ಸಿನಿಮಾದಲ್ಲಿ ಈ ಡೈಲಾಗ್ ಬಳಸಿದ್ದಕ್ಕೆ ಮಣಿರತ್ನಂಗೆ ಬಾಂಬ್ ಕರೆ.!
ಮಣಿರತ್ನಂ ನಿರ್ದೇಶನದಲ್ಲಿ ಇತ್ತೀಚಿಗಷ್ಟೆ ಬಿಡುಗಡೆಯಾಗಿದ್ದ 'ಚೆಕ್ಕ ಚಿವಂದ ವಾನಂ' ಚಿತ್ರದ ಯಶಸ್ವಿಯಾಗಿ ಪ್ರದರ್ಶನವಾಗುತ್ತಿದ್ದು, ಬಾಕ್ಸ್ ಅಫೀಸ್ ನಲ್ಲೂ ಭರ್ಜರಿ ಗಳಿಕೆ ಕಾಣುತ್ತಿದೆ. ಈ ಮಧ್ಯೆ ನಿರ್ದೇಶಕ ಮಣಿರತ್ನಂ ಅವರಿಗೆ ಬಾಂಬ್ ಬೆದರಿಕೆ ಕರೆ ಬಂದಿದೆ.
ಚೆನ್ನೈನ ಅಭಿರಾಂಪುರದಲ್ಲಿರುವ ಮಣಿರತ್ನಂ ಅವರ ಕಚೇರಿಗೆ ಕಿಡಿಗೇಡಿಗಳು ಕರೆ ಮಾಡಿದ್ದು, 'ಚೆಕ್ಕ ಚಿವಂದ ವಾನಂ' ಚಿತ್ರದಲ್ಲಿ ಬಳಸಲಾಗಿರುವ ಸಂಭಾಷಣೆಯೊಂದನ್ನ ಸಿನಿಮಾದಿಂದ ತೆಗೆಯಿರಿ, ಇಲ್ಲವಾದಲ್ಲಿ ಬಾಂಬ್ ಹಾಕ್ತೀವಿ ಎಂದು ಬೆದರಿಕೆಯೊಡ್ಡಿದ್ದಾರೆ ಎನ್ನಲಾಗಿದೆ.
ಮಣಿರತ್ನಂ ಅವರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದು, ತನಿಖೆ ಆರಂಭಿಸಿದ್ದಾರೆ. ಸ್ಥಳಕ್ಕೆ ದಾವಿಸಿದ ಬಾಂಬ್ ನಿಷ್ಕ್ರಿಯ ದಳ ಪರಿಶೀಲನೆ ನಡೆಸಿದ್ದು, ಮಣಿರತ್ನಂ ಅವರಿಗೆ ಭದ್ರತೆ ಒದಗಿಸಲಾಗಿದೆಯಂತೆ.

ಈ ಹಿಂದೆ ಮಣಿರತ್ನಂ ಅವರು ವಿವಾದಾತ್ಮಕ ಸಂಭಾಷಣೆಯನ್ನ ಚಿತ್ರದಿಂದ ತೆಗೆಯಬೇಕೆಂದು ಕೆಲವು ಸಮುದಾಯಗಳು ಬೇಡಿಕೆಯಿಟ್ಟಿತ್ತಂತೆ. ಇದನ್ನ ಗಮನಿಸಿದ ಪೊಲೀಸರು ಅವರ ಮೇಲೆ ಅನುಮಾನ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

ಅಂದ್ಹಾಗೆ, 'ಚೆಕ್ಕ ಚಿವಂದ ವಾನಂ' ಸಿನಿಮಾ ಗ್ಯಾಂಗ್ ಸ್ಟರ್ ಕುರಿತಾದ ಚಿತ್ರವಾಗಿದ್ದು, ಅಂಡರ್ ವರ್ಲ್ಡ್ ಕಥೆಯನ್ನ ಒಳಗೊಂಡಿದೆ. ಅರವಿಂದ ಸ್ವಾಮಿ, ಸಿಂಬು, ವಿಜಯ್ ಸೇತುಪತಿ, ಅರುಣ್ ವಿಜಯ್, ಜ್ಯೋತಿಕಾ, ಅಧಿತಿ ರಾವ್ ಹೈದರಿ, ದಯನ್ ಈರಪ್ಪ ಅಂತಹ ಬಹುದೊಡ್ಡ ತಾರಬಳ ಚಿತ್ರದಲ್ಲಿ ಕಾಣಿಸಿಕೊಂಡಿದೆ. ಸೆಪ್ಟೆಂಬರ್ 29 ರಂದು ಈ ಸಿನಿಮಾ ರಿಲೀಸ್ ಆಗಿತ್ತು.


Click it and Unblock the Notifications











