ಇದು ದೊಡ್ಡ ಅಚ್ಚರಿ, ಆದರೂ ಸತ್ಯ : ಒಂದೇ ಚಿತ್ರದಲ್ಲಿ ಶಿವಣ್ಣ, ದರ್ಶನ್!

Recommended Video

ಏನಿದು ದರ್ಶನ್-ಶಿವಣ್ಣ ಬಗ್ಗೆ ಹೊಸ ಸುದ್ದಿ..! | Filmibeat Kannada

ಸ್ಯಾಂಡಲ್ ವುಡ್ ನಲ್ಲಿ ಮಲ್ಟಿಸ್ಟಾರ್ ಯುಗ ಶುರುವಾಗಿದೆ. ಈಗಾಗಲೇ ಶಿವರಾಜ್ ಕುಮಾರ್ ಮತ್ತು ಸುದೀಪ್, ಸುದೀಪ್ ಮತ್ತು ಉಪೇಂದ್ರ, ರವಿಚಂದ್ರನ್ ಮತ್ತು ಸುದೀಪ್ ಸಿನಿಮಾಗಳು ಬಂದು ಬಿಟ್ಟಿವೆ. ಉಪೇಂದ್ರ ಮತ್ತು ರವಿಚಂದ್ರನ್, ಸುದೀಪ್ ಮತ್ತು ಅಂಬರೀಶ್ ಸಿನಿಮಾಗಳು ಸಿದ್ಧವಾಗುತ್ತಿವೆ.

ಈ ಎಲ್ಲ ಮಲ್ಟಿಸ್ಟಾರ್ ಸಿನಿಮಾಗಳ ಬಳಿಕ ಈಗ ಮತ್ತೊಂದು ದೊಡ್ಡ ಸಿನಿಮಾ ಸ್ಯಾಂಡಲ್ ವುಡ್ ನಲ್ಲಿ ಬರುವ ಸಾಧ್ಯತೆ ಹೆಚ್ಚಿದೆ. ನಟ ಶಿವರಾಜ್ ಕುಮಾರ್ ಹಾಗೂ ದರ್ಶನ್ ಇಬ್ಬರು ಮೊದಲ ಬಾರಿಗೆ ಒಂದೇ ಸಿನಿಮಾದಲ್ಲಿ ನಟಿಸುತ್ತಾರೆ ಎಂಬ ಸುದ್ದಿ ಈಗ ಕೇಳಿ ಬಂದಿದೆ.

ರಾಜ್ ಕುಮಾರ್ ಹಾಗೂ ತೂಗುದೀಪ ಶ್ರೀನಿವಾಸ್ ಅವರ ನಡುವೆ ಒಳ್ಳೆಯ ಸ್ನೇಹ ಇತ್ತು. ಅದೇ ಸ್ನೇಹ ಶಿವಣ್ಣ ಮತ್ತು ದರ್ಶನ್ ನಡುವೆ ಮುಂದುವರೆದಿದೆ. ಇದರ ಜೊತೆಗೆ ಈಗ ಈ ಇಬ್ಬರು ಒಂದೇ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಾರೆ ಎಂದು ಹೇಳಲಾಗುತ್ತಿದೆ. ಮುಂದೆ ಓದಿ...

ಮಹೇಶ್ ಬಾಬು ಮಾಸ್ಟರ್ ಪ್ಲಾನ್

ಮಹೇಶ್ ಬಾಬು ಮಾಸ್ಟರ್ ಪ್ಲಾನ್

ಕನ್ನಡದ ಖ್ಯಾತ ನಿರ್ದೇಶಕ ಮಹೇಶ್ ಬಾಬು ಈಗ ದೊಡ್ಡ ಪ್ಲಾನ್ ಮಾಡಿದ್ದಾರೆ. ಮೊದಲ ಬಾರಿಗೆ ಶಿವರಾಜ್ ಕುಮಾರ್ ಮತ್ತು ದರ್ಶನ್ ಅವರನ್ನು ಒಂದೇ ಸಿನಿಮಾದಲ್ಲಿ ಸೇರಿಸುವ ಸಾಹಸಕ್ಕೆ ಅವರು ಕೈ ಹಾಕಿದ್ದಾರೆ. ಈ ದೊಡ್ಡ ಚಾಲೆಂಜ್ ತೆಗೆದುಕೊಂಡಿರುವ ಅವರು ಈಗಾಗಲೇ ಅದೇ ಕೆಲಸದಲ್ಲಿ ತೊಡಗಿದ್ದಾರಂತೆ.

ನಿರ್ಮಾಪಕರ ಆಫರ್

ನಿರ್ಮಾಪಕರ ಆಫರ್

ನಿರ್ದೇಶಕ ಮಹೇಶ್ ಬಾಬು ಅವರಿಗೆ ನಿರ್ಮಾಪಕರೊಬ್ಬರು ಈ ಆಫರ್ ನೀಡಿದ್ದಾರೆ. ನೀವು ಶಿವರಾಜ್ ಕುಮಾರ್ ಹಾಗು ದರ್ಶನ್ ಅವರನ್ನು ಇಟ್ಟುಕೊಂಡು ಒಂದು ಸಿನಿಮಾ ಮಾಡಿ, ಅದನ್ನು ನಾನೇ ನಿರ್ಮಾಣ ಮಾಡುತ್ತಾನೆ ಎಂದಿದ್ದಾರೆ. ಇಲ್ಲಿಂದ ಈ ಚಿತ್ರದ ಯೋಜನೆ ಶುರುವಾಗಿದೆ.

