»   » ಸುದೀಪ್ ಚಿತ್ರಕ್ಕೆ ಸ್ಕ್ರಿಪ್ ಬರೆಯಲು ಹೆಬ್ಬುಲಿ ಕೃಷ್ಣ ಎಲ್ಲಿ ಹೋಗಿದ್ದಾರೆ?

ಸುದೀಪ್ ಚಿತ್ರಕ್ಕೆ ಸ್ಕ್ರಿಪ್ ಬರೆಯಲು ಹೆಬ್ಬುಲಿ ಕೃಷ್ಣ ಎಲ್ಲಿ ಹೋಗಿದ್ದಾರೆ?

Posted By:
Subscribe to Filmibeat Kannada

'ಹೆಬ್ಬುಲಿ' ಚಿತ್ರ ಸೂಪರ್ ಹಿಟ್ ಆದ ಚಿತ್ರದ ನಂತರ ನಿರ್ದೇಶಕ ಕೃಷ್ಣ ಮತ್ತು ಕಿಚ್ಚ ಸುದೀಪ್ ಕಾಂಬಿನೇಷನ್ ನಲ್ಲಿ ಮತ್ತೊಂದು ಸಿನಿಮಾ ಮೂಡಿ ಬರಲಿದೆ ಎಂದು ಘೋಷಣೆ ಮಾಡಿದ್ದರು. ಈ ಚಿತ್ರದ ಸಿದ್ದತೆಯಲ್ಲಿ ನಿರ್ದೇಶಕ ಕೃಷ್ಣ ತೊಡಗಿಸಿಕೊಂಡಿದ್ದಾರೆ.

'ಹೆಬ್ಬುಲಿ ಕೃಷ್ಣ' ಮನೆಗೆ ಬಂತು ದುಬಾರಿ ಕಾರ್!

ಪ್ರೇಮ್ ನಿರ್ದೇಶನ ಮಾಡುತ್ತಿರುವ 'ದಿ ವಿಲನ್' ಚಿತ್ರದಲ್ಲಿ ಸುದೀಪ್ ಬ್ಯುಸಿಯಾಗಿದ್ದಾರೆ. ಅದಾದ ನಂತರ ರಕ್ಷಿತ್ ಶೆಟ್ಟಿ ಆಕ್ಷನ್ ಕಟ್ ಹೇಳಲಿರುವ 'ಥಗ್ಸ್ ಆಫ್ ಮಾಲ್ಗುಡಿ' ಶುರುವಾಗಲಿದೆಯಂತೆ. ಒಂದು ಪಕ್ಷ ರಕ್ಷಿತ್ ಸ್ಕ್ರಿಪ್ಟ್ ವರ್ಕ್ ವಿಳಂಬವಾದ್ರೆ, ಅದಕ್ಕು ಮುಂಚೆ ಕೃಷ್ಣ ಅವರ ಹೊಸ ಚಿತ್ರ ಶುರುವಾಗಲಿದೆ ಎನ್ನಲಾಗುತ್ತಿದೆ.

ಕಿಚ್ಚ ಸುದೀಪ್ ಕಡೆಯಿಂದ 'ಹೆಬ್ಬುಲಿ' ಕೃಷ್ಣ ಬಾಯಿಗೆ ಲಡ್ಡು ಬಂದು ಬಿದ್ದಾಗ...

Director Krishna Start Script Writing For Sudeep

ಈಗಾಗಲೇ ನಿರ್ದೇಶಕ ಕೃಷ್ಣ, ಸುದೀಪ್ ಅವರಿಗೆ ಒನ್ ಲೈನ್ ಕಥೆ ಹೇಳಿದ್ದಾರಂತೆ. ಕಥೆ ಕೇಳಿ ಸುದೀಪ್ ಕೂಡ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರಂತೆ. ಇನ್ನು ಚಿತ್ರದ ಬಗ್ಗೆ ಮತ್ತು ಕಥೆ ಬಗ್ಗೆ ಒಂದಿಷ್ಟು ಸುಳಿವು ಬಿಟ್ಟುಕೊಡದ ನಿರ್ದೇಶಕ ಕೃಷ್ಣ ಅಂಡ್ ಟೀಮ್ ಈಗ ಸ್ಕ್ರೀಪ್ಟ್ ಬರೆಯಲು ಹೈದ್ರಾಬಾದ್ ಗೆ ಹೋಗಿದ್ದಾರೆ ಎನ್ನಲಾಗಿದೆ. ಒಟ್ನಲ್ಲಿ, ಹೆಬ್ಬುಲಿ ಅಂತಹ ಮೆಗಾಹಿಟ್ ಕೊಟ್ಟ ನಿರ್ದೇಶಕ ಈಗ ಮತ್ತೊಂದು ನಿರೀಕ್ಷೆಯ ಸಿನಿಮಾ ಮಾಡಲು ಸಖತ್ ತಯಾರಿ ಮಾಡಿಕೊಳ್ಳುತ್ತಿದ್ದಾರೆ.

'ಹೆಬ್ಬುಲಿ' ಗೆದ್ದಿದ್ದಕ್ಕೆ 'ಕಿಚ್ಚ'ನ ಮನೆಯಲ್ಲಿ ಸಕ್ಸಸ್ ಪಾರ್ಟಿ!

English summary
Director, Cinematographer Krishna who will be Directing Sudeep's next film is in Hyderabad to complete the Script for it.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada