2 ವರ್ಷ ಸ್ಟಾರ್ ನಟನ ಮನೆ ಅಲೆದಾಡಿದ ಮಹೇಶ್, ನಟ ಒಪ್ಪಿದ್ರು, ಕುಟುಂಬದವರು ಬೇಡ ಎಂದ್ರು!

ಮನಸಾರೆ, ಪಂಚರಂಗಿ, ಪರಮಾತ್ಮ ಹಾಗೂ ದನಕಾಯೋನು ಚಿತ್ರದವರೆಗೂ ಯೋಗರಾಜ್ ಭಟ್ ಅವರ ಬಳಿ ಸಹಾಯಕನಾಗಿ ಕೆಲಸ ಮಾಡಿದ್ದ ಮಹೇಶ್ ಕುಮಾರ್, 'ಅಯೋಗ್ಯ' ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕನಾಗಿ ಇಂಡಸ್ಟ್ರಿಯಲ್ಲಿ ಗುರುತಿಸಿಕೊಂಡರು.

Recommended Video

DIRECTOR'S DIARY : ಬ್ರಾಹ್ಮಣರ ಮದುವೇಲಿ ಊಟ ಮಾಡೋಕೆ ಹೋಗಿ ಒದೆ ತಿಂದು ಅಳುತ್ತಾ ಬಂದಿದ್ದೆ | Mahesh Kumar|Part 1

ಆದ್ರೆ, ಚೊಚ್ಚಲ ನಿರ್ದೇಶನದ ಹಿಂದೆ ಸಾಕಷ್ಟು ಅವಮಾನಗಳಿವೆ, ಅನೇಕ ಸವಾಲುಗಳನ್ನು ಎದುರಿಸಿದ್ದಾರೆ. ಬಹಳ ಕಷ್ಟದ ಜೀವನ ನೋಡಿದ್ದಾರೆ. ಈ ಎಲ್ಲ ಏಳುಬೀಳುಗಳನ್ನು ಕಂಡ ನಂತರವೇ ಅಯೋಗ್ಯ ಕೈಹಿಡಿದಿದ್ದು. ಹೀಗೆ, ಭಟ್ಟರ ಬಳಿ ಸಹಾಯಕನಾಗಿರುವಾಗ ನಿರ್ದೇಶಕನಾಗಬೇಕು ಎಂಬ ಆಸೆಯಿಂದ ಕಥೆ ಮಾಡ್ಕೊಂಡು ಓರ್ವ ಸ್ಟಾರ್ ನಟನ ಮನೆ ಬಳಿ ಸುಮಾರು ಎರಡು ವರ್ಷ ಕಾದಿದ್ದರಂತೆ. ನಟ ಒಪ್ಪಿಕೊಂಡರೂ ಅವರ ಕುಟುಂಬ ಸಿನಿಮಾ ಮಾಡಲು ಒಪ್ಪಿಕೊಳ್ಳಲಿಲ್ಲವಂತೆ. ಯಾರದು? ಮುಂದೆ ಓದಿ...

ಟಾಪ್ ಮನೆ ಬಳಿ ಅಲೆದಾಡಿದ್ದ ಮಹೇಶ್

ಟಾಪ್ ಮನೆ ಬಳಿ ಅಲೆದಾಡಿದ್ದ ಮಹೇಶ್

ಯೋಗರಾಜ್ ಭಟ್ ಬಳಿ ಸಹಾಯಕನಾಗಿ ಇರಬೇಕಾದರೇನೆ ಡೈರೆಕ್ಟರ್ ಆಗಬೇಕು ಎಂಬ ಆಸೆಯಿಂದ ಟಾಪ್ ಸ್ಟಾರ್ ನಟನ ಮನೆ ಸುಮಾರು ಎರಡು ವರ್ಷ ಮಹೇಶ್ ಕುಮಾರ್ ಅಲೆದಾಡಿದ್ದರಂತೆ. ಪ್ರತಿದಿನ ಅವರ ಮನೆ ಬಳಿ ಹೋಗುವುದು ನಿಂತುಕೊಳ್ಳುವುದು ಮಾಡ್ತಿದ್ರಂತೆ. ಅವರ ಮನೆಯಲ್ಲಿದ್ದ ಭೀಮ ಎಂಬ ನಾಯಿ ಯಾವಾಗಲೂ ನೋಡಿ ಬೊಗಳುತಿತ್ತಂತೆ.

ಕಥೆ ಹೇಳಿದ್ರೂ ಪ್ರಯೋಜನ ಆಗಲಿಲ್ಲ

ಕಥೆ ಹೇಳಿದ್ರೂ ಪ್ರಯೋಜನ ಆಗಲಿಲ್ಲ

ಮನೆ ಮುಂದೆ ನಿಲ್ಲುತ್ತಿದ್ದ ಮಹೇಶ್ ಕುಮಾರ್ ನಂತರ ಮನೆಯೊಳಗೆ ಹೋದರು. ಸೋಫಾದಲ್ಲಿ ಕುಳತುಕೊಳ್ಳುವಷ್ಟು ಪರಿಚಿತರಾದರು. ಈ ನಡುವೆ ಅನೇಕ ಸಲ ಕಥೆ ಹೇಳಿದರು. ''ಕಥೆ ಹೇಳಿ ಹೇಳಿ ಏನೂ ಪ್ರಯೋಜನ ಆಗಲಿಲ್ಲ'' ಎಂದು ಫಿಲ್ಮಿಬೀಟ್ ಡೈರೆಕ್ಟರಿ ಡೈರಿ ಕಾರ್ಯಕ್ರಮದಲ್ಲಿ ಹೇಳಿಕೊಂಡಿದ್ದಾರೆ.

ಕುಟುಂಬ ಬೇಡ ಎನ್ನುತ್ತಿದ್ದರು

ಕುಟುಂಬ ಬೇಡ ಎನ್ನುತ್ತಿದ್ದರು

''ತಾನೊಬ್ಬ ಚೊಚ್ಚಲ ನಿರ್ದೇಶಕ ಎನ್ನುವ ಕಾರಣಕ್ಕೆ ಅವರ ಕುಟುಂಬಕ್ಕೆ ನನ್ನ ಸಿನಿಮಾ ಮಾಡಲು ಒಪ್ಪಲಿಲ್ಲ. ಆ ನಟನೇ ಕಥೆ ಒಪ್ಪಿಕೊಂಡರೂ ಆ ಕುಟುಂಬದವರು ಬೇಡ ಎಂದರು. ಕಥೆ ಚೆನ್ನಾಗಿತ್ತು, ನನ್ನ ಪ್ರತಿಭೆ ಇಷ್ಟ ಆಯ್ತು ಆದರೂ ಅವರ ಮನೆಯವರು ಬೇಡ ಎಂದು ನಿರಾಕರಿಸಿದರು'' ಎಂದು ತಾನು ಎದುರಿಸಿದ ಬಹುದೊಡ್ಡ ನಿರಾಸೆ ಇದು ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಆಗಲೇ ಹುಟ್ಟುಕೊಂಡಿದ್ದು 'ಅಯೋಗ್ಯ' ಕಥೆ

ಆಗಲೇ ಹುಟ್ಟುಕೊಂಡಿದ್ದು 'ಅಯೋಗ್ಯ' ಕಥೆ

ಸ್ಟಾರ್ ನಟನ ಕುಟುಂಬ ಬೇಡ ಎಂದ ಮೇಲೆ ಅಲ್ಲಿಂದ ಊರಿಗೆ ಹೋದ ಮಹೇಶ್ ಏಳು ತಿಂಗಳ ಕಾಲ ಊರಿನಲ್ಲಿಯೇ ಉಳಿದುಕೊಂಡರು. ಈ ಮಧ್ಯೆ ಗ್ರಾಮ ಪಂಚಾಯಿತಿ ಚುನಾವಣೆ ಬರುತ್ತೆ. ಅದರ ಮೇಲೆ ಆಸಕ್ತಿ ಹೆಚ್ಚಾಗುತ್ತದೆ. ಅದರ ಸುತ್ತ ಕಥೆ ಸಹ ಮಾಡಿಕೊಳ್ಳುತ್ತಾರೆ. ಅದೇ ಕಥೆಗೆ ಅಯೋಗ್ಯ ಸಿನಿಮಾದು. ಆ ನಂತರ ಅಯೋಗ್ಯ ಸಿನಿಮಾ ಹೇಗಾಯಿತು ಎಂದು ಮುಂದಿನ ಸ್ಟೋರಿಯಲ್ಲಿ ತಿಳಿಯೋಣ.

More from Filmibeat

English summary
Kannada Film Director Mahesh kumar shares his cinema journey and his first work with Filmibeat kannada director dairy.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X