twitter
    For Quick Alerts
    ALLOW NOTIFICATIONS  
    For Daily Alerts

    'ಸಾಯಲಿ ಕೊರೊನಾ ಸ್ವಲ್ಪ ಹೊತ್ತು ನಗೋಣ': ದಿನವೂ ನಗಿಸ್ತಿದ್ದಾರೆ 'ಮಠ' ಗುರುಪ್ರಸಾದ್

    |

    ಕೊರೊನಾವೈರಸ್ ಭೀತಿಯ ನಡುವೆಯೇ ಎಲ್ಲರೂ ಕಾಲ ದೂರವಂತಾಗಿದೆ. ಮನೆಯಿಂದ ಹೊರಬರುವಂತಿಲ್ಲ, ಮನರಂಜನೆ ಇಲ್ಲ. ಹಾಗೆಂದು ಮನೇಲಿ ಕೂತು ಕೊರಗೋದು ಬೇಡ. 'ಸಾಯಲಿ ಕೊರೊನಾ ಸ್ವಲ್ಪ ಹೊತ್ತು ನಗೋಣ' ಎಂದು ದಿನವೂ ನಮ್ಮನ್ನು ನಗಿಸಲು ಬರುತ್ತಿದ್ದಾರೆ 'ಮಠ' ಖ್ಯಾತಿಯ ನಿರ್ದೇಶಕ ಗುರುಪ್ರಸಾದ್.

    Recommended Video

    ದರ್ಶನ್ ಬಂದು ನಿಂತು ಪ್ರಚಾರ ಮಾಡಿದ್ರು ಯೂಸ್ ಆಗ್ಲಿಲ್ಲ | Vikas | Kanadanthe Maayavadanu | Darshan

    ದೂರದ ಊರಿನ ಫಾರ್ಮ್‌ ಹೌಸ್‌ನಲ್ಲಿ ಕುಳಿತು 'ರಂಗನಾಯಕ' ಚಿತ್ರದ ಚಿತ್ರಕಥೆ, ಸಂಭಾಷಣೆ ಬರೆಯುವ ಕಾರ್ಯದಲ್ಲಿ ಮಗ್ನರಾಗಿರುವ ಗುರುಪ್ರಸಾದ್, ಈಗ ದಿನವೂ ಫೇಸ್‌ಬುಕ್‌ನಲ್ಲಿ ಲೈವ್ ಬರುತ್ತಿದ್ದಾರೆ. ಹಾಗೆ ಬಂದವರು ತಾವು ಕಂಡ, ಕೇಳಿದ ಒಂದಷ್ಟು ತಮಾಷೆಯ ಪ್ರಸಂಗಗಳನ್ನು ಹಂಚಿಕೊಳ್ಳುತ್ತಿದ್ದಾರೆ. ದಿನವೂ ದುಗುಡದಲ್ಲಿ ಇರೋದು ಬೇಡ. ನಕ್ಕು ಮನಸು ಹಗುರಾಗಿಸಿಕೊಳ್ಳೋಣ ಎಂದು ನಗಿಸುತ್ತಿದ್ದಾರೆ. ಅವರು ಹಂಚಿಕೊಂಡ ಕೆಲವು ತಮಾಷೆಯ ಪ್ರಸಂಗಗಳು ಇಲ್ಲಿವೆ.

    ಫ್ಯಾಮಿಲಿ ಅರ್ಥ ಗೊತ್ತಾಗುತ್ತಿದೆ

    ಫ್ಯಾಮಿಲಿ ಅರ್ಥ ಗೊತ್ತಾಗುತ್ತಿದೆ

    FAMILY ಎಂದರೆ ಫಾದರ್ ಆಂಡ್ ಮದರ್ ಐ ಲವ್ ಯೂ ಎಂದು ಯಾರೋ ನನಗೆ ಹೇಳಿದ ತುಂಬಾ ಒಳ್ಳೆಯ ಅರ್ಥ. ಈ ದಿನ ತಂದೆ ತಾಯಿ ಜತೆಗೂಡಿ ಒಳ್ಳೆಯ ಅಡುಗೆ ಮಾಡಿ ಚೆನ್ನಾಗಿ ಊಟ ಮಾಡಿ ಹಬ್ಬವನ್ನು ಸುಖವಾಗಿ ಆಚರಿಸಿದ್ದೀರಿ ಎಂದು ನಂಬಿದ್ದೇನೆ. ಈ ದಿನಗಳಲ್ಲಿ ನಮಗೆ ನಿಜವಾದ ಫ್ಯಾಮಿಲಿ ಅರ್ಥ ಗೊತ್ತಾಗುತ್ತಿದೆ ಎಂದು ಮಾರ್ಮಿಕವಾಗಿ ಹೇಳಿದ್ದಾರೆ.

