ವಿವಾದದ ಬಗ್ಗೆ ನಿರ್ದೇಶಕರ ಸ್ಪಷ್ಟನೆ : ದರ್ಶನ್, ಶ್ರೀಮುರಳಿ ಯಾರಾಗ್ತಾರೆ 'ಮದಗಜ'?
ಸ್ಯಾಂಡಲ್ ವುಡ್ ನಲ್ಲಿ ಟೈಟಲ್ ವಿವಾದ ಎನ್ನುವುದು ಹೊಸತೇನಲ್ಲ. ಅದೇ ರೀತಿ ಇತ್ತೀಚಿಗಷ್ಟೆ 'ಮದಗಜ' ಸಿನಿಮಾದ ಟೈಟಲ್ ವಿವಾದ ಹುಟ್ಟು ಹಾಕಿತ್ತು. ಈಗ ಈ ಬಗ್ಗೆ ಚಿತ್ರದ ನಿರ್ದೇಶಕರು ಮಾತನಾಡಿದ್ದಾರೆ.
ನಟ ದರ್ಶನ್ ನಟಿಸಬೇಕಿದ್ದ ಒಂದು ಸಿನಿಮಾದ ಹೆಸರು 'ಮದಗಜ' ಎಂದು ಫಿಕ್ಸ್ ಆಗಿತ್ತು. ಆದರೆ, ಶ್ರೀ ಮುರಳಿ ಅವರ ಮುಂದಿನ ಸಿನಿಮಾಗೆ ಕೂಡ ಅದೇ ಹೆಸರನ್ನು ಇಡಲಾಗಿತ್ತು. ಹೀಗಾಗಿ 'ಮದಗಜ' ಟೈಟಲ್ ಅನೇಕ ಗೊಂದಲಗಳಿಗೆ ಕಾರಣವಾಗಿತ್ತು.
'ಅಯೋಗ್ಯ' ಸಿನಿಮಾದ ಯಶಸ್ಸಿನ ನಂತರ ನಿರ್ದೇಶಕ ಮಹೇಶ್ ಕುಮಾರ್ ನಟ ಶ್ರೀ ಮುರಳಿ ಅವರಿಗೆ ಈ ಸಿನಿಮಾ ಮಾಡುತ್ತಿದ್ದಾರೆ. ತಮ್ಮ ಹೊಸ ಚಿತ್ರದ ಟೈಟಲ್ ಬಗ್ಗೆ ಇದ್ದ ಸುದ್ದಿಗಳ ಬಗ್ಗೆ ಅವರೇ ಕ್ಲಾರಿಟಿ ನೀಡಿದ್ದಾರೆ. ಮುಂದೆ ಓದಿ...

'ಮದಗಜ' ಟೈಟಲ್ ಸಿಕ್ಕಿಲ್ಲ
ನಿರ್ದೇಶಕ ಮಹೇಶ್ ಹೇಳುವ ಪ್ರಕಾರ ತಮ್ಮ ಸಿನಿಮಾಗೆ ಇನ್ನೂ 'ಮದಗಜ' ಎಂಬ ಹೆಸರು ಸಿಕ್ಕಿಲ್ಲವಂತೆ. ಅದೇ ಹೆಸರಿನ ಮೂಲಕ ಸಿನಿಮಾ ಶುರು ಮಾಡಬೇಕು ಎಂದಿದ್ದ ಚಿತ್ರತಂಡ ಸದ್ಯ ಯಾವುದೇ ನಿರ್ಧಾರ ತೆಗೆದುಕೊಳ್ಳದ ಪರಿಸ್ಥಿತಿಯಲ್ಲಿದೆಯಂತೆ.

ರಾಮಮೂರ್ತಿ ಅವರ ಹೆಸರಿನಲ್ಲಿದೆ
ನಿರ್ಮಾಪಕ ರಾಮಮೂರ್ತಿ ಅವರ ಬಳಿ 'ಮದಗಜ' ಎಂಬ ಟೈಟಲ್ ಇದೆ. ಅವರ ಹೆಸರಿನಲ್ಲಿ ಆ ಟೈಟಲ್ ಫಿಲ್ಮ್ ಚೇಂಬರ್ ನಲ್ಲಿ ರಿಜಿಸ್ಟರ್ ಆಗಿದೆ. ಟೈಟಲ್ ವಿವಾದಕ್ಕೆ ಸಂಬಂಧ ಪಟ್ಟಂತೆ ಈಗಾಗಲೇ ಚಿತ್ರತಂಡ ರಾಮಮೂರ್ತಿ ಅವರ ಕ್ಷಮೆ ಕೇಳಿದೆ.

