twitter
    For Quick Alerts
    ALLOW NOTIFICATIONS  
    For Daily Alerts

    ಕೊರೊನಾ ವಿಚಾರದಲ್ಲೂ ಉತ್ತರ ಕರ್ನಾಟಕದ ನಿರ್ಲಕ್ಷ್ಯ ಯಾಕೆ? ನಿರ್ದೇಶಕ ಮಂಸೋರೆ ಪ್ರಶ್ನೆ

    |

    ಕೊರೊನಾ ವೈರಸ್ ಕಾರಣದಿಂದ ಮುನ್ನೆಚ್ಚರಿಕೆ ಕ್ರಮವಾಗಿ ಕನ್ನಡ ಚಿತ್ರರಂಗ ಚಿತ್ರೀಕರಣ ಸೇರಿದಂತೆ ಸಿನಿಮಾ ಸಂಬಂಧಿ ಚಟುವಟಿಕೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ. ಚಿತ್ರಮಂದಿರಗಳೂ ಬಂದ್ ಆಗಿವೆ. ಈಗ ಸಂಪೂರ್ಣ ಮನರಂಜನಾ ಮಾಧ್ಯಮವೇ ಸ್ಥಗಿತಗೊಳ್ಳುವ ಸೂಚನೆ ನೀಡಿದೆ.

    ಕೆಲವು ನಟ-ನಟಿಯರು ಆರೋಗ್ಯ ಕಾಪಾಡಿಕೊಳ್ಳಲು ಯಾವ ಕ್ರಮಗಳನ್ನು ಅನುಸರಿಸಬೇಕು ಎಂದು ಜನರಿಗೆ ಮುಂಜಾಗ್ರತಾ ಕ್ರಮಗಳನ್ನು ತಿಳಿಸುತ್ತಿದ್ದಾರೆ. ಈ ನಡುವೆ 'ಹರಿವು', 'ನಾತಿಚರಾಮಿ' ಸಿನಿಮಾಗಳ ಖ್ಯಾತಿಯ ನಿರ್ದೇಶಕ ಮಂಸೋರೆ ಸರ್ಕಾರದ ನೀತಿಗಳನ್ನು ಪ್ರಶ್ನಿಸಿದ್ದಾರೆ. ದೇಶದ ಕೊರೊನಾ ವೈರಸ್ ಮೊದಲ ಸಾವು ವರದಿಯಾಗಿದ್ದೇ ಕರ್ನಾಟಕದ ಕಲಬುರಗಿಯಲ್ಲಿ. ಅಲ್ಲಿ ಇನ್ನೂ ಕೆಲವು ಪ್ರಕರಣಗಳು ಪತ್ತೆಯಾಗಿವೆ. ಹೀಗಿದ್ದರೂ ಈ ಭಾಗದಲ್ಲಿ ಒಂದೇ ಒಂದು ಪರೀಕ್ಷಾ ಕೇಂದ್ರ ಇಲ್ಲದೆ ಇರುವುದು ಅವರಲ್ಲಿ ಕಳವಳ ಮೂಡಿಸಿದೆ.

    ಮನುಷ್ಯರೆಂದು ಪರಿಗಣಿಸಿ

    ಉತ್ತರ ಕರ್ನಾಟಕದ ಭಾಗದ ಜನತೆಯ ಬಗ್ಗೆ ಯಾಕಿಷ್ಟು ಬೇಜವಾಬ್ದಾರಿ ಧೋರಣೆ. ಮೊದಲ ಸಾವು ಸಂಭವಿಸಿರುವುದು ಕಲ್ಬುರ್ಗಿಯಲ್ಲಿ. ಮೊದಲ ಆದ್ಯತೆ ಆ ಭಾಗದ ಜನರಿಗೆ ಯಾಕಿಲ್ಲಾ. ಆ ಭಾಗದ ಜನರನ್ನು ಮನುಷ್ಯರೆಂದು ಯಾವಾಗ ಪರಿಗಣಿಸುತ್ತೀರಿ? ಎಂದು ಮಂಸೋರೆ ಪ್ರಶ್ನಿಸಿದ್ದಾರೆ.