    ಜಗ್ಗೇಶ್ ನಟನೆಯ 'ರಂಗನಾಯಕ'ನಿಗೆ ರಾಧಿಕಾ ಕುಮಾರಸ್ವಾಮಿ ನಾಯಕಿ?ಜಗ್ಗೇಶ್ ನಟನೆಯ 'ರಂಗನಾಯಕ'ನಿಗೆ ರಾಧಿಕಾ ಕುಮಾರಸ್ವಾಮಿ ನಾಯಕಿ?

    ಕನಕಪುರದಲ್ಲಿ ರಾಜಕೀಯ ಮಾತ್ರ ಆಗೋದು

    ಕನಕಪುರದಲ್ಲಿ ರಾಜಕೀಯ ಮಾತ್ರ ಆಗೋದು

    ನಾನು ಮೂಲತಃ ಕನಕಪುರದವನು. ಕನಕಪುರದಲ್ಲಿ ವಿದ್ಯಾಭ್ಯಾಸ ಡಿಗ್ರಿ ಮುಗಿಸಿಕೊಂಡೆ. ಕನಕಪುರಲ್ಲಿ ಇದ್ದರೆ ಮಾಡಲು ಸಾಧ್ಯವಾಗೋದು ರಾಜಕೀಯ. ಬೇರೇನೂ ಮಾಡಲು ಆಗುವುದಿಲ್ಲ. ಹಾಗೆಂದು ನನಗೆ ಅನಿಸಿ 1993ರಲ್ಲಿ ಬೆಂಗಳೂರು ಬಂದು ಎರಡು ಮೂರು ವರ್ಷ ಸೇಲ್ಸ್‌ಮ್ಯಾನ್ ಆಗಿ ಕೆಲಸ ಮಾಡಿದೆ. ಆನಂತರ ಹಿಂದೂಸ್ತಾನ್ ಲಿವರ್‌ನಲ್ಲಿ ಕೆಲಸ ಮಾಡಿದೆ. ಬಳಿಕ 2000 ಇಸವಿಯಲ್ಲಿ ಟಿಎನ್ ಸೀತಾರಾಮ್ ಅವರ 'ಮನ್ವಂತರ' ಧಾರಾಬಾಯಿ, ಬಳಿಕ ದೇಸಾಯಿ ಅವರ 'ಪರ್ವ' ಸಿನಿಮಾದಲ್ಲಿ ಕೆಲಸ ಮಾಡಿದೆ. 2006ರಲ್ಲಿ 'ಮಠ' ಹೊರಬಂತು. ನನ್ನ ಕಷ್ಟದ ದಿನಗಳಲ್ಲಿ ನನ್ನ ಜತೆ ನಿರಂತರವಾಗಿ ನಿಂತವರು ನನ್ನ ಶಿಷ್ಯರು. ನಮ್ಮ ಕೆಲಸ ಕಾರ್ಯಗಳು ಮಾಡುವ ಹೊತ್ತಲ್ಲಿ ತೊಂದರೆ ಕೊಡಲೆಂದೇ ಇರುತ್ತಾರೆ. ಭಗವಂತ ಅವರನ್ನೂ ಹುಟ್ಟಿಸಿದ್ದಾನೆ ಕೊರೊನಾ ವೈರಸ್ ಥರ. ಈಗ ನನ್ನೊಂದಿಗೆ 40-50 ಶಿಷ್ಯರು ಇದ್ದಾರೆ. ಅವರು ಮಾಡುತ್ತಿದ್ದ ಹಾಸ್ಯಗಳನ್ನು ನೀವು ಕೇಳಿರಲು ಸಾಧ್ಯವಿಲ್ಲ.

    ಮುಂಚೆಯೇ ಹೇಳಬಾರದಿತ್ತಾ?

    ಮುಂಚೆಯೇ ಹೇಳಬಾರದಿತ್ತಾ?

