ಸೈಮಾ ಪ್ರಶಸ್ತಿ ಗೆದ್ದ ಸಂಭ್ರಮ ಹಂಚಿಕೊಂಡ ಆಪ್ತ ಗೆಳೆಯರು
Recommended Video
2019ರ ಸೈಮಾ ಪ್ರಶಸ್ತಿ ಸಮಾರಂಭದಲ್ಲಿ ಕೆಜಿಎಫ್ ಮತ್ತು ಅಯೋಗ್ಯ ಚಿತ್ರಗಳು ಅಬ್ಬರಿಸಿದೆ. ಈ ಎರಡು ಚಿತ್ರಗಳು ಕನ್ನಡ ವಿಭಾಗದಲ್ಲಿ ಹೆಚ್ಚು ಪ್ರಶಸ್ತಿಗಳನ್ನ ಬಾಚಿಕೊಂಡಿದೆ.
ಅಯೋಗ್ಯ ಚಿತ್ರದ ನಿರ್ದೇಶನಕ್ಕಾಗಿ ನಿರ್ದೇಶಕ ಮಹೇಶ್ ಅವರಿಗೆ 'ಅತ್ಯುತ್ತಮ ಡೆಬ್ಯೂ ಡೈರೆಕ್ಟರ್' ಪ್ರಶಸ್ತಿ ಲಭಿಸಿದೆ. ಚಿತ್ರದ ನಟಿ ರಚಿತಾ ರಾಮ್ ಅವರಿಗೆ ಅತ್ಯುತ್ತಮ ನಟಿ ಪ್ರಶಸ್ತಿ ಹಾಗೂ ಗೀತ ರಚನೆಕಾರ ಚೇತನ್ ಕುಮಾರ್ ಗೂ ಪ್ರಶಸ್ತಿ ಲಭಿಸಿದೆ.
ಚೇತನ್ ಮತ್ತು ಮಹೇಶ್ ಇಬ್ಬರೂ ಆಪ್ತ ಗೆಳೆಯರು. ಇಬ್ಬರಿಗೂ ಇದು ಮೊದಲ ಸೈಮಾ ಪ್ರಶಸ್ತಿ. ಸಹಜವಾಗಿ ಈ ಪ್ರಶಸ್ತಿ ಇಬ್ಬರಿಗೂ ಬಹಳ ಖುಷಿ ಕೊಟ್ಟಿದೆ. ಈ ಸಂತಸವನ್ನ ಫಿಲ್ಮಿಬೀಟ್ ಕನ್ನಡದ ಜೊತೆ ಹಂಚಿಕೊಂಡ ಇಬ್ಬರು, ಅಯೋಗ್ಯ ಚಿತ್ರಕ್ಕೆ ಕೆಲಸ ಮಾಡಿದ ಪ್ರತಿಯೊಬ್ಬರಿಗೂ ಧನ್ಯವಾದ ತಿಳಿಸಿದ್ದಾರೆ.

ಮೊದಲ ಸಿನಿಮಾ ಮಾಡಿದ ನಿರ್ದೇಶಕನಿಗೆ ಈ ರೀತಿಯ ಪ್ರೋತ್ಸಾಹ ಸಿಕ್ಕಾಗ ಅದಕ್ಕಿಂತ ಇನ್ನೊಂದು ಖುಷಿ ಇಲ್ಲ. ನಿಜಕ್ಕೂ ಇದು ನಮ್ಮ ಕೆಲಸಕ್ಕೆ ಸಿಕ್ಕ ಪ್ರತಿಫಲ ಎಂದು ಮಹೇಶ್ ಸಂತಸ ವ್ಯಕ್ತಪಡಿಸಿದ್ದಾರೆ.

ಇನ್ನು 'ಏನಮ್ಮಿ ಏನಮ್ಮಿ' ಹಾಡಿನ ಸಾಹಿತ್ಯಕ್ಕಾಗಿ ಅತ್ಯುತ್ತಮ ಗೀತ ರಚನೆಕಾರ ಪ್ರಶಸ್ತಿ ಪಡೆದು ಚೇತನ್ ಕುಮಾರ್, ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಮತ್ತು ಮಹೇಶ್ಗೆ ಥ್ಯಾಂಕ್ಸ್ ಹೇಳಿದ್ದಾರೆ.
ಸೈಮಾ ಪ್ರಶಸ್ತಿ ಪಡೆದು ಬಂದ ಮಹೇಶ್ ಮತ್ತು ಚೇತನ್ ಇಬ್ಬರು ನಮ್ಮ ಫಿಲ್ಮಿಬೀಟ್ ಜೊತೆ ಮಾತನಾಡಿರುವ ವಿಡಿಯೋ ಸಂದರ್ಶನವಿದೆ ನೋಡಿ.


Click it and Unblock the Notifications