'ಶ್ರೀ ಮುರಳಿ ಮದಗಜ'?
'ಮದಗಜ' ಎಂಬ ಹೆಸರು ಸಿಗದ ಕಾರಣ 'ಶ್ರೀ ಮುರಳಿ ಮದಗಜ' ಎಂಬ ಹೆಸರನ್ನು ಸಿನಿಮಾ ಇಡುವ ಪ್ಲಾನ್ ನಿರ್ದೇಶಕ ಮಹೇಶ್ ಹಾಗೂ ನಿರ್ಮಾಪಕ ಉಮಾಪತಿ ಅವರದ್ದಾಗಿತ್ತು. ಆದರೆ, ಆ ಟೈಟಲ್ ಕೂಡ ಇನ್ನು ಅಂತಿಮವಾಗಿಲ್ಲ. ಅಲ್ಲದೆ ಬೇರೆ ಟೈಟಲ್ ಕೂಡ ಚಿತ್ರಕ್ಕೆ ಇಡುವ ಸಾಧ್ಯತೆ ಇದೆ.

ಕನ್ನಡದ ದೊಡ್ಡ ನಟಿ
ಇನ್ನು ಚಿತ್ರದ ನಾಯಕಿಯ ಆಯ್ಕೆ ಪ್ರಕ್ರಿಯೆ ಇನ್ನು ನಡೆದಿಲ್ಲವಂತೆ. ಆದರೆ, ಕನ್ನಡದ ನಟಿಯನ್ನೇ ಸಿನಿಮಾ ಕರೆದುತರುವ ಪ್ಲಾನ್ ಚಿತ್ರತಂಡದಾಗಿದೆ. ಸ್ಯಾಂಡಲ್ ವುಡ್ ನ ದೊಡ್ಡ ನಟಿ ಶ್ರೀ ಮುರಳಿ ಜೊತೆಗೆ ತೆರೆ ಹಂಚಿಕೊಳ್ಳಲಿದ್ದಾರಂತೆ.

ಡಿಸೆಂಬರ್ 17 ಪೋಸ್ಟರ್
ಈ ಸಿನಿಮಾದ ಫೋಟೋ ಶೂಟ್ ಸದ್ಯ ನಡೆಯುತ್ತಿದ್ದು, ಡಿಸೆಂಬರ್ 17 ಪೋಸ್ಟರ್ ಗಳು ರಿಲೀಸ್ ಆಗಲಿದೆಯಂತೆ. ಶ್ರೀ ಮುರಳಿ ಅವರ ಹುಟ್ಟುಹಬ್ಬಕ್ಕೆ ಪೋಸ್ಟರ್ ಅನ್ನು ಬಿಡುಗಡೆ ಮಾಡುವ ತಯಾರಿ ನಡೆದಿದೆ. ಅದೇ ದಿನ 'ಭರಾಟೆ' ಚಿತ್ರದ ಟ್ರೇಲರ್ ಕೂಡ ಬರ್ತಿದೆ.

ಮಾಸ್ ಸಿನಿಮಾ, ರಾಯಲ್ ಲುಕ್
ಉಳಿದಂತೆ, 'ಉಗ್ರಂ' ಹುಡುಗನ ಲುಕ್ ಈ ಸಿನಿಮಾದಲ್ಲಿ ತುಂಬನೇ ರಾಯಲ್ ಆಗಿ ಇರಲಿದೆಯಂತೆ. ಇದೊಂದು ಮಾಸ್ ಚಿತ್ರವಾಗಿದ್ದು, ಮುರಳಿ ಅವರ ಲುಕ್ ಈ ಹಿಂದೆ ಯಾವ ಚಿತ್ರದಲ್ಲಿಯೂ ಇಲ್ಲದೆ ಇರುವ ರೀತಿ ಇರುತ್ತಂತೆ. ಶಾರೂಖ್ ಖಾನ್ ಗೆ ಹೇರ್ ಸ್ಟೈಲ್ ಮಾಡುವ ಅಲೆಕ್ಸ್ ಎನ್ನುವವರು ಈ ಚಿತ್ರಕ್ಕೆ ಕೆಲಸ ಮಾಡುತ್ತಿದ್ದಾರಂತೆ.


Click it and Unblock the Notifications