    ಪುನೀತ್ ಎಂಬ ಆರ್ಟ್ ಡೈರೆಕ್ಟರ್, ರಾತ್ರಿ ನಾನು ಒಂದೆರಡು ಪೆಗ್ ಹಾಕುವ ಸಮಯಕ್ಕೆ ಸರಿಯಾಗಿ ಬರುತ್ತಿದ್ದ. ಉಳಿದಿದ್ದು ಅವನು ಮುಗಿಸುತ್ತಿದ್ದ. ರಾತ್ರಿ ಎಂಟು ಗಂಟೆಗೆ ಬರುತ್ತಿದ್ದವನು ಅಂದು ಎಂಟೂವರೆಗೆ ಬಂದ. ಯಾಕೋ ಲೇಟು ಎಂದು ಕೇಳಿದೆ. ಅದೇ ನಮ್ ಹುಡುಗಿ ಸಿಕ್ಕಿದ್ಲು ಅಂದ (ಆತ ಆಗ ಒಂದು ಹುಡುಗಿಯನ್ನು ಲವ್ ಮಾಡುತ್ತಿದ್ದ. ಈಗ ಆಕೆಯ ಕೈಗೆ ಎರಡು ಮಕ್ಕಳನ್ನು ಕೊಟ್ಟಿದ್ದಾನೆ. ಹೈ ಪ್ರೊಡಕ್ಟೀವ್). ಲವ್ ಮಾಡೋ ಆತುರದಲ್ಲಿ ಸಣ್ಣ ಪುಟ್ಟ ಮುತ್ತುಕೊಡು ಪರವಾಗಿಲ್ಲ. ಅದೊಂದು ಮಾಡಬೇಡ ಅಂದೆ. 'ಒಂದು ಅರ್ಧ ಗಂಟೆ ಮುಂಚೆ ಹೇಳಬಾರದಿತ್ತಾ ಗುರುಗಳೇ' ಎಂದ.

    ನನ್ನ-ಗುರು ಜೋಡಿ ಕನ್ನಡಿಗರಿಗೆ ನಗುವಿನ ಹಬ್ಬ: ನವರಸನಾಯಕ ಜಗ್ಗೇಶ್ನನ್ನ-ಗುರು ಜೋಡಿ ಕನ್ನಡಿಗರಿಗೆ ನಗುವಿನ ಹಬ್ಬ: ನವರಸನಾಯಕ ಜಗ್ಗೇಶ್

    ತನ್ನಿಂದ ಅಪ್ಪನಿಗೆ ಘನತೆ

    ತನ್ನಿಂದ ಅಪ್ಪನಿಗೆ ಘನತೆ

    ಇನ್ನೊಬ್ಬ ಅದ್ಭುತ ಬರಹಗಾರ ಪ್ರಶಾಂತ್ ರಾಜಪ್ಪ. 'ಎದ್ದೇಳು ಮಂಜುನಾಥ'ದಲ್ಲಿ ನನಗೆ ಅಸಿಸ್ಟೆಂಟ್. ನಿಂತಲ್ಲೇ ಅದ್ಭುತ ಡೈಲಾಗ್ ಹೇಳುತ್ತಿದ್ದ. ಅವನ ತಂದೆ, 'ಯಾವಾಗಲೂ ಸಿನಿಮಾ ಸಿನಿಮಾ ಎನ್ನುತ್ತಾನೆ. ಒಬ್ಬನೇ ಮಗ ಹಾಳಾಗಿ ಹೋದರೆ ಏನು ಗತಿ? ಉದ್ಧಾರ ಆಗುತ್ತಾನಾ?' ಎಂದು ಕೇಳಿದ್ದರು. 'ಧೈರ್ಯದಿಂದ ಇರಿ, ಟ್ಯಾಲೆಂಟ್ ಹೇಗಿದೆ ನೋಡೋಣ ಎಂದಿದ್ದೆ. ಸಿನಿಮಾ ಸಿದ್ಧವಾಯ್ತು, ಟೈಟಲ್ ಕಾರ್ಡ್ ಹಾಕುವಾಗ 'ಪ್ರಶಾಂತ್ ಹೆಸರಿನವರು ಲಕ್ಷ ಜನ ಇದ್ದಾರೆ. ಹೆಸರಿನ ಮುಂದೆ ತಂದೆ ಹೆಸರು ಹಾಕಿಕೋ. ಮುಂದೆ ನೀನು ಬೆಳೆದಾಗ ಸಿನಿಮಾಕ್ಕೆ ಹೋಗಬೇಡ ಎಂದಿದ್ದ ತಂದೆಯೇ ಖುಷಿ ಪಡಬೇಕು. ಮನೆಗೆ ಹೋಗಿ ಶೋ ಕೊಡಬೇಕು. ಅಮ್ಮನಿಗೆ ಹೇಳು, ನೋಡು ನಿನ್ನ ಯಜಮಾನ ನನ್ನ ಹಾಳಾಗಿ ಹೋಗ್ತಿ ಎನ್ನುತ್ತಿದ್ದ. ನನ್ನ ಹೆಸರಿನ ಮುಂದೆ ಅವನ ಹೆಸರು ಹಾಕಿಕೊಂಡು ಓಡಾಡುತ್ತಿದ್ದೇನೆ. ಅವನ ಹೆಸರಿಗೆ ಘನತೆ ಬಂದಿದೆ ನನ್ನಿಂದ' ಎನ್ನಬಹುದು ಎಂದಿದ್ದೆ.

