For Quick Alerts
  ALLOW NOTIFICATIONS  
  For Daily Alerts

  ಚೊಚ್ಚಲ ಪ್ರತಿಭೆಗಳಿಗೆ ಬೆನ್ನುಲುಬಾದ ಮಹೇಶ್ ಬಾಬು

  By Suneetha
  |

  ನಿರ್ದೇಶಕ ಮಹೇಶ್ ಬಾಬು ಅವರು ಸ್ಯಾಂಡಲ್ ವುಡ್ ಗೆ ಕಾಲಿಡುವ ಹೊಸ ಪ್ರತಿಭೆಗಳಿಗೆ ಒಂಥರಾ ಗಾಡ್ ಫಾದರ್ ಇದ್ದಂತೆ. ತಮ್ಮ ನಿರ್ದೇಶನದ ಹಲವು ಚಿತ್ರಗಳಲ್ಲಿ ಹೊಸ ಪ್ರತಿಭೆಗಳಿಗೆ ಅವಕಾಶ ನೀಡಿದ್ದಾರೆ.

  ಮಹೇಶ್ ಬಾಬು ಅವರು ಸಹ ನಿರ್ದೇಶಕರಾಗಿ ಸಿನಿಮಾ ಮಾಡಿದಾಗ ನಟಿ ರಮ್ಯಾ ಮತ್ತು ರಕ್ಷಿತಾ ಅವರಿಗೆ ಬ್ರೇಕ್ ನೀಡಿದ್ದರು. ತದನಂತರ ಸ್ವತಂತ್ರ ನಿರ್ದೇಶಕರಾದ ಮೇಲೆ ನಟಿ ಐಂದ್ರಿತಾ ರೇ, ನಟಿ ಕೃತಿ ಖರಬಂದ ಮತ್ತು ನಿಕ್ಕಿ ಗಲ್ರಾನಿ ಸೇರಿದಂತೆ ಹಲವರಿಗೆ ಅವಕಾಶ ನೀಡಿ ಅವರ ಸಿನಿಮಾ ವೃತ್ತಿ ಜೀವನಕ್ಕೆ ಭದ್ರ ಬುನಾದಿ ಹಾಕಿಕೊಟ್ಟಿದ್ದಾರೆ.[ದರ್ಶನ್ ಗೆ ಜೋಡಿಯಾದ ಮಿಸ್ಸೆಸ್ ಇಂಡಿಯಾ]

  ಇದೀಗ ಮತ್ತೆ ತಮ್ಮ ಹೊಸ ಚಿತ್ರದ ಮೂಲಕ ಇಬ್ಬರು ನವ ಪ್ರತಿಭೆಗಳನ್ನು ಕನ್ನಡ ಚಿತ್ರರಂಗಕ್ಕೆ ಪರಿಚಯ ಮಾಡುತ್ತಿದ್ದಾರೆ. 'ಕ್ರೇಜಿ ಬಾಯ್' ಎಂಬ ಚಿತ್ರದೊಂದಿಗೆ ನವ ನಟ ದಿಲೀಪ್ ಪ್ರಕಾಶ್ ಮತ್ತು ನಟಿ ಆಶಿಕ ರಂಗನಾಥ್ ಅವರನ್ನು ಗಾಂಧಿನಗರಕ್ಕೆ ಕರೆ ತಂದಿದ್ದಾರೆ.

  ಈಗಾಗಲೇ ಚಿತ್ರದ ಆಡಿಯೋ ರಿಲೀಸ್ ಆಗಿದ್ದು, ಇನ್ನೇನು ಸದ್ಯದಲ್ಲೇ ಸಿನಿಮಾ ತೆರೆಗೆ ಬರಲಿದೆ. ಚಿತ್ರದ ಆಡಿಯೋ ಬಿಡುಗಡೆ ಕಾರ್ಯಕ್ರಮಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ತಮಿಳು ಕಾಮಿಡಿ ನಟ ಸಂತಾನಂ ಅವರು ಆಗಮಿಸಿ ಹೊಸ ಪ್ರತಿಭೆಗಳಿಗೆ ಶುಭ ಹಾರೈಸಿದ್ದಾರೆ. ಅಲ್ಲದೇ ಈ ಚಿತ್ರ ಸೆಟ್ಟೇರುವಾಗ ಕೂಡ ದರ್ಶನ್ ಅವರೇ ಕ್ಲ್ಯಾಪ್ ಮಾಡಿದ್ದರು ಅನ್ನೋದು ವಿಶೇಷ.

  'ನಾನು ಹೊಸಬರಿಗೆ ಅವಕಾಶ ಕೊಡುವಾಗ ದೊಡ್ಡ ದೊಡ್ಡ ಸಂಭಾಷಣೆ ಅಥವಾ ಅಳು-ನಗುವಂತಹ ಚಿಕ್ಕ-ಚಿಕ್ಕ ಪರೀಕ್ಷೆಗಳನ್ನು ಮಾಡುವುದಿಲ್ಲ. ಬದ್ಲಾಗಿ ಬರೀ ಫೋಟೋ ಶೂಟ್ ಮಾಡಿ ಪ್ರತಿಭೆಗಳನ್ನು ಆರಿಸುತ್ತೇನೆ' ಎಂದು ಆಡಿಯೋ ಲಾಂಚ್ ಕಾರ್ಯಕ್ರಮದಲ್ಲಿ ಮಹೇಶ್ ಬಾಬು ತಿಳಿಸಿದ್ದಾರೆ.

  English summary
  Director Mahesh Babu has launched two new faces Dilip Prakash and Ashika Ranganath for Kannada Movie 'Crazy Boy'.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X