ಕನ್ನಡ ಚಿತ್ರರಂಗದಲ್ಲಿ ಸೆಟ್ಟೇರಿತು 'ಭರತ-ಬಾಹುಬಲಿ'ಯ ಸಿನಿಮಾ

By Pavithra

ಯಾವುದೇ ಭಾಷೆಯಲ್ಲಿ ಐತಿಹಾಸಿಕ ಹಿನ್ನಲೆ ಇರುವ ಸಿನಿಮಾಗಳು ಬಿಡುಗಡೆ ಆದ ನಂತರ ಚಿತ್ರ ನೋಡಿದ ಪ್ರೇಕ್ಷಕರು ಹೇಳುವ ಮಾತು ಇದು ಬಾಹುಬಲಿ ತರ ಇಲ್ಲ ಬಿಡಿ. ಏನ್ ಮೇಕಿಂಗ್ ಎಷ್ಟು ಚೆನ್ನಾಗಿತ್ತು ಸಿನಿಮಾ ಎನ್ನುವ ಮಾತುಗಳನ್ನಾಡುತ್ತಾರೆ.

ಪೌರಾಣಿಕ ಚಿತ್ರವಾದರೂ ಅಷ್ಟೇ ಬಾಹುಬಲಿ ತರ ಇರುತ್ತಾ? ಅವರಂತೆ ನಿಮಗ್ಯಾಕೆ ಸಿನಿಮಾ ಮಾಡುವುದಕ್ಕೆ ಸಾಧ್ಯವಾಗುತ್ತಿಲ್ಲ ಅಂತ ಪ್ರಶ್ನೆ ಮಾಡುತ್ತಾರೆ. ಬಾಹುಬಲಿ ಹೆಸರಿನಲ್ಲೇ ಸ್ಯಾಂಡಲ್ ವುಡ್ ನಲ್ಲೊಂದು ಚಿತ್ರ ಸೆಟ್ಟೇರಲು ರೆಡಿ ಆಗಿದೆ.

ಮಾಸ್ಟರ್ ಪೀಸ್ ನಂತಹ ಕಮರ್ಷಿಯಲ್ ಸಿನಿಮಾವನ್ನ ಕನ್ನಡ ಸಿನಿಮಾ ಪ್ರೇಕ್ಷಕರಿಗೆ ನೀಡಿದ ನಿರ್ದೇಶಕ ಮಂಜು ಮಾಂಡವ್ಯ ಭರತ-ಬಾಹುಬಲಿ ಚಿತ್ರವನ್ನ ಡೈರೆಕ್ಟ್ ಮಾಡಲು ಸಿದ್ದತೆ ಮಾಡಿಕೊಂಡಿದ್ದಾರೆ. ಹಾಗಾದ್ರೆ ಇದು ತೆಲುಗಿನ ಬಾಹುಬಲಿ ಚಿತ್ರವನ್ನ ಮೀರಿಸುತ್ತಾ? ಐತಿಹಾಸಿಕ ಚಿತ್ರನಾ? ಸಿನಿಮಾದಲ್ಲಿ ಯಾರ್ಯಾರು ಅಭಿನಯಿಸುತ್ತಾರೆ? ಇವೆಲ್ಲಾ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ. ಮುಂದೆ ಓದಿ

ಮಂಜು ಮಾಂಡವ್ಯ ನಿರ್ದೇಶನದಲ್ಲಿ ಭರತ-ಬಾಹುಬಲಿ

ಮಂಜು ಮಾಂಡವ್ಯ ನಿರ್ದೇಶನದಲ್ಲಿ ಭರತ-ಬಾಹುಬಲಿ

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಮಾಸ್ಟರ್ ಪೀಸ್ ಸಿನಿಮಾವನ್ನ ನಿರ್ದೇಶನ ಮಾಡಿದ್ದ ಮಂಜು ಮಾಂಡವ್ಯ ತಮ್ಮ ಡೈರೆಕ್ಷನ್ ನಲ್ಲಿ ಮೂಡಿ ಬರುತ್ತಿರುವ ಎರಡನೇ ಚಿತ್ರವನ್ನ ಅನೌನ್ಸ್ ಮಾಡಿದ್ದಾರೆ. ಭರತ-ಬಾಹುಬಲಿ ಅನ್ನುವ ಚಿತ್ರಕ್ಕೆ ಆಕ್ಷನ್ ಕಟ್ ಹೇಳಲು ಮಂಜು ತಯಾರಿ ನಡೆಸಿದ್ದಾರೆ.