    ಅವನ ಹೆಸರನ್ನು ಪ್ರಶಾಂತ್ ರಾಜಪ್ಪ ಎಂದು ಹಾಕಿಸಿದೆ. ಅದೇ ಹೆಸರು ನಿರಂತರವಾಗಿ ನಿಂತಿದೆ. 'ವಿಕ್ಟರಿ' ಸಿನಿಮಾದ ಮೂಲಕ ಆತ ಹೆಸರು ಮಾಡಿದ್ದಾನೆ. ಇನ್ನೇನು ತಂದೆಯದ್ದು ಎಲ್ಲವೂ ನಿನ್ನದೇ ಅಲ್ಲವೇ ಬರೆಸಿಕೋ ಎಂದೆ. 'ಹೊಸ ಮನೆ ಮಾಡಿದ್ದಾರೆ. ಖಂಡಿತಾ ಬರೆಸಿಕೊಳ್ಳುತ್ತೇನೆ. ಐದು ವರ್ಷ ತಡೆಯಲಿ. ಅವರು ಮೊದಲು ಸಾಲ ತೀರಿಸಲಿ' ಎಂದ.

    ಕಷ್ಟಪಟ್ಟು ದುಡಿದ ಮಗ!

    ಕಷ್ಟಪಟ್ಟು ದುಡಿದ ಮಗ!

    ನಮ್ಮ ಜತೆಗೊಬ್ಬ ಸಾಪ್ಟ್‌ವೇರ್ ಎಂಜಿನಿಯರ್ ಇದ್ದ. ಆತನೀಗ ಪ್ರೊಡಕ್ಷನ್ ಮ್ಯಾನೇಜರ್. ಮಾತೇ ಕೇಳಿಸುತ್ತಿರಲಿಲ್ಲ ಅಷ್ಟು ಮೆಲುವಾಗಿ ಮಾತನಾಡುತ್ತಿದ್ದ. ಅದೊಂದು ದಿನ ಬೆಳಿಗ್ಗೆ ಇನ್ನೂ ಎದ್ದಿರಲಿಲ್ಲ. ತಂದೆ ಒದ್ದು ಎಬ್ಬಿಸಿದ್ದಾರೆ. 'ಏಳೋ ಸಾಫ್ಟ್‌ವೇರ್ ಎಂಜಿನಿಯರ್ ಆಗಿ ಸಿನಿಮಾ ಎಂದು ಓಡಾಡುತ್ತಿಯ. ಅವರು ನೋಡು ಬೆಳಿಗ್ಗೆ ಐದೂವರೆಗೆ ಹಾಲು, ಪೇಪರ್ ಹಾಕುತ್ತಿದ್ದಾರೆ. ನಿನಗೆ ಒಂದು ರೂ. ದುಡಿಯಲು ಆಗುತ್ತಿಲ್ಲ' ಎಂದರು. ಆತನ ಮನಸು ಪರಿವರ್ತನೆ ಆಯ್ತು. ಸಂಜೆ ಅಪ್ಪ ಬರುವುದನ್ನೇ ಕಾಯುತ್ತಿದ್ದ. ಜೇಬಿನಿಂದ 300 ರೂ ತೆಗೆದು, 200 ರೂ ಅಪ್ಪನಿಗೆ ಕೊಟ್ಟು 100 ರೂ ತಾನಿಟ್ಟುಕೊಂಡ. ಅಪ್ಪನಿಗೆ ಕಣ್ಣುತುಂಬಿ ಗಳಗಳನೇ ಅತ್ತರು. ಇಂದು ಮುನ್ನೂರು ರೂಪಾಯಿ ತಂದವನು, ನಾಳೆ ಮೂರು ಲಕ್ಷ ತರುತ್ತಾನೆ ಎಂದು ಖುಷಿ ಪಟ್ಟರು. ಮಗ, 'ತುಂಬಾ ಖುಷಿ ಪಡಬೇಡಿ, ಪೇಪರ್ ಹಾಕು ಅಂದ್ರಲ್ಲ, ಮನೆಯಲ್ಲಿದ್ದ ಹಳೆ ಪೇಪರ್ ತೂಕಕ್ಕೆ ಹಾಕಿದ್ದೀನಿ. ಮುನ್ನೂರಲ್ಲಿ ಇನ್ನೂರು ನಿಮಗೆ, ನೂರು ನನಗೆ' ಎಂದ. ಆತ ಈಗ ಪ್ರೊಡಕ್ಷನ್ ಮ್ಯಾನೇಜರ್. ಹೆಸರು ಹರೀಶ್ ನಾಗ್. ಐವತ್ತಕ್ಕೂ ಹೆಚ್ಚು ಸಿನಿಮಾಗಳಿಗೆ ಕೆಲಸ ಮಾಡಿದ್ದಾನೆ.

