For Quick Alerts
  ALLOW NOTIFICATIONS  
  For Daily Alerts

  'ಮಮ್ಮಿ' ನಿರ್ದೇಶಕನಿಗೆ ಒಲಿದು ಬಂತು ದೊಡ್ಡ ಅವಕಾಶ

  By Naveen
  |

  ಕನ್ನಡ ಚಿತ್ರರಂಗದ ಕಿರಿಯ ನಿರ್ದೇಶಕರ ಪೈಕಿ ಲೋಹಿತ್ ಕೂಡ ಒಬ್ಬರು. 'ಮಮ್ಮಿ' ಸಿನಿಮಾದ ಮೂಲಕ ತಮ್ಮ ಸಿನಿ ಜರ್ನಿ ಶುರು ಮಾಡಿದ ಈ ಪ್ರತಿಭಾವಂತ ನಿರ್ದೇಶಕ ಮೊದಲ ಸಿನಿಮಾದಲ್ಲಿಯೇ ಎಲ್ಲರ ಗಮನ ಸೆಳೆದರು. ಉಪೇಂದ್ರ, ರಜನಿಕಾಂತ್ ಸೇರಿದಂತೆ ದೊಡ್ಡ ದೊಡ್ಡ ನಟರು ಲೋಹಿತ್ ಕೆಲಸವನ್ನು ಇಷ್ಟ ಪಟ್ಟಿದ್ದರು.

  'ಮಮ್ಮಿ' ಸಿನಿಮಾದ ನಂತರ ಲೋಹಿತ್ ಮತ್ತೆ ಪ್ರಿಯಾಂಕ ಉಪೇಂದ್ರ ಅವರ ಜೊತೆಗೆ 'ಹೌರಬ್ರಿಡ್ಜ್' ಎಂಬ ಸಿನಿಮಾ ಮಾಡುತ್ತಿದ್ದಾರೆ. ಇದರೊಂದಿಗೆ ಇದೀಗ ಅವರ ಮುಂದಿನ ಸಿನಿಮಾದ ಸುದ್ದಿ ಹೊರಬಂದಿದೆ. ದೊಡ್ಡ ಬ್ಯಾನರ್ ನಲ್ಲಿ ಈಗ ಲೋಹಿತ್ ಸಿನಿಮಾ ಮಾಡುತ್ತಿದ್ದಾರೆ.

  'ಹೌರಾ ಬ್ರಿಡ್ಜ್‌'ಗಾಗಿ ಮತ್ತೆ ಒಂದಾದ 'ಮಮ್ಮಿ ಸೇವ್ ಮಿ' ನಿರ್ದೇಶಕ-ಪ್ರಿಯಾಂಕಾ! 'ಹೌರಾ ಬ್ರಿಡ್ಜ್‌'ಗಾಗಿ ಮತ್ತೆ ಒಂದಾದ 'ಮಮ್ಮಿ ಸೇವ್ ಮಿ' ನಿರ್ದೇಶಕ-ಪ್ರಿಯಾಂಕಾ!

  ಪುಷ್ಕರ್ ಫಿಲ್ಮ್ಸ್ ಬ್ಯಾನರ್ ನಲ್ಲಿ ಬರುತ್ತಿರುವ ಹೊಸ ಚಿತ್ರಕ್ಕೆ ಲೋಹಿತ್ ನಿರ್ದೇಶಕರಾಗಿದ್ದಾರೆ. ಈ ವಿಷಯವನ್ನು ತಮ್ಮ ಫೇಸ್ ಬುಕ್ ಖಾತೆಯ ಮೂಲಕ ಅವರು ಹಂಚಿಕೊಂಡಿದ್ದಾರೆ. ಇಂತಹ ನಿರ್ಮಾಪಕರ ಜೊತೆಗೆ ಕೆಲಸ ಮಾಡಲು ಖುಷಿ ಆಗುತ್ತದೆ ಎಂದಿದ್ದಾರೆ.

  director lohith h manu next movie will be producing by pushkar films

  ಇದು ಒಂದು ಹಾರರ್ ಸಿನಿಮಾವಾಗಿದೆ. ವಿಶೇಷ ಅಂದರೆ, ಪುಷ್ಕರ್ ಫಿಲ್ಮ್ಸ್ ಬ್ಯಾನರ್ ನಲ್ಲಿ ಬರುತ್ತಿರುವ ಮೊದಲ ಹಾರರ್ ಸಿನಿಮಾ ಇದಾಗಿದೆ. ಈಗಾಗಲೇ ಸಾಕಷ್ಟು ವಿಭಿನ್ನ ರೀತಿಯ ಸಿನಿಮಾಗಳನ್ನು ನಿರ್ಮಾಣ ಮಾಡಿರುವ ಪುಷ್ಕರ್ ಮಲ್ಲಿಕಾರ್ಜುನಯ್ಯ ಈಗ ಮೊದಲ ಬಾರಿಗೆ ಹಾರರ್ ಚಿತ್ರಕ್ಕೆ ಕೈ ಹಾಕಿದ್ದಾರೆ.

  English summary
  Kannada director Lohith H Manu's next movie will be producing by Pushkar Films.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X