For Quick Alerts
  ALLOW NOTIFICATIONS  
  For Daily Alerts

  ನಿರ್ದೇಶಕ ಮಂಸೋರೆಯಿಂದ ಸ್ನೇಹಿತ ಸಂಚಾರಿ ವಿಜಯ್‌ಗೊಂದು ಪತ್ರ

  |

  ಸಂಚಾರಿ ವಿಜಯ್ ನಟಿಸಿರುವ ಪುಕ್ಸಟ್ಟೆ ಲೈಫು ಸಿನಿಮಾ ಈ ಶುಕ್ರವಾರ ಬಿಡುಗಡೆಯಾಗುತ್ತಿದೆ. ವಿಜಯ್ ಇಲ್ಲದ ಈ ದಿನವನ್ನು ಸ್ಮರಿಸಿಕೊಂಡಿರುವ ಗೆಳಯ ಹಾಗೂ ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಮಂಸೋರೆ ಫೇಸ್‌ಬುಕ್‌ನಲ್ಲಿ ಸಂಚಾರಿಗೊಂದು ಪತ್ರ ಬರೆದಿದ್ದಾರೆ. ಈ ಪತ್ರ ಹೀಗಿದೆ..

  ''ವಿಜಯ್ ಸರ್ ನಿಮ್ಮ ಸಿನೆಮಾ ಪುಕ್ಸಟ್ಟೆ ಲೈಫು ಆಗ್ತಿದೆ. ಇನ್ನೊಂದು ಖುಷಿ ಏನ್ ಗೊತ್ತಾ, ಪೈಯ್ಡ್ ಪ್ರೀಮಿಯರ್ ಶೋ ಹೌಸ್ ಫುಲ್ ಆಗಿ, ಇನ್ನೊಂದು ಶೋ ಮಾಡ್ತಿದ್ದಾರೆ. ಆಕ್ಚುಲಿ ನಾನು ಮಿಸ್ ಮಾಡ್ಕೊಳ್ತಿರೋದು, ನಿಮ್ ಬ್ರಾಡ್‌ಕಾಸ್ಟ್ ಮೆಸೇಜಸ್ನ. ನೀವಿದ್ದಿದ್ರೆ ಇಷ್ಟೊತ್ತಿಗೆ ರೇಜಿಗೆ ಹುಟ್ಸೋಷ್ಟು ಸಿನೆಮಾ ರಿಲೀಸ್ ಬಗ್ಗೆ ಮೆಸೇಜಸ್ಸು, ನ್ಯೂಸು ಅದೂ ಇದೂ ಕಳಿಸ್ತಿದ್ರಿ. ಅದರ ಬಗ್ಗೆ ಒಂದ್ಸಲ ರೇಗಿದ್ದಕ್ಕೆ ನೀವು ಹೇಳಿದ್ರಿ, ಸಾರ್ ನಿಮ್ಗೆ ಗೊತ್ತಿಲ್ಲಾ ಸುಮ್ನಿರಿ, ಅಷ್ಟು ಮೆಸೇಜ್ ಕಳ್ಸಿದ್ರು ಜನ ಬಂದು ಸಿನೆಮಾ ನೋಡೋದು ಕಡಿಮೇನೆ. ಅದಕ್ಕೆ ಅವರಿಗೆ ಪದೇ ಪದೇ ನೆನಪು ಮಾಡ್ತಾನೆ ಇರ್ಬೇಕು ಅಂತ.

  'ಪುಕ್ಸಟ್ಟೆ ಲೈಫು' ಪ್ರೀಮಿಯರ್‌ನಲ್ಲಿ ನೆನಪಾದ ಸಂಚಾರಿ ವಿಜಯ್'ಪುಕ್ಸಟ್ಟೆ ಲೈಫು' ಪ್ರೀಮಿಯರ್‌ನಲ್ಲಿ ನೆನಪಾದ ಸಂಚಾರಿ ವಿಜಯ್

  ನಿಮಗೆ ಪ್ರತಿ ಸಿನೆಮಾ ಬಿಡುಗಡೆನೂ ಒಂದು ಸಂಭ್ರಮ, ಆತಂಕ ಅನ್ನೋದು ನನಗಿಂತ ಚೆನ್ನಾಗಿ ಯಾರಿಗೆ ಗೊತ್ತು ಅಲ್ವಾ? ಯಾಕೇಳಿ, ನೀವು ಪೂರ್ಣ ಪ್ರಮಾಣದ ಮುಖ್ಯ ಪಾತ್ರ ವಹಿಸಿ ನಟಿಸಿದ 'ಹರಿವು' ಕೊನೆಗೂ ಥಿಯೇಟರ್ ಅಲ್ಲಿ 'ಅಧಿಕೃತವಾಗಿ' ಬಿಡುಗಡೆ ಆಗ್ಲೇ ಇಲ್ಲಾ.