    ಜಗ್ಗೇಶ್- ಗುರುಪ್ರಸಾದ್ ಜೋಡಿಯ 'ರಂಗನಾಯಕ'ನ ಕಥೆ ಏನಾಯ್ತು?ಜಗ್ಗೇಶ್- ಗುರುಪ್ರಸಾದ್ ಜೋಡಿಯ 'ರಂಗನಾಯಕ'ನ ಕಥೆ ಏನಾಯ್ತು?

    ಪುನೀತ ಹನಿಮೂನಿಗೆ ಹೋಗಿದ್ದು...

    ಪುನೀತ ಹನಿಮೂನಿಗೆ ಹೋಗಿದ್ದು...

    ಈ ರೀತಿ ತಂಡ ಕಟ್ಟಿಕೊಂಡು ನಿಭಾಯಿಸುತ್ತಿದ್ದೇನೆಂದರೆ ನಾನು ಹೇಗಿರಬಹುದಲ್ಲ? ಇವರ ಮತ್ತಷ್ಟು ಕಥೆಗಳನ್ನು ಮುಂದಿನ ದಿನಗಳಲ್ಲಿ ಹೇಳುತ್ತೇನೆ. ಈ ಆರ್ಟ್‌ ಡೈರೆಕ್ಟರ್ ಪುನೀತ ಮದುವೆಯಾಗಿ ಹನಿಮೂನಿಗೆ ಹೋದ. ಜಾಸ್ತಿ ಖರ್ಚಾಗುತ್ತದೆ ಎಂದು ಖರ್ಚಿಲ್ಲದೆ ಹನಿಮೂನು ಪ್ಲ್ಯಾನ್ ಮಾಡಿದ. ಹೇಗೂ ಧರ್ಮಸ್ಥಳದಲ್ಲಿ ಭಕ್ತರಿಗೆ ಕಡಿಮೆ ದರದಲ್ಲಿ ರೂಮು ನೀಡುತ್ತಾರೆ. ದೇವಸ್ಥಾನಕ್ಕೂ ಹೋಗಿ ಬಂದಂತೆ ಆಯ್ತು ಎಂದು. ಅಲ್ಲಿಂದ ಫೋನ್ ಮಾಡಿದ. ಅಲ್ಲಯ್ಯಾ ಹನಿಮೂನಿಗೆ ಬೇರೆ ಜಾಗಕ್ಕೆ ಕರೆದುಕೊಂಡು ಹೋಗೋದುಬಿಟ್ಟು ಧರ್ಮಸ್ಥಳಕ್ಕೆ ಕರೆದುಕೊಂಡು ಹೋಗಿದ್ದೆಯಲ್ಲ. ಅಲ್ಲೇನು ತೋರಿಸುತ್ತೀಯಾ ಎಂದು ಕೇಳಿದೆ. 'ಫ್ಯಾನ್' ತೋರಿಸುತ್ತೇನೆ ಎಂದ.

