Don't Miss!
- Lifestyle ನೀವು ಸಹ ಈ ಶರ್ಬತ್ನ ರುಚಿ ಸವಿದಿದ್ದೀರಾ..? ಮರೆಯಾಯ್ತು ಈ ಹಳೆಯ ನೆನಪು
- Automobiles ಕಂಪನಿಗೆ 140ರ ಸಂಭ್ರಮ: ಕೇವಲ 140 ವಿಶೇಷ ಆವೃತ್ತಿಗಳು ನಿರ್ಮಾಣ: ಬುಕಿಂಗ್ ಆರಂಭ
- Sports LSG vs CSK IPL 2024: ಲಕ್ನೋ vs ಚೆನ್ನೈ ಮಹಾಕದನ; ಟಾಸ್ ವರದಿ, ಆಡುವ 11ರ ಬಳಗ
- News Annamalai: ಒಂದು ಲಕ್ಷ ಮತದಾರರ ಹೆಸರು ಪಟ್ಟಿಯಿಂದ ಕಾಣೆಯಾಗಿದೆ: ಅಣ್ಣಾಮಲೈ ಆರೋಪ
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಬೀರ್ ಬಲ್' ಸಿನಿಮಾಗೆ ಹಾಡು ಬರೆಯುವ ಅವಕಾಶ
ತುಂಬ ಜನ ಯುವ ಸಾಹಿತಿಗಳು ಈಗ ಚಿತ್ರರಂಗಕ್ಕೆ ಬರುತ್ತಿದ್ದಾರೆ. ನಮ್ಮ ಜೊತೆಗೆ ಇರುವ ಅನೇಕರು ಹಾಡು ಬರೆಯುವ ಹವ್ಯಾಸ ಹೊಂದಿರುತ್ತಾರೆ. ಒಳ್ಳೆ ಒಳ್ಳೆಯ ಸಾಲುಗಳನ್ನು ಬರೆಯುವ ಕೆಲವರಿಗೆ ಒಳ್ಳೆಯ ಅವಕಾಶಗಳು ಮಾತ್ರ ಸಿಕ್ಕಿರುವುದಿಲ್ಲ. ಆದರೆ ಈಗ ಅಂತಹ ಯುವ ಚಿತ್ರಸಾಹಿತಿಗಳಿಗೆ ಒಂದು ಸುವರ್ಣಾವಕಾಶ ಬಂದಿದೆ.
ಕನ್ನಡದ ಹೊಸ ಸಿನಿಮಾ 'ಬೀರ್ ಬಲ್' ಚಿತ್ರಕ್ಕೆ ಹಾಡು ಬರೆಯುವ ಅವಕಾಶ ಇಲ್ಲಿದೆ. ಶ್ರೀನಿ ನಿರ್ದೇಶನ ಮಾಡುತ್ತಿರುವ ಈ ಚಿತ್ರಕ್ಕಾಗಿ ಹೊಸ ಗೀತರಚನೆಕಾರರನ್ನು ಹುಡಕಲಾಗುತ್ತಿದೆ.
''ಸ್ಕೂಲ್, ಕಾಲೇಜ್ ನಲ್ಲಿ ಲವ್ ಲೆಟರ್ ಗಳನ್ನ ಬರೆದಿರುವ ಎಲ್ಲಾ ಪುಣ್ಯಾತ್ಮರಿಗೂ ಇಲ್ಲೊಂದು ಸದಾವಕಾಶ. ಆಗ ನಿಮ್ಮ ಹೀರೋಯಿನ್ ಮೇಲೆ ಹಾಡು ಬರೆದಿದ್ರಿ ಈಗ ನಮ್ಮ ಹೀರೋಯಿನ್ ಮೇಲೆ ಹಾಡು ಬರಿಬೇಕು.. ತುಂಬಾ ತರಲೆನೆಸ್ ನಿಮ್ಮಲ್ಲಿದೆ ಅಂತ ಅನ್ನಿಸಿದ್ದಲ್ಲಿ, ನಿಮ್ಮ ಪ್ರತಿಭೆಯನ್ನು ನಾಲ್ಕು ಸಾಲುಗಳಲ್ಲಿ ನಮಗೆ ([email protected]) inbox ಮಾಡಿ'' ಎಂದು ಚಿತ್ರತಂಡ ಒಂದು ಆಫರ್ ನೀಡಿದೆ.
'ಟೋಪಿವಾಲ' ಹಾಗೂ 'ಶ್ರೀನಿವಾಸ ಕಲ್ಯಾಣ' ಸಿನಿಮಾಗಳ ನಂತರ ಮತ್ತೆ ಶ್ರೀನಿ ಈ ಚಿತ್ರ ಮಾಡಿದ್ದಾರೆ. ಈ ಸಿನಿಮಾದಲ್ಲಿ ನಿರ್ದೇಶಕನು ಅವರೇ ನಾಯಕನು ಅವರೇ ಆಗಿದ್ದಾರೆ. ರುಕ್ಮಿಣಿ ಈ ಸಿನಿಮಾದಲ್ಲಿ ಶ್ರೀನಿಗೆ ಜೋಡಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಚಂದ್ರಶೇಖರ್ ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ.