಿ ಮಾತನಾಡಲು ಆರಂಭಿಸಿ. ಒಂದು ವೇಳೆ ಇತರರು ನಿಮ್ಮನ್ನು ಆಕ್ಷೇಪಿಸಿದರೆ, ಅವರಿಗೆ ಸಮಸ್ಯೆ ಎಲ್ಲಿದೆ ಎಂದು ಹೇಳಿ'' ಎಂದು ನಿರ್ದೇಶಕ ಕೆ ಎಂ ಚೈತನ್ಯ ಅಭಿಪ್ರಾಯ ಹಂಚಿಕೊಂಡಿದ್ದಾರೆ.

  English summary
  Kannada director Director KM Chaitanya displeasure on hindi imposition.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X