    ತರಕಾರಿ ತೂಕದ ವೆಂಕಟೇಶನ ಕೈನೋವು

    ತರಕಾರಿ ತೂಕದ ವೆಂಕಟೇಶನ ಕೈನೋವು

    ನಮ್ಮಲ್ಲಿ ವೆಂಕಟೇಶ ಎಂಬಾತ ಇದ್ದಾನೆ. ಅವನನ್ನು ತಕ್ಕಡಿಯಲ್ಲಿರಿಸಿ ತರಕಾರಿ ತೂಗಬಹುದು. 20 ಕೆಜಿ ಕೂಡ ಇಲ್ಲ. ಒಮ್ಮೆ ಸುಮ್ಮನೆ ಕೂತಿದ್ದ. ಯಾಕೋ ಹುಷಾರಿಲ್ಲವಾ ಕೇಳಿದೆ. ಅವನು ಯಾವಾಗಲೂ ಹುಷಾರಿಲ್ಲದಂತೆಯೇ ಇರುತ್ತಿದ್ದ. ಕೈನೋವು ಎಂದ. ಏನು ಕೆಲಸ ಕೊಟ್ಟೆ ಎಂದು ಕೇಳಿದೆ. ನನ್ನ ಫ್ರೆಂಡ್ ಗೋಲ್ಗೊಪ್ಪ ಕೊಡಿಸಿದ. ಮೂರು ತಿಂದೆ. ಗೋಲ್ಗೊಪ್ಪ ಎತ್ತಿದ್ದು ಕೈ ನೋವುತ್ತಿದೆ ಎಂದ.

    ಪೈಲ್ಸ್ ಡಾಕ್ಟ್ರ ಕ್ಲಿನಿಕ್‌ನಲ್ಲಿ ಕಮೋಡ್

    ಪೈಲ್ಸ್ ಡಾಕ್ಟ್ರ ಕ್ಲಿನಿಕ್‌ನಲ್ಲಿ ಕಮೋಡ್

    ನನ್ನ ಆತ್ಮೀಯರೊಬ್ಬರಿದ್ದಾರೆ. ಅವರಿಗೆ ಪೈಲ್ಸ್ ಬಂತು. ಅದು ಮುಜುಗರದ ಸಂಗತಿ. ಸರಿ ಒಬ್ಬ ವೈದ್ಯರ ಬಳಿ ಕರೆದುಕೊಂಡು ಹೋಗುವುದಾಗಿ ಹೇಳಿದೆ. ಆ ಡಾಕ್ಟ್ರು ನಗದೇ ಇಲ್ಲ. ಯಾಕೆ ಎಂದರೆ ನಾನು ಕೆಲಸ ಮಾಡುವ ಜಾಗ ಅಂತಹದು ಎಂದರು. ಅವರ ಮುಖವೂ ಹಾಗೆ ಆಗಿಬಿಟ್ಟಿದೆ. ಸರಿ ನಮ್ಮ ಸ್ನೇಹಿತರನ್ನು ಅವರ ಬಳಿ ಕರೆದುಕೊಂಡುಹೋದೆ. ಅಲ್ಲಿ ಕೂರಲು ಕಬ್ಬಿಣದ ಚೇರ್ ಹಾಕಿದ್ದರು. 'ಲೀವ್ ಯುವರ್ ಫೂಟ್‌ವೇರ್ ಔಟ್‌ಸೈಡ್' ಎಂದು ಬೋರ್ಡ್ ಹಾಕಿದ್ದರು.

    ನಾನು ಮೊದಲು ಒಳಗೆ ಹೋದೆ. ಡಾಕ್ಟರ್ ಎಂದಿನಂತೆ ಯೋಗಕ್ಷೇಮ ವಿಚಾರಿಸಿ ಮಾತಾಡಿದರು. ಮುಖದಲ್ಲಿ ಸ್ಮೈಲ್ ಇಲ್ಲ. ಅವರಿಗೆ ಹೇಳಿದೆ, 'ಹೊರಗೆ ಕಬ್ಬಿಣದ ಚೇರು. ಕೂರಲು ಕಷ್ಟ ಆಗುತ್ತದೆ ಕಮೋಡ್ ಟೈಪ್ ಮಾಡಿಸಿ. ಕೂರಲು ಆರಾಮಾಗಿ ಇರುತ್ತದೆ'. ಅದೀಗ ಅಲ್ಲಿ ಜಾರಿಗೆ ಬಂದಿದೆ. 'ಲೀವ್ ಯುವರ್ ಫೂಟ್‌ವೇರ್ ಎಂದು ಹಾಕಿದ್ದೀರಿ, ಅದರ ಬದಲು 'ಲೀವ್ ಯುವರ್ ಅಂಡರ್‌ವೇರ್ ಔಟ್‌ಸೈಡ್' ಎಬ ಫಲಕ ಹಾಕಿ. ನಿಮ್ಮ ಕೆಲಸ ಬೇಗ ಆಗುತ್ತದೆ' ಎಂದೆ .

