twitter
    For Quick Alerts
    ALLOW NOTIFICATIONS  
    For Daily Alerts

    'ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವ'ದ ವಿರುದ್ಧ ನಿರ್ದೇಶಕ ಮಂಸೋರೆ ಬೇಸರ

    |

    ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ದಿನಗಣನೆ ಆರಂಭವಾಗಿದೆ. ಇದೆ ತಿಂಗಳು ಫೆಬ್ರವರಿ 26ರಿಂದ ಮಾರ್ಚ್ 4 ವರೆಗೆ ಒಟ್ಟು 7 ದಿನಗಳಕಾಲ ಚಲನಚಿತ್ರೋತ್ಸವ ನಡೆಯಲಿದೆ. ಆದರೆ ಇದರ ನಡವೆ ಈಗ ಚಿತ್ರೋತ್ಸವದ ವಿರುದ್ಧ ಅಸಮಾಧಾನ ವ್ಯಕ್ತವಾಗುತ್ತಿದೆ.

    ಹೌದು, ನಿರ್ದೇಶಕ ಮಂಸೋರೆ ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವದ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ. ಬೆಂಗಳೂರಿನ ಚಲನಚಿತ್ರೋತ್ಸವದಲ್ಲಿ ಕನ್ನಡದ ಅದ್ಭುತ ಚಿತ್ರಗಳಾದ ಗಂಟುಮೂಟೆ ಮತ್ತು ಅರಿಷಡ್ವರ್ಗ ಈ ಎರಡು ಚಿತ್ರಗಳನ್ನು ಕಡೆಗಣಿಸಿರುವ ಬಗ್ಗೆ ಬೇಸರ ಹೊರಹಾಕಿ ದೀರ್ಘವಾಗಿ ಬರೆದುಕೊಂಡಿದ್ದಾರೆ.

    ಎಷ್ಟೋ ಹೊಸ ತಲೆಮಾರಿನ ಯುವ ನಿರ್ದೇಶಕರಿಗೆ ಸ್ಫೂರ್ತಿ ನೀಡುವ ವೇದಿಕೆ ಈ ಚಲನಚಿತ್ರೋತ್ಸವ. ಇದು ಬೆಂಗಳೂರಿನ ಹೆಮ್ಮೆ. ಆದರೆ ಈ ಬಾರಿ ಚಿತ್ರೋತ್ಸವದಲ್ಲಿ ಕನ್ನಡದ ಅತ್ತ್ಯುತ್ತಮ ಸಿನೆಮಾಗಳನ್ನು ಕಡೆಗಣಿಸಿರುವುದು ಬೇಸರತಂದಿದೆ ಎಂದು ಹೇಳಿದ್ದಾರೆ.

    Director Mansore Upset About Bangalore International Film Festival

    ಮಂಸೋರೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದು ಹೀಗೆ, "ನನಗೆ ಸಿನೆಮಾ ನಿರ್ದೇಶನದ ಬಗ್ಗೆ ಆಸಕ್ತಿ ಬೆಳೆದಿದ್ದು, ನಿರ್ದೇಶನವನ್ನು ಗಂಭೀರವಾಗಿ ಪರಿಗಣಿಸಿಲು ಪ್ರೇರೇಪಿಸಿದ್ದು, ಯಾರ ಬಳಿಯೂ ಸಹ ನಿರ್ದೇಶಕನಾಗಿ ಕೆಲಸ ಮಾಡಿ ಅನುಭವವಿಲ್ಲದ ನನಗೆ ನಿರ್ದೇಶಕನಾಗಲು ಧೈರ್ಯ ತುಂಬಿದ್ದು ಬೆಂಗಳೂರು ಚಲಚಿತ್ರೋತ್ಸವ" ಎಂದು ಹೇಳಿದ್ದಾರೆ.

    ಇನ್ನು "ಹೊಸ ತಲೆಮಾರಿನ ಅದೆಷ್ಟೋ ಯುವ ನಿರ್ದೇಶಕರಿಗೆ ಸ್ಪೂರ್ತಿ ನೀಡುವ ವೇದಿಕೆ ಈ ಚಲನಚಿತ್ರೋತ್ಸವ. ಇದು ನಮ್ಮ ಬೆಂಗಳೂರಿನ ಹೆಮ್ಮೆ. ಇಂತಹ ಚಿತ್ರೋತ್ಸವದಲ್ಲಿ ಈ ಬಾರಿ ಕನ್ನಡದ ಎರಡು ಅತ್ತ್ಯುತ್ತಮ ಸಿನೆಮಾಗಳನ್ನು ಕನ್ನಡ ಸಿನೆಮಾ ಸ್ಪರ್ಧೆ ಇಂದ ಹೊರಗಿಟ್ಟಿರುವುದು ವಯಕ್ತಿಕವಾಗಿ ನನಗೆ ಬೇಸರ ತರಿಸಿದೆ.

    ಈ ಎರಡೂ ಸಿನಿಮಾಗಳು ಹಲವು ಅಂತರರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಆಯ್ಕೆಯಾಗಿದ್ದವು. ಆದರೆ ತಮ್ಮ ಸ್ವಂತ ನೆಲದಲ್ಲೇ ಕಡೆಗಣಿಸಲ್ಪಟ್ಟಿದ" ಎಂದು ಹೇಳಿಕೊಂಡಿದ್ದಾರೆ.

    ಅಂದ್ಹಾಗೆ ಗಂಟುಮೂಟೆ ಮತ್ತು ಅರಿಷಡ್ವರ್ಗ ಚಿತ್ರಗಳು ಹಲವು ಚಿತ್ರೋತ್ಸವಕ್ಕೆ ಆಯ್ಕೆಯಾಗಿದ್ದ ಕನ್ನಡದ ಚಿತ್ರಗಳು. ಆದರೆ ಇಂತಹ ಅದ್ಭುತ ಚಿತ್ರಗಳನ್ನು ಕನ್ನಡದಲ್ಲಿಯೆ ಕಡೆಗಣಿಸುತ್ತಿರುವುದು ನೋವಿನ ಸಂಗತಿಯಾಗಿದೆ ಎಂದು ಅನೇಕರು ಕಮೆಂಟ್ ಮಾಡಿದ್ದಾರೆ.

    12ನೇ ಚಿತ್ರೋತ್ಸವ ಇದಾಗಿದ್ದು ಈ ಬಾರಿ 50 ದೇಶಗಳ 200 ಚಿತ್ರಗಳು ಪ್ರದರ್ಶನವಾಗಲಿದೆ. ಒಟ್ಟು 14 ವಿಭಾಗಗಳಿರುತ್ತವೆ. ವಿಶ್ವ ಸಿನಿಮಾ, ಚಿತ್ರ ಭಾರತಿ, ಭಾರತೀಯ ಚಿತ್ರಗಳ ಸ್ಪರ್ಧಾ ವಿಭಾಗ, ಏಷಿಯನ್ ಸಿನಿಮಾ, ಆತ್ಮಚರಿತ್ರೆ ಆಧಾರಿತ ಸಿನಿಮಾಗಳು, ಸಾಕ್ಷ್ಯಚಿತ್ರಗಳನ್ನು ವೀಕ್ಷಿಸಬಹುದಾಗಿದೆ.

    English summary
    Director Mansore Upset about Bangalore International Film Festival.
    Sunday, February 23, 2020, 14:40
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X