    ಚಿತ್ರೀಕರಣ ಬಂದ್

    ಚಿತ್ರೀಕರಣ ಬಂದ್

    ಮಾರ್ಚ್ 19 ರಿಂದ ಮಾರ್ಚ್ 31ರವರೆಗೆ ಸಿನಿಮಾ, ಟಿ.ವಿ.ಶೋ ಮತ್ತು ವೆಬ್ ಸೀರೀಸ್‌ಗಳ ಚಿತ್ರೀಕರಣ ಸ್ಥಗಿತಗೊಳ್ಳಲಿವೆ. ವೆಸ್ಟರ್ನ್ ಇಂಡಿಯನ್ ಸಿನಿ ಎಂಪ್ಲಾಯೀಸ್ ಫೆಡರೇಷನ್, ಇಂಡಿಯನ್ ಫಿಲ್ಮ್ ಆಂಡ್ ಟೆಲಿವಿಷನ್ ಡೈರೆಕ್ಟರ್ಸ್ ಅಸೋಸಿಯೇಷನ್ ಮತ್ತು ಪ್ರೊಡ್ಯೂಸರ್ಸ್ ಗಿಲ್ಡ್ ಆಫ್ ಇಂಡಿಯಾ ಸೇರಿದಂತೆ ವಿವಿಧ ಸಂಘಟನೆಗಳು ಈ ನಿರ್ಧಾರ ತೆಗೆದುಕೊಂಡಿವೆ.

    ಚಿತ್ರೀಕರಣ ಬಂದ್

    ಚಿತ್ರೀಕರಣ ಬಂದ್

    ಮಾರ್ಚ್ 19 ರಿಂದ ಮಾರ್ಚ್ 31ರವರೆಗೆ ಸಿನಿಮಾ, ಟಿ.ವಿ.ಶೋ ಮತ್ತು ವೆಬ್ ಸೀರೀಸ್‌ಗಳ ಚಿತ್ರೀಕರಣ ಸ್ಥಗಿತಗೊಳ್ಳಲಿವೆ. ವೆಸ್ಟರ್ನ್ ಇಂಡಿಯನ್ ಸಿನಿ ಎಂಪ್ಲಾಯೀಸ್ ಫೆಡರೇಷನ್, ಇಂಡಿಯನ್ ಫಿಲ್ಮ್ ಆಂಡ್ ಟೆಲಿವಿಷನ್ ಡೈರೆಕ್ಟರ್ಸ್ ಅಸೋಸಿಯೇಷನ್ ಮತ್ತು ಪ್ರೊಡ್ಯೂಸರ್ಸ್ ಗಿಲ್ಡ್ ಆಫ್ ಇಂಡಿಯಾ ಸೇರಿದಂತೆ ವಿವಿಧ ಸಂಘಟನೆಗಳು ಈ ನಿರ್ಧಾರ ತೆಗೆದುಕೊಂಡಿವೆ.

    ಚಿತ್ರರಂಗಕ್ಕೆ ಭಾರಿ ನಷ್ಟ

    ಚಿತ್ರರಂಗಕ್ಕೆ ಭಾರಿ ನಷ್ಟ

    ಸಿನಿಮಾ ಪ್ರದರ್ಶನ ರದ್ದು ಮತ್ತು ಚಿತ್ರೀಕರಣ ಸ್ಥಗಿತದ ಕಾರಣ ಹಾಲಿವುಡ್ ಈಗಾಗಲೇ ಸುಮಾರು 7 ಬಿಲಿಯನ್ ಡಾಲರ್ ನಷ್ಟ ಅನುಭವಿಸಿದೆ. ಚಿತ್ರಮಂದಿರಗಳು ಸ್ಥಗಿತಗೊಳ್ಳುವುದು ಮುಂದುವರಿದರೆ ಇನ್ನೂ 10 ಬಿಲಿಯನ್ ಡಾಲರ್‌ಗೂ ಅಧಿಕ ನಷ್ಟ ಅನುಭವಿಸಬೇಕಾಗುತ್ತದೆ. ಕನ್ನಡ ಚಿತ್ರರಂಗ ಕಳೆದ ಒಂದು ವಾರದಲ್ಲಿ ಸುಮಾರು 6-70ಕೋಟಿ ರೂದಷ್ಟು ನಷ್ಟ ಅನುಭವಿಸಿದ್ದು, ದಕ್ಷಿಣ ಚಿತ್ರರಂಗ 3,500 ಕೋಟಿ ರೂ ನಷ್ಟ ಅನುಭವಿಸುವ ಭೀತಿಯಲ್ಲಿದೆ.

    English summary
    Director Mansore has questioned the state government for neglecting the North Karnataka especially Kalaburgi even in the coronavirus issue.
    Thursday, March 19, 2020, 14:33
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X