'ಪೈಲ್ವಾನ್' ಜೊತೆ ಬರ್ತ್ ಡೇ ಆಚರಿಸಿದವರು ಯಾರು?
Recommended Video

ಪೈಲ್ವಾನ್ ಸೆಟ್‌ನಲ್ಲಿ ಯಾರ ಹುಟ್ಟುಹಬ್ಬ ಆಗಿದ್ದು..? | Filmibeat Kannada
ನಟ ಸುದೀಪ್ ಈಗ ಬ್ಯುಸಿ ಇರುವ ಚಿತ್ರಗಳ ಪೈಕಿ 'ಪೈಲ್ವಾನ್' ಕೂಡ ಒಂದಾಗಿದೆ. ಈ ಸಿನಿಮಾದ ಶೂಟಿಂಗ್ ಈಗ ಜೋರಾಗಿ ಸಾಗುತ್ತಿದ್ದು, ಇದರ ನಡುವೆ ಹುಟ್ಟುಹಬ್ಬದ ಆಚರಣೆ ಕೂಡ ನಡೆದಿದೆ.
ಈ ಚಿತ್ರವನ್ನ 'ಹೆಬ್ಬುಲಿ' ಖ್ಯಾತಿಯ ಕೃಷ್ಣ ನಿರ್ದೇಶನ ಮಾಡಿದ್ದಾರೆ. ಅವರ ಪತ್ನಿ ಸ್ವಪ್ನಾ ಅವರ ಬರ್ತ್ ಡೇಯನ್ನು ಶೂಟಿಂಗ್ ಸೆಟ್ ನಲ್ಲಿ ಮಾಡಲಾಗಿದೆ. ಕೇಕ್ ಕಟ್ ಮಾಡಿ ಚಿತ್ರತಂಡದ ಜೊತೆಗೆ ಸ್ವಪ್ನಾ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ.
ಸುದೀಪ್ ಕೂಡ ಈ ಹುಟ್ಟುಹಬ್ಬದ ಸಂಭ್ರಮದಲ್ಲಿ ಭಾಗಿಯಾಗಿದ್ದರು. ಇನ್ನು ಸುದೀಪ್ ಪತ್ನಿ ಪ್ರಿಯಾ ಸುದೀಪ್ ಟ್ವಿಟರ್ ಖಾತೆಯ ಮೂಲಕ ಸ್ವಪ್ನಾ ಅವರಿಗೆ ಶುಭಾಶಯ ತಿಳಿಸಿದ್ದಾರೆ.

'ಪೈಲ್ವಾನ್' ಸಿನಿಮಾವನ್ನ ಸ್ವಪ್ನಾ ಅವರು ತಮ್ಮ ಆರ್ ಆರ್ ಆರ್ ಬ್ಯಾನರ್ ನಲ್ಲಿ ನಿರ್ಮಾಣ ಮಾಡುತ್ತಿದ್ದಾರೆ. ಈ ಹಿಂದೆ ಕೆಲ ಧಾರಾವಾಹಿ ಹಾಗೂ ಚಿತ್ರಗಳಲ್ಲಿ ಸಹ ಅವರು ಅಭಿನಯಿಸಿದ್ದರು.
ಅಂದಹಾಗೆ, ಸದ್ಯ 'ಪೈಲ್ವಾನ್' ಚಿತ್ರೀಕರಣ ನಡೆಯುತ್ತಿದ್ದು, ಕೆಲ ದಿನಗಳಲ್ಲಿ ಟ್ರೇಲರ್ ಹೊರಬರಲಿದೆ.
More from Filmibeat
English summary
Kannada director krishna's wife Swapna celebrated her birthday in 'pailwan' movie shotting set.


Click it and Unblock the Notifications