  ಆದ್ರೂ ಆ ಸಿನೆಮಾ ಎಲ್ಲೇ ಶೋ ಆಗಲಿ, ಬಿಡುವಿದ್ರೆ ನನ್ ಜೊತೆ ಬಂದ್ಬಿಡ್ತಿದ್ರಿ, ಶೋ ಮುಗಿಯೋವರೆಗೂ ಅಲ್ಲೇ ಅಕ್ಕ ಪಕ್ಕ ಓಡಾಡ್ಕೊಂಡಿದ್ದು, ಕ್ಲೈಮ್ಯಾಕ್ಸ್ ಅಲ್ಲಿ ಹಾಡು ಬರೋ ಹೊತ್ತಿಗೆ ಎಕ್ಸಿಟ್ ಬಾಗಿಲು ಹತ್ರ ಹೋಗಿ ಇಬ್ರೂ ನಿಂತ್ಕೊಂಡು ಜನಗಳ expressionನ್ನೇ ನೊಡ್ತಾ ನಿಲ್ತಿದ್ವಿ. ಆ ಅಭ್ಯಾಸ ಮೊನ್ನೆ ಆಕ್ಟ್ ಸಿನೆಮಾವರೆಗೂ ನಿಮಗೆ ಬಿಟ್ಟಿರ್ಲಿಲ್ಲಾ ಅನ್ನೋದೆ ನನಗೆ ಆಶ್ಚರ್ಯ. ಆದ್ರೆ ಫೆಬ್ರವರಿಯಲ್ಲಿ ಪಾಂಡವಪುರದಲ್ಲಿ ಹರಿವು ಪ್ರದರ್ಶನಕ್ಕೆ ಬಂದವರು ಕುತ್ಕೊಂಡು ಪೂರ್ತಿ ಸಿನೆಮಾ ನೋಡಿದ್ರಿ. ಯಾಕೋ ಹೊರಗೆ ಬರ್ಲೇ ಇಲ್ಲಾ ನೀವು. ಹ್ಮ್ ಇರ್ಲಿ ಹೇಳ್ತಾ ಹೋದ್ರೆ ತುಂಬಾನೇ ಇದೆ.

  ಸದ್ಯಕ್ಕೆ ಇಷ್ಟು ಸಾಕು. ಉಳಿದದ್ದು ಈಗ ಬೇಡ. ನಾಳೆ ಬೆಳಗ್ಗೆ ನಿಮಗೆ ತುಂಬಾ ಇಷ್ಟವಾದ ಸಿನೆಮಾ ಬಿಡುಗಡೆ ಆಗ್ತಿದೆ. ಈ ಸಿನೆಮಾ ಶೂಟಿಂಗ್ ಟೈಮಲ್ಲಿ ತುಂಬಾನೇ ಹೇಳಿದ್ರಿ, ಅಧ್ವೈತಾ ಗುರುಮೂರ್ತಿ ಕ್ಯಾಮರಾ ವರ್ಕು, ಅರವಿಂದ್ ಕುಪ್ಳೀಕರ್ ಡೈರೆಕ್ಷನ್ನು, ನಾಗರಾಜ ಸೋಮಯಾಜಿ ಡೆಡಿಕೇಷನ್ನು ಎಲ್ಲಾ ತುಂಬಾನೆ ಹೊಗಳ್ತಿದ್ರಿ. ಈಗ ಅದೆಲ್ಲಾ ನೋಡೋ ಟೈಂ ಬಂದಿದೆ. ನಾನು ಪ್ರೀಮಿಯರ್ ಶೋ ನೋಡ್ತಿಲ್ಲಾ. ಅಲ್ಲಿಗೆ ಎಲ್ಲಾ ಪರಿಚಯದವರೇ ಬಂದಿರ್ತಾರೆ. ಎಲ್ಲಾ ನಿಮ್ ಬಗ್ಗೆನೇ ಮಾತಿರುತ್ತೆ. ನಾನು ಎಮೋಷನಲಿ ಅಷ್ಟು ಸ್ಟ್ರಾಂಗ್ ಇಲ್ಲಾ, ನಿಮ್ಗೆ ಗೊತ್ತಲ್ಲಾ. ಬಟ್ ನಾಳೆ ಶುಕ್ರವಾರ ಫಸ್ಟ್ ಡೇ ಫಸ್ಟ್ ಶೋ ನೋಡ್ತೀನಿ. ಅದು ನಾನೂ ಅಖಿಲಾ ಮತ್ತೆ ನೀವು.

  Director Mansore Has Write Letter To Sanchari Vijay

  ಓಕೆ ನಾ. ಸಿಟ್ಟೆಲ್ಲಾ ಮಾಡ್ಕೋಬೇಡಿ.

  ಬೆಳಿಗ್ಗೆ ಸಿಗೋಣ.

  ಆಲ್ ದ ಬೆಸ್ಟ್, ಪುಕ್ಸಟ್ಟೆ ಲೈಫು ಟೀಂಗೆ'' ಎಂದು ಮಂಸೋರೆ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ.

  ಅಂದ್ಹಾಗೆ, 'ಪುಕ್ಸಟ್ಟೆ ಲೈಫು ಪುರುಸೊತ್ತೇ ಇಲ್ಲ' ಚಿತ್ರ ಸೆಪ್ಟೆಂಬರ್ 24 ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ಅರವಿಂದ್ ಕುಪ್ಳೀಕರ್ ನಿರ್ದೇಶಿಸಿರುವ ಈ ಚಿತ್ರದಲ್ಲಿ ಅಚ್ಯುತ್ ಕುಮಾರ್, ರಂಗಾಯಣ ರಘು ಪ್ರಧಾನ ಪಾತ್ರಗಳಲ್ಲಿ ನಟಿಸಿದ್ದಾರೆ. ಸಂಚಾರಿ ವಿಜಯ್‌ಗೆ ಜೋಡಿಯಾಗಿ ಮಾತಂಗಿ ಪ್ರಸನ್ನಾ ನಟಿಸಿದ್ದಾರೆ. ಈಗಾಗಲೇ ಈ ಚಿತ್ರ ಬೆಂಗಳೂರು ಹಾಗೂ ಮೈಸೂರಿನಲ್ಲಿ ಪ್ರೀಮಿಯರ್ ಕಂಡಿದೆ.

  English summary
  National award winning director Mansore has write letter to Sanchari Vijay.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X