For Quick Alerts
  ALLOW NOTIFICATIONS  
  For Daily Alerts

  ದೇವರೇ ಭಕ್ತನಿಗೆ ಕಾಲ್ ಮಾಡಿ ಮಾತನಾಡಿದರು; ನಿರ್ದೇಶಕ ಮಂಸೋರೆ

  |

  ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕ ಮಂಸೋರೆ ಸಾರಥ್ಯದಲ್ಲಿ ಮೂಡಿಬಂದ ಆಕ್ಟ್ 1978 ಸಿನಿಮಾ ರಿಲೀಸ್ ಆಗಿ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ. ಅಭಿಮಾನಿಗಳು ಮತ್ತು ಚಿತ್ರರಂಗದ ಗಣ್ಯರು ಸಿನಿಮಾ ನೋಡಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

  ಕೊರೊನಾ ಲಾಕ್ ಡೌನ್ ಬಳಿಕ ರಿಲೀಸ್ ಆದ ಮೊದಲ ಸಿನಿಮಾ ಆಕ್ಟ್ 1978 ಚಿತ್ರವನ್ನು ಪ್ರೇಕ್ಷಕರು ಹೇಗೆ ಸ್ವೀಕರಿಸಲಿದ್ದಾರೆ ಎನ್ನುವ ಕುತೂಹಲ ಎಲ್ಲರಲ್ಲೂ ಮನೆ ಮಾಡಿತ್ತು. ಆದರೆ ನಿರೀಕ್ಷೆಗೂ ಮೀರಿ ವ್ಯಕ್ತವಾದ ಪ್ರತಿಕ್ರಿಯೆಗೆ ಇಡೀ ಸಿನಿಮಾತಂಡ ಸಂತಸ ಪಟ್ಟಿದೆ. ಕೊರೊನಾ ಕಾಲದಲ್ಲೂ ಚಿತ್ರಮಂದಿರಕ್ಕೆ ಬಂದು ಸಿನಿಮಾ ನೋಡಿ ಅನೇಕರು ಹಾಡಿ ಹೊಗಳುತ್ತಿದ್ದಾರೆ.

  ಈ ಸಿನಿಮಾವನ್ನು ಟೀಕೆ ಮಾಡೋಕೆ ಆಗತ್ತಾ? 'ಆಕ್ಟ್ 1978' ಸಿನಿಮಾದ ಬಗ್ಗೆ ಹಂಸಲೇಖ ಮಾತುಈ ಸಿನಿಮಾವನ್ನು ಟೀಕೆ ಮಾಡೋಕೆ ಆಗತ್ತಾ? 'ಆಕ್ಟ್ 1978' ಸಿನಿಮಾದ ಬಗ್ಗೆ ಹಂಸಲೇಖ ಮಾತು

  ವಿಶೇಷ ಎಂದರೆ ಆಕ್ಟ್ 1978 ಸಿನಿಮಾವನ್ನು ನಾದಬ್ರಹ್ಮ ಹಂಸಲೇಖ ಸಹ ವೀಕ್ಷಿಸಿ ಮೆಚ್ಚಿಕೊಂಡಿದ್ದಾರೆ. ಸಿನಿಮಾ ನೋಡಿ ಹೊರಬರುತ್ತಿದ್ದಂತೆ ವಿಡಿಯೋ ಮೂಲಕ ವಿಮರ್ಶೆ ಮಾಡಿ ಹಂಚಿಕೊಂಡಿದ್ದಾರೆ. ಅಷ್ಟೆ ಅಲ್ಲ ನಿರ್ದೇಶಕ ಮಂಸೋರೆ ಅವರಿಗೆ ಖುದ್ದಿ ಹಂಸಲೇಖ ಅವರೇ ಕಾಲ್ ಮಾಡಿ ಹಾಡಿಹೊಗಳಿದ್ದಾರೆ.

  ಈ ಬಗ್ಗೆ ಮಂಸೋರೆ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. 'ದೇವರೇ ಭಕ್ತನಿಗೆ ಕಾಲ್ ಮಾಡಿ ಮಾತನಾಡಿದರು, ಮೊದಲಿಗೆ ಸಿನೆಮಾ ಬಗ್ಗೆ ನಾನ್ ಸ್ಟಾಪ್ ಮೆಚ್ಚುಗೆಯ ಮಾತನಾಡಿ ಕೊನೆಯಲ್ಲಿ ಹೆಸರು ಹೇಳಿದರು. ಆ ಕ್ಷಣ ಮಾತುಗಳೇ ಹೊರಡದಾಯಿತು. ಥ್ಯಾಂಕ್ಯೂ ಹಂಸಲೇಖ ಸರ್' ಎಂದು ಬರೆದುಕೊಂಡಿದ್ದಾರೆ.

  ಒಂದೇ ವಾರದಲ್ಲಿ ದಾಖಲೆಯ ಕಲೆಕ್ಷನ್ ಮಾಡಿತ್ತು ಮಠ ಸಿನಿಮಾ | Elldelu Manjunatha | Filmibeat Kannada

  ಏನ್‌ ಸಿನಿಮಾ ರೀ ಅದು? ಅದನ್ನೇನು ಟೀಕೆ ಮಾಡೋಕೆ ಆಗತ್ತಾ? ಒಂದು ಅದ್ಭುತವಾದ ಕಥೆಯುಳ್ಳ ಕನ್ನಡದ ಸಿನಿಮಾ' ಎಂದಿದ್ದಾರೆ ಹಂಸಲೇಖ. ವಿಷಯ ನೋಡಿ ಮುಖಕ್ಕೆ ರಾಚಿದಂತಾಯಿತು 'ನಿರ್ದೇಶಕ ಮಂಸೋರೆ ಒಂದು ಒಳ್ಳೆಯ ಸಿನಿಮಾ ಮಾಡಿದ್ದಾರೆ. ನನಗೆ ಅವರು ಯಾರೆಂದು ಗೊತ್ತಿಲ್ಲ. ಆರಂಭದಿಂದ ಕೊನೆವರೆಗೂ ನಾನು ಕಣ್ಣಿನಿಂದ ಸಿನಿಮಾ ನೋಡಿಲ್ಲ. ಹೃದಯದಿಂದ ನೋಡಿದೆ. ಅದ್ಭುತವಾದ ಥೀಮ್‌, ಅದ್ಭುತವಾದ ಚಿತ್ರಕಥೆ ಇದರಲ್ಲಿ ಇದೆ' ಎಂದು ಹೇಳಿದ್ದಾರೆ.

  English summary
  Director mansore reaction about Hamsalekha review on ACT 1978 movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X