For Quick Alerts
  ALLOW NOTIFICATIONS  
  For Daily Alerts

  ACT 1978: ಮಂಸೋರೆ ನಿರ್ದೇಶನದಲ್ಲಿ ಯಜ್ಞ ಶೆಟ್ಟಿ ಹೊಸ ಸಿನಿಮಾ

  |

  'ಹರಿವು' ಸಿನಿಮಾದ ನಂತರ 'ನಾತಿಚರಾಮಿ' ಸಿನಿಮಾ ಮಾಡಿದ್ದ ನಿರ್ದೇಶಕ ಮಂಸೋರೆ ರಾಷ್ಟ್ರ ಪ್ರಶಸ್ತಿಗಳನ್ನು ಪಡೆದರು. ಇದೀಗ ಈ ಸಿನಿಮಾದ ಬಳಿಕ ಹೊಸ ಸಿನಿಮಾದ ಸುದ್ದಿ ನೀಡಿದ್ದಾರೆ.

  ಮಂಸೋರೆ ನಿರ್ದೇಶನದ ಮೂರನೇ ಸಿನಿಮಾದ ಹೆಸರು 'ACT 1978'. ಸಿನಿಮಾದ ನಾಯಕಿ ಯಜ್ಞ ಶೆಟ್ಟಿ. ಕೆಲ ದಿನಗಳ ಹಿಂದೆಯಷ್ಟೇ ಯಜ್ಞ ಶೆಟ್ಟಿ ಮದುವೆ ಆಗಿದ್ದು, ಇದು ಮದುವೆಯ ನಂತರ ಬರುತ್ತಿರುವ ಮೊದಲ ಸಿನಿಮಾ. ಈಗಾಗಲೇ ಅನೇಕ ವಿಭಿನ್ನ ಸಿನಿಮಾ, ವಿಶೇಷ ಪಾತ್ರಗಳ ಮೂಲಕ ಗಮನ ಸೆಳೆದಿರುವ ಯಜ್ಞ ಶೆಟ್ಟಿ ಇಲ್ಲಿಯೂ ಅದನ್ನು ಮುಂದುವರೆಸಿದ ಹಾಗಿದೆ.

  ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕರಾವಳಿ ಕುವರಿ, ನಟಿ ಯಜ್ಞ ಶೆಟ್ಟಿದಾಂಪತ್ಯ ಜೀವನಕ್ಕೆ ಕಾಲಿಟ್ಟ ಕರಾವಳಿ ಕುವರಿ, ನಟಿ ಯಜ್ಞ ಶೆಟ್ಟಿ

  ಈ ಸಿನಿಮಾದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆಯಾಗಿದೆ. ಗರ್ಭಿಣಿಯಾದ ಯಜ್ಞ ಶೆಟ್ಟಿ ದೇಹಕ್ಕೆ ಬಾಂಬ್ ಸುತ್ತಲಾಗಿದೆ. ಕೈನಲ್ಲಿ ಬಂದೂಕು ಹಾಗೂ ವೈರ್ ಲೆಸ್ ಹಿಡಿದಿದ್ದಾರೆ. ಪೋಸ್ಟರ್ ತುಂಬ ಚೆನ್ನಾಗಿದೆ. ಮೊದಲ ನೋಟಕ್ಕೆ ಗಮನ ಸೆಳೆಯುತ್ತದೆ. ಸಿನಿಮಾದ ಮೇಲೆ ನಿರೀಕ್ಷೆ ಹುಟ್ಟು ಹಾಕುತ್ತಿದೆ.

  ಮೊದಲ ಎರಡು ಸಿನಿಮಾಗಳಲ್ಲಿ ಸಂಬಂಧಗಳ ಕಥೆ ಹೇಳಿದ್ದ ಮಂಸೋರೆ, ಈ ಬಾರಿ ಸೋಷಿಯಲ್ ಥಿಲ್ಲರ್ ಜಾನರ್ ಕಥೆ ಹೇಳುತ್ತಾರೆ. ಮೊದಲ ಬಾರಿಗೆ ದೊಡ್ಡ ಪ್ರಮಾಣದ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ.

  Director Manso Re Next Movie ACT 1978 First Look Released

  ಯಜ್ಞಾ ಶೆಟ್ಟಿಗೆ ದೊಡ್ಡ ಅವಕಾಶ ನೀಡಿದ ರಾಮ್ ಗೋಪಾಲ್ ವರ್ಮಾಯಜ್ಞಾ ಶೆಟ್ಟಿಗೆ ದೊಡ್ಡ ಅವಕಾಶ ನೀಡಿದ ರಾಮ್ ಗೋಪಾಲ್ ವರ್ಮಾ

  ಈ ಸಿನಿಮಾದ ಚಿತ್ರೀಕರಣವನ್ನು ಸೈಲೆಂಟ್ ಆಗಿ ಈಗಾಗಲೇ ಮುಗಿಸಿದ್ದಾರೆ. ದೇವರಾಜ್ ಆರ್ ಸಿನಿಮಾಗೆ ಬಂಡವಾಳ ಹಾಕಿದ್ದಾರೆ. ಮಂಸೋರೆ ರೊಂದಿಗೆ ವೀರು ಮಲ್ಲಣ್ಣ ಹಾಗೂ ದಯಾನಂದ್ ಸ್ಕ್ರೀನ್ ಪ್ಲೇ ಹಾಗೂ ಡೈಲಾಗ್ ಗಳನ್ನು ಬರೆದಿದ್ದಾರೆ.

  English summary
  Director Manso Re next movie 'ACT 1978' first look released. Yagna Shetty will be playing lead role.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X