ಓಕೆ ಎಂದ ಡಿ ಬಾಸ್

ಓಕೆ ಎಂದ ಡಿ ಬಾಸ್

ಈಗಾಗಲೇ ನಟ ದರ್ಶನ್ ಅವರನ್ನು ಮಹೇಶ್ ಬಾಬು ಸಂಪರ್ಕ ಮಾಡಿದ್ದಾರೆ. ಶಿವಣ್ಣ ಅವರ ಜೊತೆಗೆ ನಟಿಸಲು ಖುಷಿ ಆಗುತ್ತದೆ ಎಂದಿರುವ ದರ್ಶನ್ 'ಓಕೆ' ಎಂದಿದ್ದಾರೆ. ಆದರೆ, ಕಥೆ ನೋಡಿದ ಮೇಲೆ ಅಂತಿಮ ನಿರ್ಧಾರವನ್ನು ಅವರು ಹೇಳುತ್ತಾರಂತೆ. ಶಿವಣ್ಣ ದೊಡ್ಡ ನಟರಾಗಿದ್ದು, ಅವರ ಜೊತೆಗೆ ನಟಿಸುವಾಗ ಪವರ್ ಫುಲ್ ಕಥೆ ಬೇಕು ಎಂದು ದರ್ಶನ್ ತಿಳಿಸಿದ್ದಾರಂತೆ.

ಶಿವಣ್ಣ ಕೂಡ ಒಪ್ಪಬಹುದು

ಶಿವಣ್ಣ ಕೂಡ ಒಪ್ಪಬಹುದು

ಹಾಗೆ ನೋಡಿದರೆ ಶಿವಣ್ಣ ಕೂಡ ಈ ಸಿನಿಮಾವನ್ನು ಒಪ್ಪಬಹುದು. ಕಾರಣ ನಿರ್ದೇಶಕ ಮಹೇಶ್ ಬಾಬು ಅಣ್ಣಾವ್ರ ಫ್ಯಾಮಿಲಿಗೆ ಬಹಳ ಆಪ್ತರು. ಅದರಲ್ಲಿಯೂ ಶಿವಣ್ಣ ಅವರ ಜೊತೆಗೆ ಮಹೇಶ್ ಬಾಬು ಬಹಳ ವರ್ಷಗಳಿಂದ ಒಡನಾಟ ಇಟ್ಟುಕೊಟ್ಟಿದ್ದಾರೆ. ಈ ಕಾರಣ ಕಥೆ ಇಷ್ಟ ಆದರೆ ಶಿವಣ್ಣ ಕೂಡ ಸಿನಿಮಾ ಒಕೆ ಮಾಡಬಹುದು.

ಈ ಹಿಂದೆ ಇಬ್ಬರೂ ನಟರ ಸಿನಿಮಾ ಮಾಡಿದ್ದಾರೆ

ಈ ಹಿಂದೆ ಇಬ್ಬರೂ ನಟರ ಸಿನಿಮಾ ಮಾಡಿದ್ದಾರೆ

ನಿರ್ದೇಶಕ ಮಹೇಶ್ ಬಾಬು ಈ ಹಿಂದೆ ದರ್ಶನ್ ಅವರಿಗೆ 'ಅಭಯ್' ಸಿನಿಮಾವನ್ನು ಹಾಗೂ ಶಿವಣ್ಣ ಅವರಿಗೆ 'ಪರಮೇಶ ಪಾನ್ ವಾಲ' ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಅಲ್ಲದೆ, 'ಅಭಿ', 'ಅರಸು', 'ಆಕಾಶ್' ರೀತಿಯ ಸೂಪರ್ ಹಿಟ್ ಸಿನಿಮಾಗಳನ್ನು ಚಿತ್ರರಂಗಕ್ಕೆ ನೀಡಿದ್ದಾರೆ.

ಒಳ್ಳೆಯ ಕಥೆ ಸಿಕ್ಕರೆ ಸಿನಿಮಾ ಗ್ಯಾರೆಂಟಿ

ಒಳ್ಳೆಯ ಕಥೆ ಸಿಕ್ಕರೆ ಸಿನಿಮಾ ಗ್ಯಾರೆಂಟಿ

ಶಿವರಾಜ್ ಕುಮಾರ್ ಮತ್ತು ದರ್ಶನ್ ಅವರ ಸಿನಿಮಾ ಆಗಲು ಬೇಕಿರುವುದು ಒಂದು ಒಳ್ಳೆಯ ಕಥೆ. ಅದು ಎಷ್ಟು ಬೇಗ ಸಿದ್ಧ ಆಗುತ್ತದೆಯೋ ಅಷ್ಟು ಬೇಗ ಈ ಸಿನಿಮಾ ಅನೌನ್ಸ್ ಆಗುತ್ತದೆ. ರಿಮೇಕ್ ಆದರೂ ಪರವಾಗಿಲ್ಲ ಇಬ್ಬರು ನಟರಿಗೆ ಹೊಂದುವ ಕಥೆ ಬೇಕಾಗಿದೆಯಂತೆ. ಇಬ್ಬರಿಗೆ ಸೂಟ್ ಆಗುವ ಕಥೆ ಸಿಕ್ಕರೆ ಈ ಸಿನಿಮಾ ಬರುವುದು ಗ್ಯಾರೆಂಟಿ.

More from Filmibeat

English summary
Kannada director Mahesh Babu planning to do a multi star movie with actor Shivaraj Kumar and Darshan.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X