For Quick Alerts
  ALLOW NOTIFICATIONS  
  For Daily Alerts

  ನಿರ್ದೇಶಕ, ಡಿಸೈನರ್ ಮಸ್ತಾನ್ ಕೊರೊನಾಗೆ ಬಲಿ

  |

  ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಕೊರೊನಾ ಸೋಂಕಿಗೆ ಅನೇಕರು ಜೀವ ಕಳೆದುಕೊಳ್ಳುತ್ತಿದ್ದಾರೆ. ಇದೀಗ ಸ್ಯಾಂಡಲ್ ವುಡ್ ನಿಂದ ಮತ್ತೊಂದು ಆಘಾತಕಾರ ಸುದ್ದಿ ಹೊರಬಂದಿದ್ದು, ಖ್ಯಾತ ಡಿಸೈನರ್ ಮತ್ತು ನಿರ್ದೇಶಕ ಮಸ್ತಾನ್ ಕೊರೊನಾಗೆ ಬಲಿಯಾಗಿದ್ದಾರೆ.

  ನಿರ್ದೇಶಕ ಮಸ್ತಾನ್ ಇತ್ತೀಚಿಗೆ ಕೊರೊನಾ ಪಾಸಿಟಿವ್‌ನಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಹೆಸರು ಘಟ್ಟ ಬಳಿ ಇರುವ ಸಪ್ತಗಿರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ನಿನ್ನ ರಾತ್ರಿ (ಏಪ್ರಿಲ್ 21) ನಿಧನರಾಗಿದ್ದಾರೆ.

  ಕೊರೊನಾ ಸೋಂಕಿಗೆ ಬಲಿಯಾದ ಚಂದನವನದ ಯುವ ನಟ, ನಿರ್ಮಾಪಕ ಅರ್ಜುನ್ ಮಂಜುನಾಥ್

  ಮಸ್ತಾನ್ ಅವರಿಗೆ 63 ವರ್ಷ ವಯಸ್ಸಾಗಿತ್ತು. ಸುಮಾರು 4 ದಶಕಗಳಿಂದ ಚಿತ್ರರಂಗದಲ್ಲಿ ಪೋಸ್ಟರ್ ಡಿಸೈನರ್ ಆಗಿ ಕೆಲಸ ಮಾಡುತ್ತಿದ್ದ ಮಸ್ತಾನ್ 2000ಕ್ಕೂ ಅಧಿಕ ಚಿತ್ರಗಳಿಗೆ ಡಿಸೈನರ್ ಆಗಿ ಕಾರ್ಯನಿರ್ವಹಿಸಿದ್ದಾರೆ. ಡಿಸೈನರ್ ಮಾತ್ರವಲ್ಲದೇ ನಿರ್ದೇಶಕರಾಗಿಯೂ ಗುರುತಿಸಿಕೊಂಡಿದ್ದಾರೆ.

  ಮೋಹನ್ ನಟನೆಯ ಶುಕ್ಲಂಬರಧರಂ, ಕಲ್ಲೇಶಿ ಮಲ್ಲಿಶಿ, ಮತ್ತು ನೀತು ಶೆಟ್ಟಿ, ನೇಹಾ ಪಾಟಿಲ್ ನಟನೆಯ ಸಿತಾರ ಸಿನಿಮಾಗಳಿಗೆ ಮಸ್ತಾನ್ ಆಕ್ಷನ್ ಕಟ್ ಹೇಳಿದ್ದಾರೆ. ಮಸ್ತಾನ್ ನಿಧನಕ್ಕೆ ಸ್ನೇಹಿತರ, ಚಿತ್ರರಂಗದ ಗಣ್ಯರು ಸಂತಾಪ ಸೂಚಿಸಿದ್ದಾರೆ.

  ಅಮೆಜಾನ್ ಪ್ರೈಮ್ ಗೆ ಬರ್ತಿದೆ ರಾಬರ್ಟ್ ಸಿನಿಮಾ | Filmibeat Kannada

  ಇತ್ತೀಚಿಗಷ್ಟೆ ಸ್ಯಾಂಡಲ್‌ವುಡ್‌ನ ಯುವ ನಿರ್ಮಾಪಕ ಮತ್ತು ನಟ ಅರ್ಜುನ್ ಮಂಜುನಾಥ್ ಕೋವಿಡ್‌ಗೆ ಬಲಿಯಾಗಿದ್ದರು. ಇದೀಗ ಚಂದನವನದ ನಿರ್ದೇಶಕ ಮಸ್ತಾನ್ ಅವರನ್ನು ಕಳೆದುಕೊಂಡಿರುವುದು ನಿಜಕ್ಕೂ ದುಃಖದ ವಿಷಯ.

  English summary
  Kannada Director Mastan passed away due to Corona.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X