ನಿರ್ದೇಶನದ ಜೊತೆಯಲ್ಲಿ ನಟನೆಯ ಜವಾಬ್ದಾರಿ

ನಿರ್ದೇಶನದ ಜೊತೆಯಲ್ಲಿ ನಟನೆಯ ಜವಾಬ್ದಾರಿ

ರಾಜಹುಲಿ ಸಿನಿಮಾದಲ್ಲಿ ಚಿಕ್ಕದೊಂದು ಪಾತ್ರವನ್ನ ನಿರ್ವಹಿಸಿದ್ದ ಮಂಜುಮಾಂಡವ್ಯ ಭರತ-ಬಾಹುಬಲಿ ಸಿನಿಮಾದ ಮೂಲಕ ಚಿತ್ರರಂಗದಲ್ಲಿ ನಾಯಕನಾಗಿ ಪಾದಾರ್ಪಣೆ ಮಾಡುತ್ತಿದ್ದಾರೆ. ಭರತ-ಬಾಹುಬಲಿ ಚಿತ್ರವನ್ನ ನಿರ್ದೇಶನ ಮಾಡುವುದರ ಜೊತೆಯಲ್ಲಿ ಸಿನಿಮಾದಲ್ಲಿ ಅಭಿನಯವನ್ನೂ ಮಾಡಲಿದ್ದಾರೆ.

ಬಾಹುಬಲಿ ಪಾತ್ರದಲ್ಲಿ ಚಿಕ್ಕಣ್ಣ

ಬಾಹುಬಲಿ ಪಾತ್ರದಲ್ಲಿ ಚಿಕ್ಕಣ್ಣ

ಭರತ-ಬಾಹುಬಲಿ ಸಿನಿಮಾದಲ್ಲಿ ಬಾಹುಬಲಿ ಪಾತ್ರವನ್ನ ಕಾಮಿಡಿ ಸ್ಟಾರ್ ಚಿಕ್ಕಣ್ಣ ನಿರ್ವಹಿಸುತ್ತಿದ್ದಾರೆ. ಇನ್ನು ಭರತನಾಗಿ ನಿರ್ದೇಶಕ ಮಂಜು ಮಾಂಡವ್ಯ ಕಾಣಿಸಿಕೊಳ್ಳಲಿದ್ದಾರೆ. ಮಾಸ್ಟರ್ ಪೀಸ್ ನಂತಯೇ ಇಂದೊಂದು ಪಕ್ಕಾ ಕಮರ್ಷಿಯಲ್ ಸಿನಿಮಾ ಆಗಲಿದೆ.

ಒಳ್ಳೆ ಮೆಸೆಜ್ ಜೊತೆ ಮನೋರಂಜನೆ

ಐಶ್ವರ್ಯ ಫಿಲ್ಮ್ಸ್ ಪ್ರೊಡಕ್ಷನ್ಸ್ ನಲ್ಲಿ ನಿರ್ಮಾಣವಾಗುತ್ತಿರುವ ಭರತ-ಬಾಹುಬಲಿ ಸಿನಿಮಾ ಪಕ್ಕಾ ಕಮರ್ಷಿಯಲ್ ಚಿತ್ರ. ಮಾರ್ಚ್ ನಿಂದ ಚಿತ್ರೀಕರಣ ಶುರುವಾಗಲಿದ್ದು ಮಣಿಕಾಂತ್ ಕದ್ರಿ ಸಂಗೀತ ನಿರ್ದೇಶನ ಮಾಡಲಿದ್ದಾರೆ. ಭರತ-ಬಾಹುಬಲಿ ಸಿನಿಮಾದಲ್ಲಿ ಯಾವುದೇ ಪೌರಾಣಿಕ ಅಥವಾ ಐತಿಹಾಸಿಕ ಕತೆಯ ಹಿನ್ನಲೆ ಇರುವುದಿಲ್ಲ.

More from Filmibeat

English summary
Master piece kannada movie fame Director Manju mandavya is directing 'Bharatha-Bahubali' movie. comedy star Chikkanna and Manju mandavya are acting as heroes in the film. The film shooting start from March
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X