    ಪೈಲ್ಸ್ ಬಂದ ಪ್ರತಿಯೊಬ್ಬರೂ ಭೀಷ್ಮರು

    ಪೈಲ್ಸ್ ಬಂದ ಪ್ರತಿಯೊಬ್ಬರೂ ಭೀಷ್ಮರು

    ಸ್ನೇಹಿತರನ್ನು ಕರೆದುಕೊಂಡು ಹೋಗಿ ಪರಿಚಯಿಸಿದೆ. ನೀವು ಇಲ್ಲೇ ಇರ್ತೀರಾ ಎಂದು ಕೇಳಿದರು. ನಾನ್ಯಾಕೆ ನೋಡಲಿ ಎಂದು ಹೊರಗೆ ಬಂದೆ. ತಪಾಸಣೆ ಮುಗಿದ ಬಳಿ ಒಳಗೆ ಕರೆದರು. ನಾಲ್ಕನೇ ಸ್ಟೇಜ್. ಆಪರೇಷನ್ ಮಾಡಬೇಕು ಎಂದರು. ಮಾಡಿ. ಅವರು ನೆಮ್ಮದಿಯಿಂದ ಗಾಡಿ ಓಡಿಸುವಂತೆ ಆಗಲಿ ಎಂದೆ. ಬಳಿಕ ಡಾಕ್ಟ್ರು, ಪೈಲ್ಸ್ ಬಗ್ಗೆ ನಿಮ್ಮ ಅಭಿಪ್ರಾಯ ಎಂದು ಕೇಳಿದರು. 'ಪೈಲ್ಸ್ ಬಂದ ಪ್ರತಿಯೊಬ್ಬರೂ ಭೀಷ್ಮ. ಅವರ ಜೀವನ ಮುಳ್ಳಿನ ಮೇಲೆಯೇ ನಿಂತಿರುತ್ತದೆ.

    ಅಕುಲ್ ಬಾಲಾಜಿ ತೂಕ ಜಾಸ್ತಿ

    ಅಕುಲ್ ಬಾಲಾಜಿ ತೂಕ ಜಾಸ್ತಿ

    ಬಿಗ್‌ ಬಾಸ್‌ನಲ್ಲಿ ನಡೆದಿದ್ದು ಇದು. ಅಲ್ಲಿ ಯಾವಾಗಲೂ ತಿನ್ನುವುದಕ್ಕೆ ಸಮಸ್ಯೆ ಇರುತ್ತಿತ್ತು. ನಾನು ಯಾವಾಗಲೂ ತಿನ್ನುತ್ತಿರಲಿಲ್ಲ. ಸಿಕ್ಕಾಗ ತಿನ್ನಬೇಕು. ಆದರೆ ಕ್ಯಾಮೆರಾ ಮಾತ್ರ ನಾವು ತಿನ್ನುವುದನ್ನೇ ತೋರಿಸುತ್ತಿತ್ತು. ಅಲ್ಲಿ ಬೆಳಿಗ್ಗೆ ಒಂದು ದೊಡ್ಡ ಲೋಟ ಹಾಲು ಕೊಡುತ್ತಿದ್ದರು. ಸಾದು ಎರಡು ನಿಮಿಷದಲ್ಲಿ ಮುಗಿದು ಹೋಗುತ್ತಿತ್ತು. ಅದಕ್ಕೆ ನಾನು ಸಕ್ಕರೆ ಹಾಕಿ ಸಲಾಡ್ ರೀತಿ ಫ್ರೀಜರ್‌ನಲ್ಲಿ ಇಟ್ಟು ಐಸ್‌ಕ್ರೀಂ ಥರ ಮಾಡಿಕೊಂಡು ನೆಮ್ಮದಿಯಿಂದ ಕುಳಿತು ತಿನ್ನುತ್ತಿದೆ. ಆಗ ಹೆಚ್ಚು ಹೊತ್ತು ತಿನ್ನಬಹುದಲ್ಲ. ಅದನ್ನು ಅಕುಲ (ಅಕುಲ್ ಬಾಲಾಜಿ) ನೋಡಿದ. ನಾನೂ ಹಾಗೆ ಮಾಡುತ್ತೇನೆ ಎಂದ.

    ಮರುದಿನ ನಾನು ಚೇರಲ್ಲಿ ಕುಳಿತು ತಿನ್ನುತ್ತಿದ್ದರೆ ಅವನು ಶ್ವೇತಾ ಚೆಂಗಪ್ಪ, ಸೃಜನ ಅವರಿಗೆಲ್ಲ ತಿನ್ನಿಸುಕೊಂಡು ಬಂದ. ಅರ್ಧ ಮಾತ್ರ ಉಳಿದಿತ್ತು. 'ಅಲ್ಲೋ, ಸಿಗೋದೇ ಸ್ವಲ್ಪ. ಅದನ್ನೂ ಅವರಿಗೆಲ್ಲ ಕೊಟ್ಟೆಯಲ್ಲ' ಎಂದು ಕೇಳಿದೆ. ಆ ಹಾಲು ಅವರದ್ದೇ ಎಂದ. ಕಳ್ಳ ಅದನ್ನು ಕದ್ದುಕೊಂಡು ಬಂದಿದ್ದ. ಬಿಗ್‌ಬಾಸ್ ನಿಂದ ಹೊರಬಂದಾಗ ಎಲ್ಲರೂ 8-10 ಕೆಜಿ ಡೌನ್ ಆಗ್ತಾರೆ. ಆದರೆ ಅಕುಲ 9ಕೆಜಿ ಜಾಸ್ತಿ ಆಗಿದ್ದ.

    ಪ್ರೀತಿ-ಪ್ರೇಮ ಬಾತ್

    ಪ್ರೀತಿ-ಪ್ರೇಮ ಬಾತ್

    ಫಾರ್ಮ್ ಹೌಸ್‌ಒಂದರಲ್ಲಿ ವಾಂಗಿ ಬಾತ್ ಮಾಡಿಕೊಳ್ಳುವುದನ್ನು ಗುರುಪ್ರಸಾದ್ ಲೈವ್‌ನಲ್ಲಿ ತೋರಿಸಿದ್ದರು. ಇದಕ್ಕೆ ಅವರು ಪ್ರೀತಿ ಪ್ರೇಮ ಬಾತ್ ಎಂಬ ಹೆಸರಿಟ್ಟಿದ್ದಾರೆ. ಯಾವಾಗ ಉಪೇಂದ್ರ, 'ಈ ಪ್ರೀತಿ ಪ್ರೇಮ ಎಲ್ಲ ಬದನೆಕಾಯಿ' ಅಂದರೋ ಆಗಿನಿಂದ ನಾನು ವಾಂಗಿ ಬಾತ್‌ಗೆ ಪ್ರೀತಿ ಪ್ರೇಮ ಬಾತ್ ಎಂಬ ಹೆಸರು ಇಟ್ಟಿದ್ದೇನೆ ಎಂದರು.

    ಮೂರು ನಾಲ್ಕು ದಿನ ಆಗಿತ್ತು ಸ್ನಾನ ಮಾಡದೆ, ಹಲ್ಲುಜ್ಜದೆ. ಇಂದು ಹಬ್ಬದ ಕಾರಣ ಸ್ನಾನ ಮಾಡಬೇಕು. ಯಾವತ್ತೂ ಏನನ್ನೂ ಕೇಳಿಲ್ಲ. ಇಂದಾದರೂ ಸ್ನಾನ ಮಾಡಿ ಎಂದು ನಮ್ಮ ಹುಡುಗರು ಹೇಳ್ತಿದ್ದಾರೆ ಎಂದು ಗುರು ಚಟಾಕಿ ಹಾರಿಸಿದ್ದಾರೆ.

    English summary
    Director Mata Guruprasad is making people smile by some jokes on Facebook.
    Thursday, March 26, 2020, 11:35
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X